ಶಿವಮೊಗ್ಗದ ಸಕ್ರೆಬೈಲು ಕ್ಯಾಂಪ್‌ನ ಗೀತಾ ನಿಧನ

ಶಿವಮೊಗ್ಗದ ಸಕ್ರೆಬೈಲು ಕ್ಯಾಂಪ್‌ನ ಹಿರಿಯ ಆನೆ ಎನಿಸಿಕೊಂಡಿದ್ದ ಗೀತಾ ಮೃತಪಟ್ಟಿದೆ. ಸಕ್ರೇಬೈಲಿಗೆ ಬಂದಾಗಿನಿಂದ 6 ಮರಿಗಳನ್ನ ಹಾಕಿದೆ.

85 year old geeta elephant dies at Shivamogga sakrebyle camp rbj

ಶಿವಮೊಗ್ಗ, (ಡಿ.13): ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಸಕ್ರೆಬೈಲು ಆನೆ ಕ್ಯಾಂಪ್‌ನ ಗೀತಾ ಸಾವನ್ನಪ್ಪಿದೆ. 

ಇಂದು (ಭಾನುವಾರ) ಭಾನುವಾರ ಸಕ್ರೆಬೈಲು ಶಿಬಿರದಲ್ಲಿ 85 ವರ್ಷದ ಹಿರಿಯ ಗೀತಾ ಆನೆ ಮೃತಪಟ್ಟಿದೆ. ಅನಾರೋಗ್ಯ ಪೀಡಿತವಾಗಿದ್ದ ಅದು ಕಳೆದ 15 ದಿನಗಳಿಂದ ಕಡಿಮೆ ಆಹಾರ ಸೇವಿಸುತ್ತಿತ್ತು. 

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಕಾಡಾನೆ ದಾಳಿ, ಆನೆ ರಂಗ ಸಾವು

ಶನಿವಾರ ರಾತ್ರಿ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿತ್ತು. ಬಳಿಕ ಚಿಕಿತ್ಸೆ ನೀಡಲಾಯಿತು. ಆದ್ರೆ, ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ ಎಂದು ಆನೆ ಕ್ಯಾಂಪ್‌ನ ವೈದ್ಯ ಡಾ. ವಿನಯ್ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದ ದಸರಾ ಮೆರವಣಿಗೆಯಲ್ಲಿ 8 ಬಾರಿ ಭಾಗವಹಿಸಿದ್ದ ಗೀತಾ ಆನೆ, ಸಕ್ರೇಬೈಲಿಗೆ ಬಂದಾಗಿನಿಂದ 6 ಮರಿಗಳನ್ನ ಹಾಕಿದೆ.
ರಂಗ, ನೇತ್ರಾ ಆಲೆ ಇದರ ಮರಿಗಳಾಗಿವೆ. ಇದೀಗ ಗೀತಾ ಸಾವಿನಿಂದ ಸಕ್ರೇಬೈಲಿನಲ್ಲಿ ಆನೆಗಳ ಸಂಖ್ಯೆ 22 ಕ್ಕೆ ಕುಸಿತ ಕಂಡಿದೆ.

Latest Videos
Follow Us:
Download App:
  • android
  • ios