Asianet Suvarna News Asianet Suvarna News

ತಾಳೆಗರಿಯಲ್ಲಿ ಮೈಸೂರಿನ ಇತಿಹಾಸ ಹೇಳಿದ ಬೆಂಗಳೂರಿನ ಯುವಕ!

  • ತಾಳೆಗರಿಯಲ್ಲಿ ಮೈಸೂರಿನ ಇತಿಹಾಸ ಹೇಳಿದ ಬೆಂಗಳೂರಿನ ಯುವಕ!
  • -ಮೈಸೂರು ಮತ್ತು ಬೆಂಗಳೂರು ಆವೃತ್ತಿಗೆ ಬಳಸಿ-
  • -ವಿದ್ಯಾರ್ಥಿಗಳಲ್ಲಿ ಇತಿಹಾಸ ಕುತೂಹಲ ಕೆರಳಿಸುವ ಕಾರ‍್ಯ
A young man from Bangalore who told the history of Mysore rav
Author
First Published Oct 10, 2022, 11:43 AM IST | Last Updated Oct 10, 2022, 11:44 AM IST

ಬೆಂಗಳೂರು (ಅ.10) : ಒಡೆಯರ ಭಾವಚಿತ್ರಗಳು, ದಿವಾನರ ಕಾಲಾವಧಿ, ನಾಡಿನ ಹಲವು ಪ್ರಥಮಗಳ ಮಾಹಿತಿ..ಬೆಂಗಳೂರಿನ ಜಯನಗರ ನಿವಾಸಿ ಎಸ್‌.ಹರೀಶಕುಮಾರ್‌ ಅವರು ತಾಳೆಗರಿ ವಿನ್ಯಾಸದಲ್ಲಿ ರೂಪಿಸಿದ ‘ಸಾಂಸ್ಕೃತಿಕ ಕಲೆಗಳ ನಾಡು ಮೈಸೂರು ಪರಂಪರೆಯ ಗತವೈಭವದ ಬೀಡು’ ಒಳಗೊಂಡ ಹೂರಣವಿದು.

ಛಾಯಾಗ್ರಹಣ ಹಾಗೂ ವೃತ್ತಿರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಇವರು ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿ ಆ ಮೂಲಕ ಕಲಿಕೆಗೆ ಸಹಕಾರಿ ಆಗುವಂತೆ ಮಾಡಿದ್ದಾರೆ. ಅದರಲ್ಲಿ ಮೈಸೂರು ಒಡೆಯರ ಕಾಲದ ಇತಿಹಾಸ ಕಟ್ಟಿಕೊಟ್ಟಿದ್ದಾರೆ. ಮೈಸೂರನ್ನಾಗಳಿದ 25 ಅರಸರು, ಯದುರಾಯರಿಂದ ಹಿಡಿದು ಈಗಿನ ಯದುವೀರರ ಕುರಿತ ಅಂಶಗಳು. ದಿವಾನರ ಕಾಲಾವಧಿ, ಆಗಿನ ಸುಧಾರಣೆ, ಪ್ರಮುಖ ಬದಲಾವಣೆ ಬಗ್ಗೆ ತಿಳಿಸಿದ್ದಾರೆ. ಜತೆಗೆ ಹೈದರಲಿ ಮರಣ, ಟಿಪ್ಪು ಮೊದಲು ಯುದ್ಧದಲ್ಲಿ ರಾಕೆಟ್‌ ಬಳಸಿದ್ದು, ಚಿನ್ನದ ಗಣಿಗಾರಿಕೆ ಕುರಿತ ಮಾಹಿತಿ ಇದೆ. ತಾಳೆಗರಿ ವಿನ್ಯಾಸದ 30 ಹಾಳೆಯಲ್ಲಿ ಪ್ರಮುಖ ಘಟನಾವಳಿ ತಿಳಿಸಲಾಗಿದೆ.

‘ವಿದ್ಯಾರ್ಥಿಗಳಲ್ಲಿ ನಮ್ಮ ಇತಿಹಾಸದ ಬಗ್ಗೆ ಕುತೂಹಲ ಮೂಡಿಸುವುದು ನನ್ನ ಉದ್ದೇಶ. ಅದಕ್ಕಾಗಿ ಎರಡು ವರ್ಷದ ಅವಧಿಯಲ್ಲಿ ಸುಧಾರಣೆ ಮಾಡಿಕೊಳ್ಳುತ್ತಾ ಅಂತಿಮವಾಗಿ ಡಾಟೆಡ್‌ ಟೆಕ್ಶ$್ಚರ್‌ ಬೋರ್ಡ್‌ನಲ್ಲಿ ತಾಳೆಗರಿ ಮಾದರಿ ವಿನ್ಯಾಸಗೊಳಿಸಿದ್ದೇನೆ. ಮೈಸೂರು ಅರಸರ ಆಡಳಿತದ ಅರಿವು ಮೂಡಿಸಲು ಟೈಮ್‌ಲೈನ್‌ ಸ್ವರೂಪದಲ್ಲಿ ತಿಳಿಸಿದ್ದೇನೆ’ ಎಂದು ಎಸ್‌.ಹರೀಶಕುಮಾರ ವಿವರಿಸಿದರು.

ಮುಂದೆ ವಿಜಯನಗರ ಇತಿಹಾಸವನ್ನು ಇದೆ ಮಾದರಿಯಲ್ಲಿ ರೂಪಿಸುವ ಉದ್ದೇಶವಿದೆ. ಸಧ್ಯ ಪ್ರಾಥಮಿಕ, ಪ್ರೌಢ ಶಾಲೆಗೆ ತೆರಳಿ ಶಿಕ್ಷಕರಿಗೆ ಇದರ ಬಗ್ಗೆ ತಿಳಿಸಲಾಗುವುದು. ಬಹುಮಾನ ಸ್ವರೂಪದಲ್ಲಿ ಮಕ್ಕಳಿಗೆ ನೀಡಲು ಹೇಳುತ್ತೇವೆ. ವಿದ್ಯಾರ್ಥಿಗಳಿಗೆ ಸಿಗುವಂತೆ ಕಡಿಮೆ ಬೆಲೆ ನಿಗದಿಸಿದ್ದೇವೆ’ ಎಂದು ಅವರು ತಿಳಿಸಿದರು.

Mysuru Dasara: ದಸರಾ ಅಂತ್ಯ, ಲಾರಿ‌ ಹತ್ತಲು ಹಟ ಹಿಡಿದು ಕುಳಿತ 'ಶ್ರೀರಾಮ'

Latest Videos
Follow Us:
Download App:
  • android
  • ios