Asianet Suvarna News Asianet Suvarna News

ಕುಡುಕ ಪತಿಗೆ ತಕ್ಕ ಪಾಠ ಕಲಿಸಿದ ಪತ್ನಿ: ಹೆಂಡತಿ ವೈಲೆಂಟ್‌ಗೆ ಗಂಡ ಸೈಲೆಂಟ್

* ಪತಿಯ ಕುಡಿತದ ಚಟ ಬಿಡಿಸಲು ಮಾಸ್ಟರ್ ಪ್ಲಾನ್ ಮಾಡಿದ ಪತ್ನಿ.
* ಪತಿ ಮನೆಯಿಂದ ಹೊರ ಹೋಗದಂತೆ ಸರಪಳಿ ಬಿಗಿದು ಕಂಬಕ್ಕೆ ಕಟ್ಟಿ ಹಾಕಿದ ಪತ್ನಿ ಅಮೃತಾ.
* ನೆರೆಹೊರೆಯವರ ಆರೋಪವನ್ನೂ ಲೆಕ್ಕಿಸದೇ ಗಂಡನಿಗೆ ಶಾಸ್ತಿ ಮಾಡಿದ ಧೀರೆ
 

A wife who taught a drunken husband a proper lesson wife violent husband silent sat
Author
First Published Jan 5, 2023, 11:30 AM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿತ್ರದುರ್ಗ (ಜ.05): ಇತ್ತೀಚಿನ ದಿನಗಳಲ್ಲಿ ಗಂಡನ ಅತಿಯಾದ ಕುಡಿತದ ಚಟದಿಂದ ಅದೆಷ್ಟೋ ಮನೆಗಳಲ್ಲಿ ಹೆಂಡತಿಯ ಮೇಲೆ ನಿತ್ಯ ಕಿರುಕುಳಗಳು ಆಗುತ್ತಲೆ ಇರುತ್ತವೆ. ಆದ್ರೆ ಇಲ್ಲೊಂದು ಮಹಿಳೆ ಮಾಡಿರೋ ಆ ಒಂದು ಕೆಲಸ ನೋಡಿದ್ರೆ ಸಾಕು ಮದ್ಯಪಾನ ಸೇವೆನೆ ಮಾಡಿ ಮಹಿಳೆ ಮೇಲೆ ಹಲ್ಲೆ ಮಾಡೋ ಮಹಾನ್ ಪುರುಷರು ಕೊಂಚ ತಣ್ಣಗಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟಕ್ಕೂ ಆಕೆ ಮಾಡಿರೋ ಉತ್ತಮ ಕಾರ್ಯವಾದರೂ ಏನು ಅಂತೀರಾ ಈ ವರದಿ ನೋಡಿ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ವಾಸಿ ಸರಪಳಿಯ ಮೂಲಕ ಕಾಲಿಕೆ ಕಟ್ಟಿ ಹಾಕಿಸಿಕೊಂಡು ಮಾಡಿದ ತಪ್ಪಿನ ಅರಿವಾಗಿ ಸುಮ್ಮನೇ ಕುತಿರೋ ಉಮೇಶ.  ಹಿರಿಯೂರು ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಅಮೃತಾ ಎಂಬಾಕೆಯನ್ನು ಮದುವೆ ಆದಾಗಿನಿಂದ‌ ನಿತ್ಯ ಕುಡಿತದ ದಾಸನಾಗಿ ಹಾಳಾಗಿದ್ದನು. ಇಂದು ಸರಿ ಹೋಗ್ತಾನೆ, ನಾಳೆ ಸರಿ ಹೋಗಬಹುದು ಎಂದು ಹೆಂಡತಿಯ ಕುಟುಂಬಸ್ಥರು ಸುಮ್ಮನೆ ಇದ್ದರು. ಆದರೆ ನಿತ್ಯ ಬಂದು ಪತ್ನಿಗೆ ಕಿರುಕುಳ ಕೋಡೊದಕ್ಕೆ ಶುರು ಮಾಡಿದ್ದನ್ನ ಕಂಡ ಹೆಂಡತಿಯ ಕುಟುಂಬಸ್ಥರು ಇವನಿಗೆ ತಕ್ಕೆ ಶಿಕ್ಷೆ ಕೊಡಬೇಕು ಎಂದು ತಮ್ಮ ಮಗಳಿಗೆ ತಿಳಿಸಿದ್ದಾರೆ. 

New year 2023: ಹೊಸ ವರ್ಷಾಚಾರಣೆ : ಒಂದೇ ದಿನದಲ್ಲಿ ₹183 ಕೋಟಿ ರು. ಮೌಲ್ಯದ ಮದ್ಯ ಮಾರಾಟ!

ಸರಪಳಿಯಿಂದ ಕಂಬಕ್ಕೆ ಕಟ್ಟಿ ಹಾಕಿದ ಪತ್ನಿ: ಆಗ ಉಪಾಯದಿಂದ ಮನೆಗೆ ಕರೆಸಿಕೊಂಡ ಪತ್ನಿ ಅಮೃತಾ ಆತನಿಗೆ ಸರಿಯಾಗಿ ಥಳಿಸಿ, ಮನೆಯಿಂದ ಹೊತ ಹೋಗದಂತೆ ಮನೆಯಲ್ಲೇ ಇರುವ ಕಂಬಕ್ಕೆ ಆತನ ಕಾಲಿಗೆ ಸರಪಳಿ ಹಾಕಿ ಕಟ್ಟಿ ಹಾಕಿದ್ದಾಳೆ. ಈ ಮೂಲಕ ತನ್ನ ಗಂಡನಿಗೆ ಇದ್ದ ಮದ್ಯಸೇವನೆಯ ಚಟ ಬಿಡಿಸೋದಕ್ಕೆ ಮಾಸ್ಟರ್ ಪ್ಲಾನ್‌ ಮಾಡಿದ್ದು, ಕುಡುಕ ಪರಿಗರ ಶಾಕ್ ಕೊಟ್ಟಿದ್ದಾಳೆ. ಮನೆಯಿಂದ ಹೊರ ಹೋದರೆ ತಾನೇ ನೀನು ಕುಡಿದು ಮನೆಗೆ ಬರೋದು. ನಂತರ ನೀನು ಅವ್ಯಾಚ್ಯವಾಗಿ ನಿಂದಿಸಿ ಕಿರುಕುಳ ನೀಡುವುದು. ಹೀಗಾಗಿ, ಮನೆಯಲ್ಲೇ ಸರಪಳಿ ಬಿಗಿದು ಕೂಡಿ ಹಾಕುವ ಮೂಲಕ ತನ್ನ ಗಂಡನಿಗೆ ತಕ್ಕ ಪಾಠ ಕಲಿಸಿದ್ದಾಳೆ. 

ಸುಳ್ಳು ವದಂತಿ ಹಬ್ಬಿಸಿದವರಿಗೂ ಪಾಠ: ಈ ಕುರಿತು ಅನೇಕರು ಅಮೃತಾಳ ಗಂಡ ಉಮೇಶ ನಿಗೆ ಅಮಾನವೀಯವಾಗಿ ಥಳಿಸಿ ಕಿರುಕುಳ‌ ಕೊಡಲಾಗುತ್ತಿದೆ ಎಂದು ಸುಳ್ಳು ವದಂತಿ ಹಬ್ಬಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಮೃತಾಳ ಕುಟುಂಬಸ್ಥರು, ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆಗೆ ಖುದ್ದು ತಾವೇ ಭೇಟಿ ನೀಡಿ ಘಟನೆಯ ವಿವರ ತಿಳಿಸಿದ್ದಾರೆ. ಅಲ್ಲದೇ ಸ್ವತಃ ಅಮೃತಾಳ ಗಂಡ ಕುಡುಕ ಉಮೇಶ್ ಕೂಡ ತನ್ನ ಹೆಂಡತಿ ನಾನು ಕುಡಿಯುವುದನ್ನು ಬಿಡಿಸುವ ಸಲುವಾಗಿ ಈ ರೀತಿ ಮಾಡಿದ್ದಾರೆ ವಿನಃ ಇದರಲ್ಲಿ ಯಾವುದೇ ಅಮಾನವೀಯ ಘಟನೆ ನಡೆದಿಲ್ಲ ಎಂದು ಪೊಲೀಸರ ಮುಂದೆ ಸತ್ಯ ಬಾಯಿ ಬಿಟ್ಟಿದ್ದಾನೆ.

ಸ್ನೇಹಿತರ ಜೊತೆ ಕುಡಿಯುತ್ತ ಕುಳಿತಿದ್ದ ಕುಡುಕನ ಹೊತ್ತೊಯ್ದ ಹುಲಿ

ಕುಡುಕ ಮಹಾಶಯರಿಗೆ ಈ ಘಟನೆ ಸೂಕ್ತ ಪಾಠ: ಸುಖಾ ಸುಮ್ಮನೇ ಅಮೃತಾಳ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿರುವ ವ್ಯಕ್ತಿಯ ಮೇಲೆ ಪೊಲೀಸ್ ಠಾಣೆ ಮುಂದೆಯೇ ಸರಿಯಾಗಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ನಮ್ಮ ಮನೆಯ ವಿಷಯಕ್ಕೆ ಮೂಗು ತೂರಿಸುವುದನ್ನು ಬಿಟ್ಟು ನಿಮ್ಮ ಕೆಲಸ ನೀವು ಮಾಡಿ ಎಂದು ಸ್ವತಃ ಅಮೃತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇನೆ ಇರ್ಲಿ ವೀಕ್ಷಕರೇ‌ ಕುಡಿದು ಬಂದು ಮನೆಯಲ್ಲಿ ಹೆಂಡತಿ ಮೇಲೆ ದರ್ಪ ತೋರಿಸ್ತಿದ್ದ ಮಹಾನುಭಾವರು ಒಮ್ಮೆ ಈ ಸ್ಟೋರಿ ನೋಡಿದ್ರೆ ತುಂಬಾ ಒಳ್ಳೆಯದು ಅನ್ಸುತ್ತೆ. ಎನಿ ವೇ ಇನ್ನಾದ್ರು ಉಮೇಶ ಕುಡಿತದ ಚಟ ಬಿಟ್ಟು ನೆಮ್ಮದಿಯಾಗಿ ಸಂತೋಷದ ಸಂಸಾರ ನಡೆಸಲಿ ಎಂಬುದು ನಮ್ಮ ಆಶಯ.

Follow Us:
Download App:
  • android
  • ios