ಯಾದಗಿರಿ(ಜು.28): ಅಂಗಡಿಗಳಲ್ಲಿ ಖರೀದಿಸೋ ವಸ್ತುಗಳಲ್ಲಿ ಇದೀಗ ಹುಳ, ಹಾವು, ಕಪ್ಪೆ ಸಿಗೋದು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಗುಟ್ಕಾ ಪ್ರಿಯರಿಗೆ ಶಾಕಿಂಗ್ ನ್ಯೂಸ್. ದಿನನಿತ್ಯ ತಿನ್ನುವ ಗುಟ್ಕಾ ಪಾಕ್ಯೇಟ್ ನಲ್ಲಿ ಸತ್ತ ಕಪ್ಪೆ ಮರಿ ಪತ್ತೆಯಾಗಿದೆ.

ಯಾದಗಿರಿ ಜಿಲ್ಲೆ ಸುರಪೂರ ತಾಲೂಕಿನ ಯಾಳಗಿ ತಾಂಡಾದ ಅಂಗಡಿಯಲ್ಲಿ ಬಸವರಾಜ್ ಎಂಬವವರು ಖರೀದಿಸಿದ್ದ ಗುಟ್ಕಾದಲ್ಲಿ ಸತ್ತ ಕಪ್ಪೆ ಪತ್ತೆಯಾಗಿತ್ತು. ತಾನು ಖರೀದಿಸಿದ್ದ ಗುಟ್ಕಾ ಪ್ಯಾಕೇಟ್‌ನಲ್ಲಿ ಕೇಸರರಿ ಇರುತ್ತದೆ ಎಂದು ಭಾವಿಸಿದ್ದ ಬಸವರಾಜ್‌ಗೆ ಸತ್ತ ಕಪ್ಪೆ ಸಿಕ್ಕಿದ್ದು ನಿಜಕ್ಕೂ ಆಘಾತ ತಂದಿತ್ತು.

ಇನ್ನು ಗುಟ್ಕಾ ಪ್ಯಾಕೇಟ್‌ನಲ್ಲಿ ಸತ್ತ ಕಪ್ಪೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಗುಟ್ಕಾ ತಿನ್ನುವ ಮುನ್ನ ಇರಲಿ ಎಚ್ಚರ ಎಂಬ ಸಂದೇಶ ಎಲ್ಲೆಡೇ ಹರಿದಾಡುತ್ತಿದೆ.