ನವದೆಹಲಿ(ಮೇ 29): ಕೇವಲ 10 ನಿಮಿಷಗಳಲ್ಲೇ ಇ ಪಾನ್‌ ಕಾರ್ಡ್‌ ನಂಬರ್‌ ಒದಗಿಸುವ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಚಾಲನೆ ನೀಡಿದರು.

ಮೊಬೈಲ್‌ ಸಂಖ್ಯೆ ಲಿಂಕ್‌ ಆಗಿರುವ, ಸೂಕ್ತ ಆಧಾರ್‌ ಕಾರ್ಡ್‌ ಹೊಂದಿರುವ ವ್ಯಕ್ತಿಗಳು ಈ ಸೌಲಭ್ಯ ಬಳಸಿಕೊಳ್ಳಬಹುದು. ಇದು ಆಧಾರ್‌ ಆಧರಿತ ಇ ಕೆವೈಸಿ ರೂಪದಲ್ಲಿ ನಿರ್ವಹಣೆಯಾಗುತ್ತದೆ.

ತವರಿಗೆ ಮರಳುವ ವಲಸೆ ಕಾರ್ಮಿಕರಿಗೆ ಪ್ರಯಾಣ ಶುಲ್ಕವಿಲ್ಲ..! ಸುಪ್ರೀಂ ಸಾಂತ್ವನ

ಈ ಸೌಲಭ್ಯ ಸಂಪೂರ್ಣ ಉಚಿತವಾಗಿರುತ್ತದೆ. ಕಳೆದ ಬಜೆಟ್‌ನಲ್ಲೇ ಘೋಷಿಸಿದ್ದ ಈ ಯೋಜನೆ ಈಗಾಗಲೇ ಪ್ರಾಯೋಗಿಕ ರೂಪದಲ್ಲಿ ಜಾರಿಯಲ್ಲಿದೆ. ಇದರ ಮೂಲಕ ಈಗಾಗಲೇ 6.77 ಲಕ್ಷ ಜನರಿಗೆ ಇ ಪಾನ ವಿತರಿಸಲಾಗಿದೆ.