ಬಂಟ್ವಾಳ: ಅನುಮಾನ ಮೂಡಿಸಿದ ಅನಾಥ 'ಇನ್ನೋವಾ': ಬ್ಲ್ಯಾಕ್ ಲಿಸ್ಟ್ ಕಾರಿನ ಬಗ್ಗೆ ಊಹಾಪೋಹಾ!

ಬಿ.ಸಿ.ರೋಡಿನ ಭಾರತ್ ಸ್ಟೋರ್ಮುಂಭಾಗದಲ್ಲಿ ಪ್ಲೈ ಓವರ್ ನ ಅಡಿಭಾಗದಲ್ಲಿ ಅನಾಥವಾಗಿ ನಿಂತಿರುವ ಕೇರಳ ನೋಂದಾಣಿಯ ಟೊಯೋಟಾ ಇನೋವಾ ಕಾರೊಂದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ ಇದು ಇತ್ತೀಚೆಗೆ ನಾಪತ್ತೆಯಾಗಿದ್ದ ಸ್ಯಾಂಟ್ರೋ ರವಿ ಅವರಿಗೆ ಸೇರಿದ ಕಾರು ಎಂಬ ವದಂತಿ ಹರಡಿದೆ. 

A suspicious car was found on B C Road Mangalore rav

ಮಂಗಳೂರು (ಜ.19): ಟೊಯೋಟಾ ಇನೋವಾ ಕಾರೊಂದು ಕಳೆದ ಕೆಲವು ದಿನಗಳಿಂದ ವಾರಿಸುದಾರರಿಲ್ಲದೇ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ ಅನಾಥವಾಗಿ ನಿಂತುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಈ ಕಾರಿನ ಬಗ್ಗೆ ಸಾಕಷ್ಟು ಸಂಶಯಗಳು ಮೂಡುವುದರ ಜೊತೆಗೆ ಊಹಾಪೋಹಗಳು ಕೇಳಿ ಬಂದಿದೆ.

ಬಿ.ಸಿ.ರೋಡಿ(B.C.Raod)ನ ಭಾರತ್ ಸ್ಟೋರ್(Bharat store) ಮುಂಭಾಗದಲ್ಲಿ ಪ್ಲೈ ಓವರ್ ನ ಅಡಿಭಾಗದಲ್ಲಿ ಕೇರಳ ನೋಂದಾಣಿ(Kerala Register)ಯ ವಾಹನ ಅನಾಥ ರೀತಿಯಲ್ಲಿ ನಿಂತುಕೊಂಡಿದೆ. ಸಾರ್ವಜನಿಕ ವಲಯದಲ್ಲಿ ಇದು ಇತ್ತೀಚೆಗೆ ಬಾರೀ ಸುದ್ಧಿಯಾಗಿದ್ದ, ಸ್ಯಾಂಟ್ರೋ ರವಿ(Santro ravi) ಅವರಿಗೆ ಸೇರಿದ ಕಾರು ಎಂಬ ವದಂತಿ ಹರಡಿದೆ. 

ಮಂಗಳೂರು: ಮನೆಗೆ ನುಗ್ಗಿ ದಲಿತ ಯುವತಿ ಹತ್ಯೆ; ಪಾಗಲ್ ಪ್ರೇಮಿ ಅರೆಸ್ಟ್!

ಅಸಲಿಗೆ ಇದು  ಕೇರಳ ಮೂಲದ ಸಬೀಬ್ ಅಶ್ರಫ್(Sabib Ashraf) ಎಂಬರ ಹೆಸರಿನಲ್ಲಿ ಈ ಕಾರಿನ ದಾಖಲೆ ತೋರಿಸುತ್ತಿದೆ. ಕೆ.ಎಲ್.14 ವೈ.8999 ನಂ.ಕಾರು ಕೇರಳ ಸರಕಾರದ ಆರ್.ಟಿ.ಒ.ಯಲ್ಲಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿದೆ. ಕೇರಳದ ಎರ್ನಾಕುಲಂ ಆರ್.ಟಿ.ಓ ವ್ಯಾಪ್ತಿಯಲ್ಲಿ ಓವರ್ ಸ್ಪೀಡ್ ಸಂಬಂಧ ದಂಡ ಪಾವತಿ ಸೇರಿ ಇಲಾಖೆ ಕೆಲವೊಂದು ಕಾರಣಗಳನ್ನು ನೀಡಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಿದ ದಾಖಲೆ ತೋರಿಸುತ್ತಿದೆ. 

ಸ್ಯಾಂಟ್ರೋ ರವಿ ಕೇಸ್‌ ಸಿಐಡಿಗೆ ವರ್ಗಾವಣೆ: ಇದರ ಹಿಂದಿನ ಲೆಕ್ಕಾಚಾರ ಏನು?

ಭಾರತ್ ಸ್ಟೋರ್ ಮುಂಭಾಗ ನಿಲ್ಲಿಸಲಾಗಿದ್ದ ಕಾರಿನ ಒಳ ಭಾಗದಲ್ಲಿ ಚೀಟಿ ಒಂದನ್ನು ಇಟ್ಟಿದ್ದು, ಸಮೀರ್ ಎಂಬ ಹೆಸರಿನ ಮುಂದೆ 9995333448 ಎಂದು ಬರೆಯಲಾಗಿದೆ. ಒನ್ಲಿ ವ್ಯಾಟ್ಸಪ್ ಕಾಲ್ ಎಂದು ಬರೆದಿದ್ದಾರೆ. ಸ್ಥಳೀಯ ಅಂಗಡಿ ಮಾಲಕರಿಗೆ ಈ ಕಾರಿನ ಬಗ್ಗೆ ಸಾಕಷ್ಟು ಸಂದೇಹಗಳು ಮೂಡಿದ್ದು, ಸ್ಯಾಂಟ್ರೋ ರವಿ ಇಲ್ಲಿ ಕಾರು ಇಟ್ಟು ಪರಾರಿಯಾಗಿದ್ದಾನೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಸದ್ಯ ಪೊಲೀಸರು ಕಾರು ವಶಕ್ಕೆ ಪಡೆದಿದ್ದಾರೆ.

Latest Videos
Follow Us:
Download App:
  • android
  • ios