ಚಿಕ್ಕಮಂಡ್ಯ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷ
ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಭಾನುವಾರವಷ್ಟೇ ಕಾಣಿಸಿಕೊಂಡಿದ್ದ ಐದು ಕಾಡಾನೆಗಳ ಹಿಂಡು ಆಹಾರವನ್ನು ಅರಸಿಕೊಂಡು ಸೋಮವಾರ ಬೆಳ್ಳಂಬೆಳಗ್ಗೆ ಚಿಕ್ಕ ಮಂಡ್ಯ ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗುವುದರೊಂದಿಗೆ ಆತಂಕ ಮೂಡಿಸಿವೆ.
ಮಂಡ್ಯ: ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಭಾನುವಾರವಷ್ಟೇ ಕಾಣಿಸಿಕೊಂಡಿದ್ದ ಐದು ಕಾಡಾನೆಗಳ ಹಿಂಡು ಆಹಾರವನ್ನು ಅರಸಿಕೊಂಡು ಸೋಮವಾರ ಬೆಳ್ಳಂಬೆಳಗ್ಗೆ ಚಿಕ್ಕ ಮಂಡ್ಯ ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗುವುದರೊಂದಿಗೆ ಆತಂಕ ಮೂಡಿಸಿವೆ.
ಚಿಕ್ಕಮಂಡ್ಯ ಸಮೀಪದ ರಾಮಕೃಷ್ಣ ಚಿತ್ರ ಮಂದಿರವಾಗಿದ್ದ ಕಟ್ಟಡದ ಹಿಂಬದಿಯ ಪ್ರದೇಶದ ಜಮೀನಿನಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಪುಟ್ಟಸ್ವಾಮಿ ಅವರಿಗೆ ಸೇರಿದ ಜಮೀನಿನಲ್ಲಿ ಬೀಡುಬಿಟ್ಟಿವೆ. ಮಂಡ್ಯ ನಗರಕ್ಕೆ ಸಮೀಪವೇ ಕಾಡಾನೆಗಳು ಪ್ರತ್ಯಕ್ಷಗೊಂಡಿರುವುದರಿಂದ ಸಾರ್ವಜನಿಕರು ಆನೆ ನೋಡಲು ಮುಗಿಬಿದ್ದಿದ್ದಾರೆ
ಸುತ್ತಮುತ್ತಲ ಪ್ರದೇಶದ ಜನತೆ ಬೈಪಾಸ್ ರಸ್ತೆ ಹಾಗೂ ಮಂಡ್ಯ -ಚಿಕ್ಕ ಮಂಡ್ಯ ರಸ್ತೆಯಲ್ಲಿ ಜಮಾಯಿಸಿದ್ದು, ಪೊಲೀಸರು ಆನೆಗಳ ಹಿಂಡಿನತ್ತ ಸಾರ್ವಜನಿಕರು ತೆರಳದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಹೊಸ ಬೂದನೂರು ಗ್ರಾಮದಲ್ಲಿ ಭಾನುವಾರ ಪ್ರತ್ಯಕ್ಷಗೊಂಡಿದ್ದ ಆನೆಗಳ ಹಿಂಡು ರಾತ್ರಿ ವೇಳೆ ಚಿಕ್ಕಮಂಡ್ಯ ಕಡೆ ಧಾವಿಸಿಬಂದಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಪ್ರದೇಶದಿಂದ ನಾಡಿನತ್ತ ಮುಖ ಮಾಡಿರುವ ಆನೆಗಳ ಹಿಂಡು ಶನಿವಾರ ರಾತ್ರಿ ಅಂಬರಹಳ್ಳಿ ಸಮೀಪದ ಜಮೀನುಗಳಲ್ಲಿ ಕಾಣಿಸಿಕೊಂಡಿದ್ದವು.ಭಾನುವಾರ ಹೊಸ ಬೂದನೂರು ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ಕಬ್ಬಿನ ಗದ್ದೆಗೆ ಲಗ್ಗೆ ಇಟ್ಟಿದ್ದವು, ಇದೀಗ ಮಂಡ್ಯ ನಗರ ಸಮೀಪ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.
ಮುಂದುವರಿದ ಕಾಡಾನೆ ಹಾವಳಿ
ಚಿಕ್ಕಮಗಳೂರು (ಸೆ.10): ಮಲೆನಾಡ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾನವ ಕಾಡಾನೆಗಳ ಸಂಘರ್ಷ ನೆನ್ನೆ ಮೊನ್ನೆದಲ್ಲ ಹಲವು ದಶಕಗಳಿಂದಲೂ ಕೂಡ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ. ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದು ಅಥವಾ ಜೀವವನ್ನು ಉಳಿಸಿಕೊಳ್ಳುವುದು ಎನ್ನುವ ಆತಂಕದಲ್ಲೇ ಮಲೆನಾಡಿನ ಜನರು ದಿನ ಕಳೆಯುತ್ತಿದ್ದಾರೆ. ತಾವು ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ತಾವೇ ಪೋಷಣೆ ಮಾಡಿ ಬೆಳಸಿದ ಗಿಡಗಳನ್ನುಕೊಚ್ಚಿ ಹಾಕುತ್ತಿದ್ದಾರೆ.
ಬಾಳೆಗಾಗಿ ಕಾಫಿ ತೋಟಕ್ಕೆ ಕಾಡಾನೆ ಲಗ್ಗೆ: ಜಿಲ್ಲೆಯ ಮಲೆನಾಡಿನ ಭಾಗವಾದ ಅರೇನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿತ್ಯವೂ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕಾಡಾನೆ ದಾಳಿಯಿಂದ ಅಡಿಕೆ, ಕಾಫಿ, ತೆಂಗು , ಬಾಳೆ ಗಿಡಗಳು ಮಣ್ಣುಪಾಲಾಗುತ್ತಿವೆ.ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ರೈತರ ತೋಟದಲ್ಲಿ ಸವಾರಿ ಮಾಡುತ್ತಿದ್ದು.ಮನಸೋ ಇಚ್ಚೆ ಸಿಕ್ಕಿದ ಗಿಡಗಳನ್ನು ಮುರಿದು ಹಾಕುತ್ತಿದೆ. ರೈತರು ಕಷ್ಟಪಟ್ಟು ಸಾಕಿ ಸಲಹಿದ ಕಾಫಿ ಗಿಡಗಳು,ಅಡಿಕೆ ಗಿಡ,ಬಾಳೆಗಿಡ ಸಂಪೂರ್ಣ ನಾಶವಾಗಿದ್ದು ಆನೆಗಳ ಅಟ್ಟಹಾಸಕ್ಕೆ ರೈತರು ಕಂಗಾಲಾಗಿದ್ದಾರೆ.ತಾವು ಬೆಳೆದ ಬೆಳೆಯಿಂದ ಲಾಭ ಬರುತ್ತೆ ಅನ್ನುವಾಗ್ಲೆ ಆನೆಗಳು ಸರ್ವನಾಶ ಮಾಡಿ ರೈತರನ್ನು ಸಂಕಷ್ಚಕ್ಕೆ ದೂಡಿದೆ.ಕಳೆದ ಒಂದುವಾರಗಳಿಂದ ಅರೇನೂರು ಗ್ರಾಮದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು ರೈತರು ಹೈರಾಣಾಗಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಗೆ ನಮ್ಮ ತಕರಾರು ಇಲ್ಲ: ಸಚಿವ ಪರಮೇಶ್ವರ್
ನಿತ್ಯವೂ ಕಾಡಾನೆಗಳು ಒಂದಲ್ಲ ಒಂದುತೋಟಕ್ಕೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. ಇದರಿಂದ ರೋಸಿಹೋದ ಗ್ರಾಮದ ಸಾಗರ್ ಎನ್ನುವ ಬೆಳೆಗಾರ ಕಾಡಾನೆ ನಿಯಂತ್ರಣ ಮಾಡಲು ಐದು ಎಕ್ರೆ ತೋಟದಲ್ಲಿದ್ದ ಬಾಳೆಗಿಡಗಳನ್ನು ಕೊಚ್ಚಿ ಹಾಕಿದ್ದಾರೆ. ಬಾಳೆಗಿಡಗಳನ್ನು ತಿನ್ನಲು ಕಾಫಿತೋಟಕ್ಕೆ ಕಾಡಾನೆಗಳು ಲಗ್ಗೆ ಹಿಡುತ್ತವೆ ,ಇದರಿಂದ ಸಾಗರ್ ರವರು ತಮ್ಮ ತೋಟದಲ್ಲಿ ಮಿಶ್ರ ಬೆಳೆಯನ್ನು ಬೆಳೆದಿದ್ದರು, ಕಾಡಾನೆ ಕಾಟದಿಂದ ಉಳಿದ ಬೆಳೆಗಳಾದ ಕಾಫಿ , ಅಡಿಕೆಗಳನ್ನು ರಕ್ಷಣೆ ಮಾಡಿಕೊಳ್ಳಲು ತೋಟದಲ್ಲಿದ್ದ ಬಾಳೆ ಗಿಡಗಳನ್ನು ಸಂಪೂರ್ಣವಾಗಿ ಕೊಚ್ಚಿ ಹಾಕಿದ್ದಾರೆ.