ಅನಾರೋಗ್ಯ ಪೀಡಿತನ ಚಿಕಿತ್ಸೆಗೆ ವೇಷಧರಿಸಿ ಹಣ ಸಂಗ್ರಹ

ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಶ್ರೀಮಂತರೇ ಆಗಿರಬೇಕು ಎಂದೇನಿಲ್ಲ. ಸಹಾಯ ಮಾಡುವ ಮನಸು,ಮಾನವೀಯತೆ ಇರಬೇಕು ಎಂಬುದಕ್ಕೆ, ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬನ ಚಿಕಿತ್ಸೆಗೆ ವೇಷ ಧರಿಸಿ ಹಣ ಸಂಗ್ರಹಿಸುತ್ತಿರುವ ಈ ಯುವಕನೇ ಸಾಕ್ಷಿ

A man in Kundapra Dress up and raise money for the treatment of the sick rav

ಕುಂದಾಪುರ (ಆ.1) : ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಲಕ್ಷಾಂತರ ರುಪಾಯಿ ಹಣ ಇರಲೇಬೇಕು ಎಂದೇನಿಲ್ಲ. ಒಳ್ಳೆಯ ಮನಸಿದ್ದರೆ ಸಾಕು ಎನ್ನುವುದನ್ನು ಈ ಯುವಕ ಮಾಡಿ ತೋರಿಸಿದ್ದಾರೆ. ಮರವಂತೆ(Maravante) ಮಾರಸ್ವಾಮಿ ಜಾತ್ರೆ(Kumaraswamy jaatre) ದಿನ ಆಕರ್ಷಕ ವೇಷ ಹಾಕಿ ಗಮನ ಸೆಳೆದಿದ್ದಾರೆ. ಕುಂದಾಪುರ(Kundapur) ಸಮೀಪದ ಮರವಂತೆ- ಮಾರಸ್ವಾಮಿ ಮಹಾರಾಜಸ್ವಾಮಿ ವರಾಹ ದೇವಸ್ಥಾನ ಜಾತ್ರೆಯಲ್ಲಿ ಗುರುವಾರ ಸಮಾಜ ಸೇವಕ ಬೆಂಕಿಮಣಿ ಸಂತು ಅವರು ಅನಾರೋಗ್ಯ ಪೀಡಿತ ಸುರೇಂದ್ರ ಎನ್ನುವವರ ಚಿಕಿತ್ಸೆಗಾಗಿ ವೇಷ ಧರಿಸಿ ಸುಮಾರು 85 ಸಾವಿರ ರುಪಾಯಿಗಳಷ್ಟುಹಣ ಸಂಗ್ರಹಿಸಿದ್ದಾರೆ.

ವೇಷ ಹಾಕಿ ಬಡ ಮಕ್ಕಳಿಗೆ 50 ಲಕ್ಷ ನೀಡಿದ ರವಿಯಿಂದ ಮತ್ತೊಂದು ಸೇವೆ

ಸುರೇಂದ್ರ(Surendra) ಎನ್ನುವ ಯುವಕನಿಗೆ ಮೂಲವ್ಯಾಧಿ( Piles) ರೂಪದಲ್ಲಿ ವಕ್ಕರಿಸಿದ ಕಾಯಿಲೆ ಈಗ ಜೀವಕ್ಕೆ ಕಂಟಕವನ್ನು ತಂದೊಡ್ಡಿದೆ. ತಂದೆಯನ್ನು ಕಳೆದುಕೊಂಡಿರುವ ಮಗನನ್ನು ಉಳಿಸಿಕೊಳ್ಳಲು ತಾಯಿ ಇರುವ ಆಸ್ತಿಯನ್ನ ಮಾರಾಟ ಮಾಡಿ ಚಿಕಿತ್ಸೆಗಾಗಿ ಖರ್ಚು ಮಾಡಿದ್ದಾರೆ. ಈಗಾಗಲೇ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಜೀವ ಉಳಿಯಲು ಇನ್ನೂ ಒಂದು ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಆದರೆ ರಕ್ತದಲ್ಲಿ ಹಿಮೋಪೋಲಿಯೋ ಎಂಬ ರಕ್ತ ಕೋಶ ಕಡಿಮೆ ಇರುವುದು ಶಸ್ತ್ರಚಿಕಿತ್ಸೆಗೆ ತೊಡಕಾಗಿದೆ. ರಕ್ತ ಕಣ ಉತ್ಪಾದನೆ ಮಾಡಲು ಫ್ಯಾಕ್ಟರ್‌ ಐಗಿ ಎನ್ನುವ ಇಂಜೆಕ್ಷನ್‌ 50ಕ್ಕೂ ಹೆಚ್ಚು ಬಾರಿ ಕೊಡುವ ಅನಿವಾರ್ಯತೆ ಇದೆ. ಈ ಇಂಜೆಕ್ಷನ್‌ ದರವೇ ದುಬಾರಿಯಾಗಿದ್ದು, ಇದಾದ ಬಳಿಕ ಆಪರೇಷನ್‌ ಕೂಡ ಮಾಡಬೇಕಾಗಿದೆ. ಇದಕ್ಕಾಗಿ ಏನಿಲ್ಲವೆಂದರೂ ಸುಮಾರು 15 ಲಕ್ಷಕ್ಕೂ ಹೆಚ್ಚಿನ ದುಡ್ಡಿನ ಅವಶ್ಯಕತೆ ಇದೆ.

ಸುರೇಂದ್ರ ಅವರಿಗೆ ಸಹಾಯ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟಅವರ ಸ್ನೇಹಿತರ ಕೋರಿಕೆಗೆ ಸ್ಪಂದಿಸಿದ ಬೆಂಕಿಮಣಿ ಸಂತು ವೇಷ ಧರಿಸಿ ಮಾನವೀಯ ಮನಸ್ಸುಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಸಹೃದಯಿಗಳು ನೀಡಿರುವ ಅಷ್ಟುಹಣವನ್ನು ಒಟ್ಟು ಮಾಡಿ ಸುರೇಂದ್ರ ಅವರ ಕುಟುಂಬದವರಿಗೆ ನೀಡಿದ್ದಾರೆ.

Udupi; ಕಾರ್ಮಿಕನೊಬ್ಬ ಲಕ್ಷಾಂತರ ರೂಪಾಯಿ ದಾನ ಮಾಡುವ ಕಥೆ ಕೇಳಿದ್ದೀರಾ?

ಸೆಲ್ಫಿಕ್ರೇಜ್‌: ಬೆಂಕಿಮಣಿ ಸಂತು ಧರಿಸಿರುವ ವೇಷ ಜಾತ್ರೆಗಾಗಿ ಆಗಮಿಸಿದ ಭಕ್ತರನ್ನು ಆಕರ್ಷಿಸಿದ್ದು, ಪುರುಷರು, ಮಹಿಳೆಯರು, ಯುವಕ, ಯುವತಿಯರು, ಮಕ್ಕಳು ಅವರಿವರೆನ್ನದೆ ಎಲ್ಲ ವಯಸ್ಕರು ಬಂದು ಸೆಲ್ಫಿ ಕ್ಲಿಕ್ಕಿಸುವ ದೃಶ್ಯ ಸಾಮಾನ್ಯವಾಗಿದ್ದವು.

Latest Videos
Follow Us:
Download App:
  • android
  • ios