ಕಲಬುರಗಿ[ಜ.31]: ಫೆ. 5ರಿಂದ 7ರ ವರೆಗೆ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕಲಾಪ ಕಲಬುರಗಿ ಆಕಾಶವಾಣಿ ಕೇಂದ್ರವು ಮೂರು ದಿನಗಳ ಕಾಲ ನೇರಪ್ರಸಾರ ಮಾಡುತ್ತಿದ್ದು, ಕರ್ಣಾಟಕ ಬ್ಯಾಂಕ್ ನೇರಪ್ರಸಾರದ ಪ್ರಾಯೋಜಕತ್ವ ವಹಿಸಿ ಕನ್ನಡದ ನುಡಿ ಸೇವೆ ಗೌರವ ನೀಡಿದೆ.

ಕಲಬುರಗಿ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರ ಮೆರವಣಿಗೆ ದಾರಿ ಯಾವುದಯ್ಯ?

ಕಲಬುರಗಿ ಆಕಾಶವಾಣಿ ಕೇಂದ್ರವು ಫೆ.5ರಿಂದ 7 ರವರೆಗೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಾರ್ತೆ ಮತ್ತು ವಿಶೇಷ ಪ್ರಸಾರ ಹೊರತುಪಡಿಸಿ ನಿರಂತರವಾಗಿ ನೇರ ಪ್ರಸಾರ ಮಾಡಲಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕಾರ್ಯಕಲಾಪ ಇದೇ ಮೊಟ್ಟ ಮೊದಲ ಬಾರಿಗೆ ನೇರ ಪ್ರಸಾರದ ಯೋಜನೆ ಹಾಕಿಕೊಂಡಿದೆ. ಇಂತಹ ಕನ್ನಡ ನುಡಿ ಸೇವೆಗೆ ಕರ್ಣಾಟಕ ಬ್ಯಾಂಕ್ ಪ್ರಸಾರ ಪ್ರಾಯೋಜಕತ್ವ ವಹಿಸಿಕೊಂಡು ಸಮ್ಮೇಳನದ ಕಾರ್ಯಕಲಾಪ ಮನೆ ಮನೆಗಳಿಗೆ ಮುಟ್ಟಿಸುವ ಮಹಾನ್ ಕಾರ್ಯಕ್ಕೆ ಕೈಜೋಡಿಸಿದೆ. 

ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಬಿಟ್ಟಿ ಪ್ರಚಾರ ಜೋರು!

ಕರ್ಣಾಟಕ ಬ್ಯಾಂಕ್‌ನ ಮುಖ್ಯಕಾರ್ಯ ನಿರ್ವಾಹಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅವರು ಕರ್ಣಾಟಕ ಬ್ಯಾಂಕ್‌ನ ನಾಡು ನುಡಿ, ಸಾಂಸ್ಕೃತಿಕ ಸೇವೆ ಅಂಗವಾಗಿ ಆಕಾಶವಾಣಿ ಈ ನೇರ ಪ್ರಸಾರ ಕಾರ್ಯಕ್ಕೆ ಕೈಜೋಡಿಸಲು ಒಪ್ಪಿಗೆ ನೀಡಿರುವುದು ಅಭಿನಂದನೀಯ ಎಂದು ಆಕಾಶವಾಣಿ ಪ್ರಕಟಣೆಯಲ್ಲಿ ತಿಳಿಸಿದೆ.