ಮಕ್ಕಳ ವೈದ್ಯರ ಬಳಿ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಮಗು ಕೊನೆಯುಸಿರೆಳೆದಿದೆ. ಮದುವೆಯಾಗಿ 10 ವರ್ಷಗಳ ನಂತರ ದಂಪತಿಗೆ ಮಗುವಾಗಿತ್ತು. ಈ ವೇಳೆ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.

ಕಂಪ್ಲಿ(ಬಳ್ಳಾರಿ)(ಜೂ.10):  ಮೆಂಥೋಪ್ಲಸ್‌ ಡಬ್ಬಿ ನುಂಗಿ 9 ತಿಂಗಳ ಮಗು ಸಾವಿಗೀಡಾದ ಘಟನೆ ಪಟ್ಟಣದ 5ನೇ ವಾರ್ಡ್‌ನ ಇಂದಿರಾನಗರದಲ್ಲಿ ಶುಕ್ರವಾರ ನಡೆದಿದೆ.

ಪಟ್ಟಣದ ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಏಕೈಕ ಪುತ್ರಿ ಪ್ರಿಯದರ್ಶಿನಿ ಎನ್ನುವ 9 ತಿಂಗಳ ಹೆಣ್ಣುಮಗು ಆಟವಾಡುತ್ತ ಮನೆಯಲ್ಲಿ ಬಿದ್ದಿದ್ದ ಮೆಂಥೋಪ್ಲಸ್‌ ಡಬ್ಬಿಯನ್ನು ನುಂಗಿದೆ. ಈ ವೇಳೆ ಉಸಿರಾಟಕ್ಕೆ ತೊಂದರೆಯಾದಾಗ ಮಗು ಅಳುತ್ತ ಕೆಲಸ ಮಾಡುತ್ತಿದ್ದ ತಾಯಿ ಬಳಿ ಬಂದಿದೆ. ಆಗ ತಾಯಿ ಮಗುವಿನ ಗಂಟಲಿಗೆ ಕೈಹಾಕಿ ಡಬ್ಬಿ ತೆಗೆಯಲು ಪ್ರಯತ್ನಿಸಿದ್ದಾಳೆ. 

ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಚಾರ್ಯ ಶರಣಪ್ಪ ಅಮಾನತು

ಸಾಧ್ಯವಾಗದಿದ್ದಾಗ ತಕ್ಷಣ ಸಮೀಪದ ಮಕ್ಕಳ ವೈದ್ಯರ ಬಳಿ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಮಗು ಕೊನೆಯುಸಿರೆಳೆದಿದೆ. ಮದುವೆಯಾಗಿ 10 ವರ್ಷಗಳ ನಂತರ ದಂಪತಿಗೆ ಮಗುವಾಗಿತ್ತು. ಈ ವೇಳೆ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.