ವರ್ತಮಾನದ ಕನ್ನಡದ ಸಮಸ್ಯೆಗಳಿಗೆ ಕುವೆಂಪು ಸಾಹಿತ್ಯದಲ್ಲಿ ಪರಿಹಾರ : ಸಾಹಿತಿ ಡಾ. ಸಿಪಿಕೆ

ವರ್ತಮಾನದ ಕನ್ನಡದ ಸಮಸ್ಯೆಗಳಿಗೆ ಕುವೆಂಪು ಸಾಹಿತ್ಯದಲ್ಲಿ ಪರಿಹಾರಗಳಿವೆ ಎಂದು ಹಿರಿಯ ಸಾಹಿತಿ ಡಾ. ಸಿಪಿಕೆ ತಿಳಿಸಿದರು.

 A solution to contemporary Kannada problems in  Kuvempu literature Dr. CPK snr

 ಮೈಸೂರು :  ವರ್ತಮಾನದ ಕನ್ನಡದ ಸಮಸ್ಯೆಗಳಿಗೆ ಕುವೆಂಪು ಸಾಹಿತ್ಯದಲ್ಲಿ ಪರಿಹಾರಗಳಿವೆ ಎಂದು ಹಿರಿಯ ಸಾಹಿತಿ ಡಾ. ಸಿಪಿಕೆ ತಿಳಿಸಿದರು.

ನಗರದ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ನೇತೃತ್ವದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಕನ್ನಡಿಗರ ಬದುಕು ಹಸನಾಗಲಿಕ್ಕೆ ಅವರು ನೀಡಿರುವ ವಿಶ್ವಮಾನವ ಸಂದೇಶ ಮಹತ್ವದ ಮೈಲಿಗಲ್ಲಾಗಿದೆ ಎಂದರು.

ಕುವೆಂಪು ಅವರ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಜಾತ್ಯಾತೀತ ಪರಿಕಲ್ಪನೆಗಳು ರಾಜ್ಯದ ಪ್ರಗತಿಗೆ ಅಮೂಲ್ಯ ಕಾಣಿಕೆ ನೀಡಿವೆ. ಸಾಹಿತ್ಯದ ತಮ್ಮ ಸಾಹಿತ್ಯದ ಮೂಲಕ ಕನ್ನಡ ನಾಡು ನುಡಿ ಮತ್ತು ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ದೊಡ್ಡ ಕಾಣಿಕೆ ನೀಡುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಕನ್ನಡ ವಿಶ್ವ ಮಾನ್ಯತೆಗೆ ತಂದು ಕೊಟ್ಟಿದ್ದಾರೆ ಎಂದು ಅವರು

ಹೇಳಿದರು.

ಕುವೆಂಪು ಅವರು ಮಕ್ಕಳ ಸಾಹಿತ್ಯದಿಂದ ಮಹಾಕಾವ್ಯದವರೆಗೆ ವಿಸ್ತರಿಸಿದ್ದು ಬಹುಮುಖ ನೆಲೆಗಳಲ್ಲಿ ನಿಂತಿವೆ ಹಾಗೂ ಆ ಮೂಲಕ ಬಹು ಮುಖ್ಯ ಸಾಹಿತ್ಯದ ದಿಕ್ಸೂಚಿಯಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಕುವೆಂಪುರವರು ಕನ್ನಡ ನಾಡಿಗೆ ನಾಡಗೀತೆ ಗೀತೆ ಮತ್ತು ರೈತ ಗೀತೆಯನ್ನು ಕೊಟ್ಟ ಮೊದಲ ಕವಿ. ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಏಕೈಕ ಕವಿ ಕುವೆಂಪು ಅವರು, ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು ಎಂದು ಹೇಳಿದರು.

ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ. ಮೋಹನ್ ಕುಮಾರ್ ಗೌಡ, ಸಮಾಜ ಸೇವಕ ಕೆ. ರಘುರಾಂ, ಕಸಪಾ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಬೆಟ್ಟೇಗೌಡ, ಪದಾಧಿಕಾರಿಗಳಾದ ಡಾ.ಈ.ಸಿ. ನಿಂಗರಾಜೇಗೌಡ, ಡಾ. ಚಂದ್ರಶೇಖರ್, ಬಿ.ಸಿ. ಲಿಂಗರಾಜು, ಎಂ.ಎನ್. ಚಂದ್ರಶೇಖರ್, ಲಕ್ಷ್ಮಿದೇವಿ, ನಿರ್ದೇಶಕರಾದ ರವಿಕುಮಾರ್, ನಾಗೇಂದ್ರ, ಜ್ಯೋತಿ, ಶಾರದಾ, ಚಂದ್ರಕಲಾ, ಶಶಿಕಲಾ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios