ಬೆಂಗಳೂರು(ಜು.26): ಕೊರೋನಾ ಸೋಂಕಿನಿಂದ ಗುಣಮುಖರಾದ 89 ವರ್ಷದ ವೃದ್ಧರೊಬ್ಬರು ತಮ್ಮ ಸಮಾನ ವಯಸ್ಕರಿಗೆ ಆತ್ಮಸೈರ್ಯ ತುಂಬಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧರು ಶುಕ್ರವಾರ ಕೊರೋನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದರು.

ಈ ನಡುವೆ ಕೊರೋನಾ ಬಗ್ಗೆ ಯಾರೂ ಆತಂಕಪಡಬೇಕಾಗಿಲ್ಲ. ಸೋಂಕು ಬಂದಿದೆ ಎಂದು ಭೀತಿಗೆ ಒಳಗಾಗದೆ ಧೈರ್ಯದಿಂದ ಇರಿ ಎಂದು ವಿಶ್ವಾಸದ ನುಡಿಗಳನ್ನು ಆಡಿದ್ದಾರೆ. ಶತಾ​ಯುಷಿ ಮಹಿ​ಳೆ​ಯೊ​ಬ್ಬರು ಮನೆ​ಯಲ್ಲೇ ಚಿಕಿತ್ಸೆ ಪಡೆ​ದು ಸೋಂಕಿಗೆ ಸೆಡ್ಡು ಹೊಡೆದು ಗುಣ​ಮು​ಖ​ರಾ​ಗಿದ್ದರು. ಈ ಮೂಲಕ ಕೊರೋನಾ ಗೆದ್ದ ರಾಜ್ಯದ ಮೊದಲ ಶತಾ​ಯುಷಿ ಎನಿಸಿ​ಕೊಂಡಿ​ದ್ದರು.

ಆಸ್ಪತ್ರೆಗೆ ಹೋಗಿದ್ದು ಜಾಲಿ ಟ್ರಿಪ್‌ಗೆ ಹೋದಂತೆ ಇತ್ತು: ಕೊರೋನಾ ಗೆದ್ದ ಹೆಡ್‌ ಕಾನ್‌ಸ್ಟೇಬಲ್

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ಹಾಲಮ್ಮ (100) ಕೊರೋನಾ ಗೆದ್ದು ಬಂದಿರುವ ಶತಾಯುಷಿ. ಸೋಂಕಿ​ನಿಂದ ಚೇತ​ರಿ​ಸಿ​ಕೊಂಡಿ​ರುವ ಈ ಹಿರಿ​ಯ​ಜ್ಜಿ ಸದ್ಯ ಮಾಮೂ​ಲಿ​ಯಂತಾ​ಗಿ​ದ್ದಾರೆ. ‘ನಾನು ಈ ಸೋಂಕಿಗೆ ಭಯ​ಪ​ಟ್ಟಿಲ್ಲ, ಇದು ಮಾರ​ಣಾಂತಿಕ ಕಾಯಿಲೆ ಅಲ್ಲ. ಯಾರೂ ಭಯ​ಪ​ಡ​ಬೇಡಿ’ ಎಂದು ಇತ​ರ​ರಿಗೆ ಧೈರ್ಯ​ವನ್ನೂ ಹೇಳಿ​ದ್ದಾ​ರೆ.