ಒಂದೇ ದಿನದಲ್ಲಿ 9 ಬಾಲ್ಯ ವಿವಾಹ..! ಪೊಲೀಸ್ ಬಂದೋಬಸ್ತಿನೊಂದಿಗೆ ದಾಳಿ
ಜಿಲ್ಲೆಯಲ್ಲಿ ಒಂದೇ ದಿನ ನಡೆಯಬೇಕಿದ್ದ 9 ಬಾಲ್ಯವಿವಾಹವನ್ನು ತಡೆದಿರುವ ಘಟನೆ ಸೋಮವಾರ ನಡೆದಿದೆ. ಜಿಲ್ಲೆಯ ಚಾಮರಾಜನಗರ ತಾಲೂಕಿನ ಹರದನಹಳ್ಳಿ, ಅಮಚವಾಡಿ, ಅರಕಲವಾಡಿ, ಯಳಂದೂರು ತಾಲೂಕಿನ ಬಸವಪುರ, ವೈ.ಕೆ. ಮೋಳೆ, ಕೊಳ್ಳೇಗಾಲ ತಾಲೂಕಿನ ಬೆಟ್ಟಹಳ್ಳಿ, ಶೆಟ್ಟಹಳ್ಳಿ, ಚಿಕ್ಕಲ್ಲೂರು, ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ.
ಚಾಮರಾಜನಗರ(ಜೂ. 16): ಜಿಲ್ಲೆಯಲ್ಲಿ ಒಂದೇ ದಿನ ನಡೆಯಬೇಕಿದ್ದ 9 ಬಾಲ್ಯವಿವಾಹವನ್ನು ತಡೆದಿರುವ ಘಟನೆ ಸೋಮವಾರ ನಡೆದಿದೆ. ಜಿಲ್ಲೆಯ ಚಾಮರಾಜನಗರ ತಾಲೂಕಿನ ಹರದನಹಳ್ಳಿ, ಅಮಚವಾಡಿ, ಅರಕಲವಾಡಿ, ಯಳಂದೂರು ತಾಲೂಕಿನ ಬಸವಪುರ, ವೈ.ಕೆ. ಮೋಳೆ, ಕೊಳ್ಳೇಗಾಲ ತಾಲೂಕಿನ ಬೆಟ್ಟಹಳ್ಳಿ, ಶೆಟ್ಟಹಳ್ಳಿ, ಚಿಕ್ಕಲ್ಲೂರು, ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಚೈಲ್ಡ್‌ಲೈನ್ ಮೂಲಕ ಬಂದ ಬಾಲ್ಯವಿವಾಹ ಮಾಹಿತಿ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು ನೇತೃತ್ವದಲ್ಲಿ ಅಂಗನವಾಡಿ ಸೂಪರ್‌ವೈಜರ್ ಹಾಗೂ ಅಂಗನವಾಡಿ ಕಾರ್ಯಕರ್ತರು ಪೊಲೀಸ್ ಬಂದೋಬಸ್ತಿನೊಂದಿಗೆ ದಾಳಿ ನಡೆಸಿ ಬಾಲ್ಯವಿವಾಹವನ್ನು ತಡೆದಿದ್ದಾರೆ.
ಗೋವಾ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ SSLC ಪರೀಕ್ಷೆಗೆ ಅವಕಾಶವಿಲ್ಲ..?
ಬಾಲ್ಯ ವಿವಾಹ ನಡೆಸುತ್ತಿದ್ದ ಸ್ಥಳದಲ್ಲಿ ವಧುವಿಗೆ 18 ವರ್ಷ ತುಂಬುವ ಮೊದಲು ಹಾಗೂ ವರನಿಗೆ 21 ವರ್ಷ ತುಂಬುವ ಮೊದಲು ಮದುವೆ ಮಾಡಿದರೆ ಉಂಟಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸಿ ವಧು ಮತ್ತು ವರ ಎರಡು ಕಡೆಯವರಿಂದ ಮುಚ್ಚಳಿಕೆ ಪತ್ರವನ್ನು ಅಧಿಕಾರಿಗಳು ಪಡೆದಿದ್ದಾರೆ.
ಇನ್ನು ಈ ತಿಂಗಳಿನಲ್ಲಿ 20 ಬಾಲ್ಯ ವಿವಾಹಗಳನ್ನು ನಿಲ್ಲಿಸಿದ್ದು, ಕಳೆದ ಮೇ ತಿಂಗಳಿನಲ್ಲಿ 18 ಬಾಲ್ಯ ವಿವಾಹ ಪ್ರಕರಣಗಳನ್ನು ಮಕ್ಕಳ ಸಹಾಯವಾಣಿ ನಿಲ್ಲಿಸಿದೆ. ಮೇ ನಲ್ಲಿ ಮೂರು ಬಾಲ್ಯವಿವಾಹ ನಡೆದಿದ್ದು ಎರಡು ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ.