ಸಿಂಗಟಾಲೂರು ಬ್ಯಾರೇಜಿಂದ 89,000 ಕ್ಯುಸೆಕ್ ನೀರು ಬಿಡುಗಡೆ: ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಶುರು
ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಸಿಂಗಟಾಲೂರು ಬ್ಯಾರೇಜಿನಿಂದ ಗುರುವಾರ ಸುಮಾರು 89,205 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಬ್ಯಾರೇಜ್ ಒಟ್ಟು 3.12 ಟಿಎಂಸಿ ನೀರುಸಂಗ್ರಹ ಸಾಮರ್ಥ್ಯ ಹೊಂದಿದೆ.
ಮುಂಡರಗಿ(ಜು.15): ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಮ್ಮಿಗಿ ಹತ್ತಿರವಿರುವ ಸಿಂಗಟಾಲೂರು ಏತನೀರಾವರಿ ಬ್ಯಾರೇಜ್‌ನ 26 ಗೇಟ್‌ಗಳಲ್ಲಿ ಗುರುವಾರ 19 ಗೇಟ್‌ಗಳನ್ನು ತೆರವುಗೊಳಿಸಲಾಗಿದೆ. ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಸಿಂಗಟಾಲೂರು ಬ್ಯಾರೇಜಿನಿಂದ ಗುರುವಾರ ಸುಮಾರು 89,205 ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಬ್ಯಾರೇಜ್ ಒಟ್ಟು 3.12 ಟಿಎಂಸಿ ನೀರುಸಂಗ್ರಹ ಸಾಮರ್ಥ್ಯ ಹೊಂದಿದೆ.
ಮುಂಡರಗಿ ಭಾಗದ ನದಿ ತಟದಲ್ಲಿರುವ ಗ್ರಾಮಗಳಾದ ಹಮ್ಮಿಗಿ, ಸಿಂಗಟಾಲೂರು, ಶೀರನಹಳ್ಳಿ, ಕೊರ್ಲಹಳ್ಳಿ ಹಾಗೂ ಹೆಸರೂರ ಗ್ರಾಮಗಳು ಹಾಗೂ ಮುಳುಗಡೆ ಪ್ರದೇಶಗಳಾದ ಗುಮ್ಮಗೋಳ, ಬಿದರಹಳ್ಳಿ, ವಿಠಲಾಪುರ ಗ್ರಾಮಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆಗಳು ಹೆಚ್ಚಿದ್ದು, ಯಾವಾಗ ನೀರು ಹೆಚ್ಚಾಗುತ್ತದೆಯೋ ಎನ್ನುವ ಭಯದಲ್ಲಿ ಗ್ರಾಮಸ್ಥರು ಕಾಲ ಕಳೆಯುವಂತಾಗಿದೆ. ಇದೀಗ ಯಾವುದೇ ಗ್ರಾಮಗಳಿಗೂ ಸಹ ಅಪಾಯವಿಲ್ಲ ಎನ್ನಲಾಗುತ್ತಿದೆ.
ಕೊಪ್ಪಳ: ಹತ್ತು ವರ್ಷವಾದರೂ ಬಾರದ ಹನಿ ನೀರು
ಕೆಸರು ಗದ್ದೆಯಾದ ರಸ್ತೆಗಳು, ವಿದ್ಯಾರ್ಥಿಗಳಿಗೆ ನಿತ್ಯ ತೀವ್ರ ಕಿರಿಕಿರಿ
ರೋಣ: ನಿರಂತರ ಮಳೆಯಿಂದಾಗಿ ಪಟ್ಟಣದಾದ್ಯಂತ ಪ್ರಮುಖ ಮತ್ತು ಒಳ ರಸ್ತೆಗಳು ಹದಗೆಟ್ಟು ಕೆಸರು ಗದ್ದೆಯಂತಾಗಿವೆ. ಇದರಿಂದ ಶಾಲಾ ಮಕ್ಕಳಿಗೆ, ಪಾಲಕರಿಗೆ, ಪಾದಚಾರಿಗಳಿಗೆ ತೀವ್ರ ಕಿರಿಕಿರಿಯಾಗಿದ್ದು, ರಸ್ತೆಯೂದ್ದಕ್ಕೂ ಗುಂಡಿಯಲ್ಲಿ ನಿಂತಿರುವ ಗಲೀಜು ನೀರು ತೆರವಿಗಾಗಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಲ್ಲಿ ಸ್ಥಳೀಯ ಪುರಸಭೆ ಗಮನ ಹರಿಸದೇ ನಿರ್ಲಕ್ಷ ವಹಿಸಿದ್ದು, ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದ 16ನೇ ವಾರ್ಡನ ಶಿವಾನಂದ ನಗರ ಬಡಾವಣೆಯಲ್ಲಿ ಮುಖ್ಯ ರಸ್ತೆ, ಅಡ್ಡ ರಸ್ತೆಗಳು ಸಂಪೂರ್ಣ ಹದಗೆಟ್ಟು ರಸ್ತೆಯೂದ್ದಕ್ಕೂ ಬಿದ್ದಿದ್ದ ತಗ್ಗು ಗುಂಡಿ ಬ ಗುಂಡಿಯಲ್ಲಿ ಮಳೆ ನೀರು ವಾಹನ ಪಾದಚಾರಿಗಳು, ಬೈಕ್ ಸವಾರರು ಸರ್ಕಸ್ ಮಾಡಿಕೊಂಡು ರಸ್ತೆ ದಾಟಬೇಕಾದ ಪರಿಸ್ಥಿತಿ ಬಂದೊದಗಿದೆ. ಶಾಲಾ ಮಕ್ಕಳು ಕೆಸರಿನಲ್ಲೆ ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾರೆ. ಇಲ್ಲಿನ ಪ್ರಮುಖ ರಸ್ತೆಯೂ ಅತ್ಯಂತ ಹದಗೆಟ್ಟಿದ್ದು, ಈ ಮೂಲಕ ಶಾರದಾ ಪ್ರೌಢಶಾಲೆ, ವಿದ್ಯಾಚೇತನ ಪ್ರಾಥಮಿಕ ಶಾಲೆ, ಬಸವರಾಜ ಶಾಸ್ತ್ರಿ ಪ್ರೌಢಶಾಲೆ, ಆಶಾ ಕಿರಣ ಕಾನ್ವೆಂಟ್ ಶಾಲೆ, ಗ್ರೀನ್ ವುಡ್ ಇಂಟರ ನ್ಯಾಶನಲ್ ಆಂಗ್ಲ ಮಾಧ್ಯಮ ಪ್ರೌಢ ಮತ್ತು ಪ್ರಾಥಮಿಕ ಶಾಲೆ, ಕೆ.ವ್ಹಿ. ಶಾಂತಗೇರಿಮಠ ಪ್ರೌಢಶಾಲೆ , ಮಲ್ಲಿಕಾರ್ಜುನ ಪ್ರಾಥಮಿಕ ಶಾಲೆ, ಶಾರದಾ ಬಾಲಕಿಯರ ವಸತಿ ನಿಲಯ ಹೀಗೆ ಹತ್ತಾರು ಶಿಕ್ಷಣ ಸಂಸ್ಥೆಗಳಿವೆ. ನಿತ್ಯ ಸಾವಿರಕ್ಕು ಹೆಚ್ಚು ಮಕ್ಕಳು ಕೆಸರು ತುಂಬಿದ, ತೆಗ್ಗು ಗುಂಡಿ ಬಿದ್ದ ರಸ್ತೆಯಲ್ಲಿಯೇ ಪ್ರಯಾಸದಾಯವಾಗಿ ನಡೆದುಕೊಂಡು ಹೋಗುತ್ತಿದ್ದಾರೆ.
Koppal: Singatalur Lift Irrigation Project ಜಾರಿಗೆ ಮಧ್ಯಪ್ರದೇಶ ಮಾದರಿ
ಪಾಲಕರಿಗಿಲ್ಲ ನೆಮ್ಮದಿ
ಕೆಸರುಮಯ ರಸ್ತೆಗೆ ಭಯಗೊಂಡು ಕೆಲ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆತಂದು, ಮರಳಿ ಕರೆದೊಯ್ಯುತ್ತಾರೆ. ಆಕಸ್ಮಾತ ಮಕ್ಕಳೆ ಪಾಲಕರ ಸಹಾಯವಿಲ್ಲದೇ ಶಾಲೆಗೆ ತೆರಳಿದಲ್ಲಿ ರಸ್ತೆಯಲ್ಲಿನ ಕೆಸರಲ್ಲಿ ಬಿದ್ದು ಶಾಲೆಗೆ ಹೋಗದೇ ಮರಳಿ ಮನೆಗೆ ಬರುವದು ಗ್ಯಾರಂಟಿ. ಬೈಕ್ ಸವಾರು ಗುಂಡಿ ತಪ್ಪಿಸಲು ಹೋಗಿ ಟೈರ್ ಸ್ಕಿಡ್ ಆಗಿ ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಎದುರಿಗೆ ವಾಹನ ಬಂದಲ್ಲಿ ಅದರಿಂದ ಸಿಡಿಯುವ ಕೆಸರನ್ನು ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಮಕ್ಕಳು, ಪಾಲಕರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ನಿತ್ಯವೂ ನಾನಾ ರೀತಿಯ ಸಮಸ್ಯೆ ಉಂಟು ಮಾಡುವ ರಸ್ತೆಯೂದ್ದಕ್ಕೂ ನಿಂತಿರುವ ಕೆಸರು ನೀರು ತೆರವು, ತೆಗ್ಗು ಗುಂಡಿ ಮುಚ್ಚುವಲ್ಲಿ ಮುಂದಾಗದ ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಬೇಜವಾಬ್ದಾರಿಗೆ ಜನತೆ ತೀವ್ರ ಬೆಸರ ವ್ಯಕ್ತಪಡಿಸುತ್ತಿದ್ದಾರೆ.
ತಕ್ಷಣವೇ ದುರಸ್ತಿಗೆ ಮುಂದಾಗಿ
ವಿವಿಧ ಶಾಲೆಗೆ ತೆರಳುವ ಶಿವಾನಂದ ಬಡಾವಣೆಯ ಮುಖ್ಯ ರಸ್ತೆ ಹಾಗೂ ಅಡ್ಡ ರಸ್ತೆಗಳಲ್ಲಿ ಬಿದ್ದಿರುವ ತೆಗ್ಗುಗುಂಡಿಗಳನ್ನು ಕನಿಷ್ಠಪಕ್ಷ ಕಲ್ಲಿ, ಕಡಿ, ಕೆಂಪು ಮಣ್ಣು( ಗರಸು) ಹಾಕಿಯಾದರೂ ಮುಚ್ಚುವಲ್ಲಿ, ಜನತೆಗೆ, ಶಾಲಾ ಮಕ್ಕಳಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಲ್ಲಿ ಸ್ಥಳೀಯ ಪುರಸಭೆ ತಕ್ಷಣವೇ ಗಮನ ಹರಿಸಬೇಕು ಎಂದು ಶಾಲಾ ವಿದ್ಯಾರ್ಥಿಗಳು, ಪಾಲಕರ ಆಗ್ರಹವಾಗಿದೆ.