Asianet Suvarna News Asianet Suvarna News

ನಂಜನಗೂಡು: ಹಾಲಿನ ವಾಹನ ಪಲ್ಟಿಯಾಗಿ 9 ಮಂದಿಗೆ ಗಾಯ

ಬಳ್ಳೂರು ಹುಂಡಿ, ನಾಗಣಾಪುರ ಹಾಗೂ ಮಹದೇವನಗರದಿಂದ ಹಡಿಯಾಲ ಗ್ರಾಮದ ಪ್ರೌಢಶಾಲೆಗೆ ತೆರಳಲು 9 ಮಂದಿ ವಿದ್ಯಾರ್ಥಿಗಳು ಖಾಸಗಿ ಡೈರಿಯೊಂದರ ಹಾಲಿನ ವಾಹನವನ್ನು ಏರಿದ್ದಾರೆ. ಸರಕು ಸಾಗಾಣೆ ಆಟೋ ಈರೇಗೌಡನಹುಂಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಯಂಚಿನಲ್ಲಿ ಉರುಳಿದ್ದರಿಂದ ವಾಹನದಲ್ಲಿದ್ದ ಅನಷ, ಬೇಬಿ, ಮಿಲನ, ಕೌಶಲ್ಯ, ಅಂಜಲಿ, ಕುಮಾರಿ, ವಿನೋದ, ಸೋಮಣ್ಣ ಹಾಗೂ ಮಣಿಕಂಠ ಎಂಬ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

9 Injured due to Milk Vehicle Overturns at Nanjangud in Mysuru grg
Author
First Published Dec 9, 2023, 4:29 PM IST

ನಂಜನಗೂಡು(ಡಿ.09):  ಹಾಲಿನ ವಾಹನದಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದಾಗ ತಾಲೂಕಿನ ಹೆಡಿಯಾಲ ಸಮೀಪದ ಈರೇಗೌಡನಹುಂಡಿ ಬಳಿ ಉರುಳಿ ಬಿದ್ದು 9 ಮಂದಿ ಗಾಯಗೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಬಳ್ಳೂರು ಹುಂಡಿ, ನಾಗಣಾಪುರ ಹಾಗೂ ಮಹದೇವನಗರದಿಂದ ಹಡಿಯಾಲ ಗ್ರಾಮದ ಪ್ರೌಢಶಾಲೆಗೆ ತೆರಳಲು 9 ಮಂದಿ ವಿದ್ಯಾರ್ಥಿಗಳು ಖಾಸಗಿ ಡೈರಿಯೊಂದರ ಹಾಲಿನ ವಾಹನವನ್ನು ಏರಿದ್ದಾರೆ. ಸರಕು ಸಾಗಾಣೆ ಆಟೋ ಈರೇಗೌಡನಹುಂಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಯಂಚಿನಲ್ಲಿ ಉರುಳಿದ್ದರಿಂದ ವಾಹನದಲ್ಲಿದ್ದ ಅನಷ, ಬೇಬಿ, ಮಿಲನ, ಕೌಶಲ್ಯ, ಅಂಜಲಿ, ಕುಮಾರಿ, ವಿನೋದ, ಸೋಮಣ್ಣ ಹಾಗೂ ಮಣಿಕಂಠ ಎಂಬ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಆಂಬುಲೆನ್ಸ್‌ ಅಪಘಾತ: ಮದುವೆ ವಾರ್ಷಿಕೋತ್ಸವ ಗಿಫ್ಟ್ ಕೊಡ್ತೀನಂತ ಆಸ್ಪತ್ರೆಗೆ ಹೊರಟ ಗರ್ಭಿಣಿ ಹೆಂಡ್ತಿ ದಾರುಣ ಸಾವು!

ಇನ್ನು ಇದೇ ವಾಹನದಲ್ಲಿ ಸಂಚರಿಸುತ್ತಿದ್ದ ಬಳ್ಳೂರುಹುಂಡಿಯ ನಿವಾಸಿಗಳಾದ ಉದಯ್ ಹಾಗೂ ಮಹೇಶ ಎಂಬುವರೂ ಅವಘಡದಲ್ಲಿ ಗಾಯಗೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಸ್ಥಳೀಯರು ತಕ್ಷಣ ತುರ್ತು ವಾಹನದಲ್ಲಿ ಗಾಯಾಳುಗಳನ್ನು ಹೆಡಿಯಾಲ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಹುಲ್ಲಹಳ್ಳಿ ಪೊಲೀಸ್‌ ಠಾಣೆಯ ಎಸ್‌ಐ ರಮೇಶ್ ಕರಕಿಕಟ್ಟೆ ಹಾಗೂ ಸಿಬ್ಬಂದಿ ಮಹಜರು ನಡೆಸಿ ಅಪಘಾತಕ್ಕೀಡಾಗಿರುವ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ ಸಂಭವಿಸಿದ ಬಳಿಕ ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios