ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೋಷಕರಿಗೆ ಮಕ್ಕಳ ಚಿಂತೆ ಬೇಡ: ಯಾಕೆ ಗೊತ್ತಾ?

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸೋ ಪೊಷಕರಿಗೆ ಇನ್ನು ಮುಂದೆ ಮಕ್ಕಳಚಿಂತೆ ಬೇಡ.. ಯಾಕಂದ್ರೆ ಕೆಲಸದ ಜೊತೆಯಲ್ಲೆ ಮಕ್ಕಳನ್ನ ನೋಡಿಕೊಳ್ಳಲು ಅವಕಾಶವನ್ನ ನಗರಪೊಲೀಸ್ ಆಯುಕ್ತರು ಕಲ್ಪಿಸಿದ್ದಾರೆ. 

A day care was arranged in bengaluru city police commissioners office gvd

ಮಂಜುನಾಥ್, ಏಷಿಯಾನೆಟ್ ಸುವರ್ಣನ್ಯೂಸ್, ಬೆಂಗಳೂರು

ಬೆಂಗಳೂರು (ಮೇ.15): ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸೋ ಪೊಷಕರಿಗೆ ಇನ್ನು ಮುಂದೆ ಮಕ್ಕಳಚಿಂತೆ ಬೇಡ.. ಯಾಕಂದ್ರೆ ಕೆಲಸದ ಜೊತೆಯಲ್ಲೆ ಮಕ್ಕಳನ್ನ ನೋಡಿಕೊಳ್ಳಲು ಅವಕಾಶವನ್ನ ನಗರಪೊಲೀಸ್ ಆಯುಕ್ತರು ಕಲ್ಪಿಸಿದ್ದಾರೆ. ಇದರಿಂದ ಕೆಲಸದ ಒತ್ತಡದಲ್ಲಿರುವ ಪೋಷಕರು ಮನೆಯಲ್ಲಿ ಮಕ್ಕಳನ್ನ ಬಿಟ್ಟು ಬರುವ ಚಿಂತೆಯನ್ನ ದೂರ ಮಾಡಿದ್ದಾರೆ.

ಇನ್ನೂ ಡೇ ಕೇರ್ ನಲ್ಲಿ ವ್ಯವಸ್ಥೆ ನೋಡುವುದಾದರೆ ಇಲಾಖೆಯ ಡೇ ಕೇರ್ ನಲ್ಲಿ 30 ಮಕ್ಕಳ ಪಾಲನೆ ಮಾಡಲು ಸ್ಥಳಾವಕಾಶವಿದ್ದು 27 ಮಕ್ಕಳು ನೊಂದಣೆಯಾಗಿದ್ದಾರೆ. ಸುಸಜ್ಜಿತವಾದಂತ ವ್ಯವಸ್ಥೆಯಿದ್ದು ಒಂದು ವರ್ಷದ ಒಳಗಿನ ಮಕ್ಕಳಿಗೆ ಪಾಲನೆ ಮಾಡಲು ತೊಟ್ಟಿಲುಗಳ ವ್ಯವಸ್ಥೆ. ಐದು ವರ್ಷದ ಮಕ್ಕಳಿಗೆ ಆಟವಾಡು ಸುಸಜ್ಜಿತ ಸ್ಥಳದ ವ್ಯವಸ್ಥೆ ಗೋಡೆಗಳ ಮೇಲೆ ಮಕ್ಕಳಿಗೆ ಖುಷಿಪಡಿಸುವಂತಹ ವರ್ಣರಂಜಿತ ಕಾರ್ಟೂನ್ ಪೇಂಟಿಂಗ್. 

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ: ರೈತ ಸಮುದಾಯದಲ್ಲಿ ಸಂತಸ

ಮಕ್ಕಳಿಗೆ ಆಟದ ಜೊತೆ ಪಾಠ ಕಲಿಯಲು ವ್ಯವಸ್ಥೆ ಕೂಡ ಮಾಡಲಾಗಿದೆ. ಇನ್ನೂ ಊಟ ಮಾಡಿದ ನಂತರ ಮಕ್ಕಳು ನಿದ್ರಾವಸ್ಥಗೆ ಜಾರಿದ್ರೆ ಮಕ್ಕಳು ಮಲಗಿಕೊಳ್ಳಲು ಬೆಡ್ ಗಳನ್ನ ಕೂಡ ಇಡಲಾಗಿದೆ. ಇನ್ನೂ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ರವರ ಕಾಳಜಿ ನಡೆಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios