ಉಡುಪಿ(ಸೆ.07): ದೇಶದಲ್ಲಿ ಬ್ಯಾಂಕ್’ಗಳ ವಿಲಿನೀಕರಣ ಆಗುತ್ತಿದೆ. ಆದರೆ ಉಡುಪಿಯ ಕೃಷ್ಣ ಮಠವನ್ನು ಕೇಂದ್ರವಾಗಿಟ್ಟುವಾಗಿಟ್ಟುಕೊಂಡು ರೂಪುಗೊಂಡ ಹೊಸ ಬ್ಯಾಂಕ್ ಯಶಸ್ವಿಯಾಗಿದೆ. 

ಆದರೆ ಇದು ಆರ್ಥಿಕ ಚಟುವಟಿಕೆ ನಡೆಸುವ ಬ್ಯಾಂಕ್ ಅಲ್ಲ, ಇಲ್ಲಿ ನಡೆಯೋದು ಧಾರ್ಮಿಕ ಜಪ-ತಪ. ಹೇಳಿ ಕೇಳಿ ಉಡುಪಿಯನ್ನು ಬ್ಯಾಂಕ್ ಗಳ ತವರು ಎಂದು ಎಂದೇ ಕರೆಯುತ್ತಾರೆ. ದೇಶದ ಆರ್ಥಿಕತೆಗೆ ಇಲ್ಲಿನ ಬ್ಯಾಂಕ್’ಗಳ ಕೊಡುಗೆ ಅಪಾರ. 

ಇದೀಗ ವಿನೂತನ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿದೆ. ಚೆನ್ನೈ ಮೂಲಕ ಕಾರ್ಯಾಚರಿಸಿದರೂ, ಉಡುಪಿಯ ಕೃಷ್ಣ ಮಠವೇ ಈ ಬ್ಯಾಂಕ್’ಗೆ ಹೆಡ್ ಆಫೀಸ್. ಕೃಷ್ಣ ಮಂತ್ರ ಬ್ಯಾಂಕ್ ಅನ್ನೋದು ಇದರ ಹೆಸರು. ಇದೊಂದು ಧಾರ್ಮಿಕ ಬ್ಯಾಂಕ್, ಜನರಲ್ಲಿ ಭಕ್ತಿ-ಶೃದ್ಧೆ ಹೆಚ್ಚಿಸುವುದೇ ಈ ಬ್ಯಾಂಕ್ ನ ಉದ್ದೇಶ.

ನಮ್ಮಲ್ಲಿ ಅತಿಯಾದ ಪಾಪ ಪ್ರಜ್ಞೆ ಕಾಡಿದಾಗ, ಪರ್ಯಾಯ ಪಲಿಮಾರು ಸ್ವಾಮಿಗಳಿಂದ ಪುಣ್ಯವನ್ನು ಸಾಲ ಪಡೆಯಬೇಕು. ಅವರು ಮಂತ್ರಾಕ್ಷತೆಯ ರೂಪದಲ್ಲಿ ಪುಣ್ಯದ ಸಾಲ ನೀಡುತ್ತಾರೆ. ಮನೆಯಲ್ಲಿ ಕೃಷ್ಣಜಪ ಮಂತ್ರವನ್ನು ಪಠಿಸುವ ಮೂಲಕ ಈ ಸಾಲ ತೀರಿಸಬೇಕು.

 ಆರ್ಥಿಕ ಸಂಕಷ್ಟ ಕಾಡಿದಾಗ ಸಾಲ ಪಡೆದು ಬಡ್ಡಿ ಪಾವತಿಸುವ ಮಾದರಿಯಲ್ಲೇ ಈ ಯೋಜನೆ ಕಾರ್ಯಾಚರಿಸುತ್ತೆ. ಸ್ವಾಮಿಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದು ಧೀಕ್ಷಾಬದ್ದರಾಗಬೇಕು.

"

ನಿರ್ಧಿಷ್ಟ ಸಂಖ್ಯೆಯಲ್ಲಿ ಅಂದ್ರೆ ಒಂದು ಲಕ್ಷ, ಹತ್ತು ಲಕ್ಷ ಅಥವಾ ಒಂದು ಕೋಟಿ ಬಾರಿ ‘ಶ್ರೀ ಕೃಷ್ಣಾಯ ನಮಹ’ ಎಂಬ ಮಂತ್ರವನ್ನು ಪಠಿಸಿದರಾಯ್ತು ವೈಯ್ಯಕ್ತಿವಾಗಿ ಅಥವಾ ಮನೆ ಸದಸ್ಯರು ಸಾಮೂಹಿಕವಾಗಿಯೂ ಈ ಮಂತ್ರಪಠಣ ಮಾಡಬಹುದು. 

ನಿಗದಿತ ಅವಧಿಯೊಳಗೆ ಶೇ. 6 ರಷ್ಟು ಬಡ್ಡಿಪಾವತಿಸಬೇಕು. ಅಂದರೆ ಹೆಚ್ಚುವರಿ ಮಂತ್ರಗಳನ್ನು ಹೇಳಿ ಸಾಲ ಮರುಪಾವತಿ ಮಾಡಬೇಕು. ಚೆನ್ನೈ ಮೂಲದ ‘ಸುಮಾನ್ಯ’ ಅನ್ನೋ ವೆಬ್ ಸೈಟ್ ನಲ್ಲಿ ಸಾಲಗಾರರ ವ್ಯವಹಾರ ನಿರ್ವಹಣೆಯಾಗುತ್ತೆ. 

ಮಂತ್ರಪಠಣ ಪೂರ್ಣಗೊಳಿಸಿ ಈ ವೆಬ್ ಸೈಟ್ ಗೆ ಮಾಹಿತಿ ನೀಡಿದ್ರೆ ಸಾಕು. ನಿಮ್ಮ ಹೆಸರಿನ ಸಾಲ ಪೂರೈಸಿದಂತಾಗುತ್ತೆ. ಈಗಾಗಲೇ ಸುಮಾರು ಎರಡು ಕೋಟಿಯಷ್ಟು ಮಂತ್ರಪಠನವಾಗುವ ಮೂಲಕ ಉತ್ತಮ ವ್ಯವಹಾರ ನಡೆದಿದೆ.

ಕೇಳೋಕೆ ಇದು ಅವಾಸ್ತವ ಅನಿಸಬಹುದು. ಆದರೆ ಉತ್ತರ ಭಾರತದಲ್ಲಿ ಇದೇ ಮಾದರಿಯ ರಾಮ ಜಪ ಬ್ಯಾಂಕ್ ದೊಡ್ಡ ಕ್ರಾಂತ್ರಿಯನ್ನೇ ಮಾಡಿದೆ. ಜನರಲ್ಲಿ ಧಾರ್ಮಿಕ ಪ್ರಜ್ಞೆ ಹೆಚ್ಚಿಸುವುದು ಈ ಬ್ಯಾಂಕ್ ನ ಉದ್ದೇಶ. ಚೆನ್ನಾಗಿದೆ ಅನಿಸಿದ್ರೆ, ನೀವು ಸಾಲ ಮಾಡಿ ಪುಣ್ಯ ಕಟ್ಕೊಳ್ಳಿ.