ಇಲಿ ಅಂದ್ಕೊಂಡು ಚಡ್ಡಿ ನುಂಗಿದ ನಾಗಪ್ಪ!
ಹಾವುಗಳಿಗೆ ಇಲಿ, ಹೆಗ್ಗಣ, ಕಪ್ಪೆಗಳೆಂದರೆ ಮೃಷ್ಟಾನ್ನ ಭೋಜನ. ಹೀಗಾಗಿ ಇಲಿಗಳನ್ನು ಹುಡುಕಿಕೊಂಡು ಹಾವುಗಳು ಸುಳಿದಾಡುತ್ತಿರುತ್ತವೆ. ಮನೆಯಲ್ಲಿ ಇಲಿಗಳು ಇದ್ರಂತೂ ಹಾವಿನ ಕಾಟ ತಪ್ಪಿದ್ದಲ್ಲ ಹೀಗೆ ಇಲಿ ಹುಡುಕಿಕೊಂಡು ಬಂದ ನಾಗರಾಜ ಎಂಥ ಅನಾಹುತ ಮಾಡಿಕೊಂಡಿದ್ದಾನೆ ನೋಡಿ!
ಚಾಮರಾಜನಗರ (ಅ.2) : ಹಾವುಗಳಿಗೆ ಇಲಿ, ಹೆಗ್ಗಣ, ಕಪ್ಪೆಗಳೆಂದರೆ ಮೃಷ್ಟಾನ್ನ ಭೋಜನ. ಹೀಗಾಗಿ ಇಲಿಗಳನ್ನು ಹುಡುಕಿಕೊಂಡು ಹಾವುಗಳು ಸುಳಿದಾಡುತ್ತಿರುತ್ತವೆ. ಮನೆಯಲ್ಲಿ ಇಲಿಗಳು ಇದ್ರಂತೂ ಹಾವಿನ ಕಾಟ ತಪ್ಪಿದ್ದಲ್ಲ. ಇಲಿ ಹೆಚ್ಚಿದ್ದಲ್ಲಿ ಹಾವುಗಳು ಹೆಚ್ಚು. ಇಲಿ ಹುಡುಕಿಕೊಂಡು ಮನೆಯೊಳಕ್ಕೆ ಬರುವ ಹಾವುಗಳಿಂದ ಬೆಚ್ಚಿಬಿದ್ದ ಅನುಭವ ಯಾರಿಗಾದರೂ ಅನುಭವ ಹಾಗೇ ಇರುತ್ತದೆ.
ಚಾಮರಾಜನಗರದ ನಾಗಪ್ಪ ಎಂಥ ಅನಾಹುತ ಮಾಡಿಕೊಂಡಿದ್ದಾನೆ ನೋಡಿ. ಇಲಿಯನ್ನು ಹುಡುಕಿಕೊಂಡು ಮನೆಯೊಳಕ್ಕೆ ಬಂದಿದ್ದಾನೆ. ಅದಾಗಲೇ ಇಲಿ ಆ ಮನೆಯಲ್ಲಿ ಗೂಡು ಕಟ್ಟಲು ಎಲ್ಲಿಂದಲೋ ಕಸ ಕಡ್ಡಿ, ಜತೆಗೆ ಹರಕು ಚಡ್ಡಿ ಹೊತ್ತುತಂದು ಹಾಕಿದೆ.ಇಲಿ ಬೇಟೆಯಾಡಲು ಬಂದ ನಾಗಪ್ಪ ಹಸಿದಹೊಟ್ಟೆಯಲ್ಲಿ ಚಡ್ಡಿಯನ್ನೇ ಇಲಿ ಎಂದು ಭಾವಿಸಿ ನುಂಗಿಬಿಟ್ಟಿದೆ! ಇಲಿ ಅಂದ್ಕೊಂಡು ಚಡ್ಡಿ ನುಂಗಿರುವ ನಾಗಪ್ಪನ ಪಾಡು ಹೇಳತೀರದು. ಸಾವು ಬದುಕಿನ ನಡುವೆ ಹೋರಾಡುವಂಥ ಅನಾಹುತ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಕೋಟೆ ತಿಟ್ಟು ಗ್ರಾಮದಲ್ಲಿ ನಡೆದಿದೆ.
ಹೌದು, ಅಯ್ಯನಪುರ ಸಮೀಪದ ಕೋಟೆತಿಟ್ಟ ಗ್ರಾಮದ ರೈತ ಶಿವಕುಮಾರ್ ಎಂಬುವವರ ಮನೆಯಲ್ಲಿ ನಾಗಪ್ಪ ಬಂದಿದ್ದಾನೆ. ಈ ವೇಳೆ ಮನೆಯ ಮೂಲೆಯಲ್ಲಿ ನೋಡೋಕೆ ಇಲಿಯೋ, ಹೆಗ್ಗಣವೋ ಎಂಬಂತೆ ಮುದ್ದೆಯಾಗಿ ಬಿದ್ದಿದ್ದ ಚಡ್ಡಿ ಕಂಡಿದೆ. ಇಲಿಯಂತೆ ಕಂಡಿತೋ, ಹೆಗ್ಗಣದಂತೆ ಕಾಣಿಸಿತೋ ಒಟ್ಟಿನಲ್ಲಿ ಚಡ್ಡಿ ನುಂಗಿಬಿಟ್ಟಿದೆ. ಬಳಿಕ ಚಡ್ಡಿ ನುಂಗಲು ಆಗದೆ, ಉಗುಳಲು ಆಗದೆ ಪರಿತಪಿಸಿರುವ ನಾಗಪ್ಪ ಶಬ್ದ ಮಾಡಲು ಶುರುಮಾಡಿದ್ದಾನೆ.
ಶಬ್ದ ಕೇಳಿ ಬಂದ ಮನೆಯವರಿಗೆ ಶಾಕ್ ಆಗಿದೆ. ಅರ್ಧ ಚಡ್ಡಿ ಹಾವಿನ ಬಾಯಿಯೊಳಗೆ ಹೋಗಿದೆ. ತಕ್ಷಣ ಸ್ನೇಕ್ ಚಾಂಪ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ನೇಕ್ ಚಾಂಪ್ ಬಂದ ನಂತರ ಚಡ್ಡಿ ಹೊರತೆಗೆದು ನಾಗಪ್ಪನ ರಕ್ಷಣೆ ಮಾಡಿದ್ದಾರೆ.