ಜೆಡಿಎಸ್‌ಗೆ ಮರಳಿದ ಹಿರಿಯ ಮುಖಂಡ
ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ತಾ. ವಳ್ಳೂರು ವಿ.ಸಿ.ಚನ್ನಕೇಶವರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತೊರೆದು ಹಿರಿಯ ಮುಖಂಡ ಕುಪೇಂದ್ರರೆಡ್ಡಿ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾಗಿದರು.
ಪಾವಗಡ : ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ತಾ. ವಳ್ಳೂರು ವಿ.ಸಿ.ಚನ್ನಕೇಶವರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತೊರೆದು ಹಿರಿಯ ಮುಖಂಡ ಕುಪೇಂದ್ರರೆಡ್ಡಿ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾಗಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ನಾಯಕತ್ವದ ಹಿನ್ನಲೆಯಲ್ಲಿ ಮೊದಲಿನಿಂದಲೂ ಜೆಡಿಎಸ್ ಮುಖಂಡರಾಗಿ ಸೇವೆ ಸಲ್ಲಿಸಿದ್ದು, ಕೆಲ ಸ್ಥಳೀಯ ಭಿನ್ನಮತದ ಮೇರೆಗೆ ಇತ್ತೀಚೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದತ್ತ ಒಲವು ತೋರಿದ್ದೆ. ಸಾಮಾಜಿಕ ನ್ಯಾಯ ಹಾಗೂ ರೈತ ಮತ್ತು ಜನಪರ ಸಮಸ್ಯೆ ನಿವಾರಣೆ ಜೆಡಿಎಸ್‌ನಿಂದ ಸಾಧ್ಯ. ಈ ಭಾಗದ ಬಡ ಜನತೆಯ ಶ್ರಯೋಭಿವೃದ್ದಿಗಾಗಿ ಮತ್ತು ಬೆಂಬಲಿಗ ಕಾರ್ಯಕರ್ತರ ಅಭಿಪ್ರಾಯದಂತೆ ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಮತ್ತೆ ಜೆಡಿಎಸ್‌ಗೆ ವಾಪಸ್ಸಾಗಿದ್ದೇನೆ. ಇನ್ನೂ ಮುಂದೆ ಜೆಡಿಎಸ್‌ನಲ್ಲಿಯೇ ಇರುತ್ತೇನೆ. ತಾ.ಜೆಡಿಎಸ್ ಅಲೆ ಇದ್ದು, ಇಲ್ಲಿನ ವಿಧಾನ ಸಭೆಯ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಹೆಚ್ಚು ಮತಗಳಿಂದ ಗೆಲ್ಲಲಿಲ್ಲಾದರೆ. ಅಷ್ಟೇ ಅಲ್ಲದೆ ಎಚ್‌ಡಿಕೆ ಈ ರಾಜ್ಯದ ಸಿಎಂ ಆಗಲಿದ್ದಾರೆ. ಈಗಾಗಲೇ ಪಂಚರತ್ನ ಯೋಜನೆ ಕುರಿತು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದೇನೆ ಎಂದರು.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚನ್ನಕೇಶವರೆಡ್ಡಿ, ಈ ಭಾಗದ ಬಡವರ ಕಲ್ಯಾಣ ದೃಷ್ಟಿಯಿಂದ ಜೆಡಿಎಸ್ ಸೇರ್ಪಡೆಯಾಗಿದ್ದು, ಬೇಸರವಾಗುವುದು ಬೇಡ. ಕೆಆರ್‌ಪಿಯಲ್ಲಿದ್ದ ವೇಳೆ ಅಭಿಮಾನದಿಂದ ಕಂಡ ಮಾಜಿ ಸಚಿವ ಜನಾರ್ಧನರೆಡ್ಡಿ ಹಾಗೂ ಇಲ್ಲಿನ ಕೆಆರ್‌ಪಿಪಿ ಅಭ್ಯರ್ಥಿ ನಾಗೇಂದ್ರಕುಮಾರ್ ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು. ರಾಜ್ಯ ಜೆಡಿಎಸ್ ಹಿರಿಯ ಮುಖಂಡ ಕುಪೇಂದ್ರರೆಡ್ಡಿ ಹಾಗೂ ಇತರೆ ಆನೇಕ ಮಂದಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಿದ್ದರು.
ಬಿಜೆಪಿಯ ಮತ್ತೊಂದು ವಿಕೆಟ್ ಪತನ
ಯಾದಗಿರಿ (ಏ.15): ಆ ಪಕ್ಷದಿಂದ ಈ ಪಕ್ಷಕ್ಕೆ, ಈ ಪಕ್ಷದಿಂದ ಆ ಪಕ್ಷಕ್ಕೆ ಹಾರಾಟ ಮಾಡುತ್ತಲೇ ಸುದ್ದಿಯಲ್ಲಿದ್ದ ಮಾಜಿ ಶಾಸಕ ಹಾಗೂ ಸಚಿವ ಎಬಿ ಮಾಲಕರೆಡ್ಡಿ ಬಿಜೆಪಿಗೆ ಗುಡ್‌ಬೈ ಹೇಳಿದ್ದರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಮಾಲಕರೆಡ್ಡಿ ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಮಾಲಕರೆಡ್ಡಿ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಅದರೊಂದಿಗೆ ಮಾಲಕರೆಡ್ಡಿ 'ಕಮಲ' ಬಿಟ್ಟು ತೆನೆ ಹೊತ್ತಿದ್ದು ಖಚಿತವಾಗಿದೆ. ಜೆಡಿಎಸ್‌ನಿಂದ ಅವರು ಯಾದಗಿರಿ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ದೇವೇಗೌಡರ ಕೈಯಿಂದ ಎಬಿ ಮಾಲಕರೆಡ್ಡಿ ಬಿ ಫಾರ್ಮ್‌ಅನ್ನು ಪಡೆದುಕೊಂಡಿದ್ದಾರೆ. ಶನಿವಾರ ಬೆಂಗಳೂರಿನ ದೇವೇಗೌಡರ ನಿವಾಸಕ್ಕೆ ಆಗಮಿಸಿದ ಮಾಲಕರೆಡ್ಡಿ ಬಿ ಫಾರ್ಮ್ ಅನ್ನು ಸ್ವೀಕರಿಸಿದ್ದರು. ಶಹಾಪುರ ಕ್ಷೇತ್ರಕ್ಕೆ ಟಿಕೆಟ್ ಸಿಗದ ಕಾರಣಕ್ಕೆ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಗುರುಪಾಟೀಲ್ ಶಿರವಾಳ. ಶಿರವಾಳ ಬೆನ್ನಲ್ಲೇ ಇಂದು ಮಾಲಕರೆಡ್ಡಿ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಕಾಂಗ್ರೆಸ್‌ಗೆ ಮತ್ತಷ್ಟು ಬಂಡಾಯ, ಪ್ರತಿಭಟನೆಯ ಬಿಸಿ: ಪಕ್ಷ ಬಿಡಲು ಮಾಲಕರೆಡ್ಡಿ ಪುತ್ರಿ ಸಿದ್ಧತೆ
ಕಾಂಗ್ರೆಸ್ ನಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಲಕರೆಡ್ಡಿ ಅವರು ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನ ಸೋಲಿಸಿದ ರೂವಾರಿಗಳಲ್ಲಿ ಮಾಲಕರೆಡ್ಡಿ ಕೂಡ ಒಬ್ಬರಾಗಿದ್ದರು. ಈಗ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ.