Asianet Suvarna News Asianet Suvarna News

ಉಗ್ರದಾಳಿ ಶಂಕೆ : ಮಂಗಳೂರಿನಲ್ಲಿ 9 ಜನರ ಬಂಧನ, ಕರಾವಳಿಯಲ್ಲಿ ಹೈ ಅಲರ್ಟ್

ರಾಜ್ಯದ ಕರಾವಳಿ ಪ್ರದೇಶದಲ್ಲಿ ಹೈಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದ್ದಿನ ಕಣ್ಣು ಇಡಲಾಗಿದ್ದು ಮಹತ್ವದ ಬೆಳವಣಿಗೆಯಲ್ಲಿ ಮಂಗಳೂರಿನಲ್ಲಿ 9 ಜನ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಲಾಗಿದೆ.

9 suspected people Arrested in Mangaluru High Alert
Author
Bengaluru, First Published Aug 16, 2019, 10:51 PM IST
  • Facebook
  • Twitter
  • Whatsapp

ಮಂಗಳೂರು[ಆ. 16] ಮಂಗಳೂರಿನ ಲಾಡ್ಜ್ ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು  ವಶಕ್ಕೆ ಪಡೆದಿದ್ದಾರೆ. 9 ಮಂದಿಯನ್ನು ಮಂಗಳೂರಿನ ಕದ್ರಿ ಪೊಲೀಸರು ತಡರಾತ್ರಿ ವಶಕ್ಕೆ ಪಡೆದಿದ್ದಾರೆ. 

ಪಂಪ್ ವೆಲ್ ಬಳಿಯ ಲಾಡ್ಜ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರು ಮಡಿಕೇರಿ, ಕೇರಳ ಮತ್ತು ಮಂಗಳೂರು ಎಂದು ಗುರುತಿಸಲಾಗಿದೆ.  ಆರೋಪಿಗಳಿಂದ ನ್ಯಾಶನಲ್ ಕ್ರೈಮ್ ಇನ್ವಿಶ್ಟಿಗೇಶನ್ ಬ್ಯೂರೋ ಎಂಬ ಫಲಕವಿರುವ ಕಾರು ವಶಕ್ಕೆ ಪಡೆಯಲಾಗಿದೆ.

Govt of India ಎಂಬ ಬರಹವಿರುವ ಕಾರಿನಲ್ಲಿ ಬಂದಿರುವ ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಉತ್ತರ ಕನ್ನಡ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹದ್ದಿನ ಕಣ್ಣು ಇಡಲಾಗಿದೆ. ಉಗ್ರರ ದಾಳಿ ಶಂಕೆಯಿಂದ  ಪ್ರಮುಖ ದೇವಾಲಯ, ಜಲಾಶಯ, ಕೈಗಾ ಅಣುಸ್ಥಾವರ, ನೌಕಾನೆಲೆ ಸುತ್ತ ಭಾರೀ ಬಂದೋಬಸ್ತ್ ಇಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ.

Follow Us:
Download App:
  • android
  • ios