ಕೊಪ್ಪಳ ಜಿಲ್ಲೆಯ ಗಂಗಾವತಿ ಬಸ್ ನಿಲ್ದಾಣದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಫೋಟೋಗಳನ್ನು ರಹಸ್ಯವಾಗಿ ತೆಗೆಯುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಆತನ ಮೊಬೈಲ್ ಪರಿಶೀಲಿಸಿದಾಗ ನೂರಾರು ಮಹಿಳೆಯರ ಫೋಟೋಗಳು ಮತ್ತು ಅಶ್ಲೀಲ ಚಿತ್ರಗಳು ಪತ್ತೆಯಾಗಿವೆ.
ಕೊಪ್ಪಳ (ಅ.1): ಗಂಗಾವತಿ: ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ ಘಟನೆ ಬುಧವಾರ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.
ಬಸ್ ನಿಲ್ದಾಣದಲ್ಲಿ ಕುಳಿತು ರಹಸ್ಯವಾಗಿ ಮಹಿಳೆಯರ ಫೋಟೋ ಕ್ಲಿಕ್
ರಾಯಚೂರು ಜಿಲ್ಲೆಯ ಮಾನ್ವಿ ನಿವಾಸಿ ರಾಮಾಂಜನೇಯ ಏಟು ತಿಂದ ವ್ಯಕ್ತಿ. ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಬರುವ, ಹೋಗುವ ಮಹಿಳೆಯರು, ಹುಡುಗಿಯರ ಮತ್ತು ಅದರಲ್ಲೂ ವಿದ್ಯಾರ್ಥಿನಿಯರ ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವುದನ್ನು ಕೆಲವರು ಗಮನಿಸಿದ್ದಾರೆ. ಅದನ್ನು ನೋಡಿದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದಾಗ ನೂರಾರು ಜನರು ಆತನನ್ನು ಹಿಡಿದು ಹಿಗ್ಗಾಮಗ್ಗಾ ಥಳಿಸಿದ್ದಾರೆ. ವಿದ್ಯಾರ್ಥಿಗಳು ಆತನ ಮೊಬೈಲ್ ಕಸಿದು ನೋಡಿದಾಗ ಅದರಲ್ಲಿ ನೂರಾರು ಮಹಿಳೆಯರ ಫೋಟೋ ಮತ್ತು ಅಶ್ಲೀಲ ಚಿತ್ರಗಳು ಇದ್ದವು ಎನ್ನಲಾಗಿದೆ.
ಮೊಬೈಲ್‌ನಲ್ಲಿ ಹುಡುಗಿಯರ ಫೋಟೋಗಳು ಪತ್ತೆ
ಆತನ ಮೊಬೈಲ್‌ನಲ್ಲಿ ನೂರಾರು ಹುಡುಗಿಯರ ಫೋಟೋ ಪತ್ತೆಯಾಗಿದೆ. ರಾಮಾಂಜನೇಯ ಟಿವಿ ರಿಪೇರಿ ಮಾಡುವ ವೃತ್ತಿ ಮಾಡುತ್ತಾನೆ. ಬಸ್ ನಿಲ್ದಾಣದಲ್ಲಿರುವ ಮಹಿಳೆಯರು ಫೋಟೋ ತೆಗೆಯುವುದು ಆತನ ಚಾಳಿ ಆಗಿತ್ತು ಎನ್ನಲಾಗಿದೆ. ಬಸ್ ನಿಲ್ದಾಣದಲ್ಲಿದ್ದ


