Asianet Suvarna News Asianet Suvarna News

ಕೊರೋನಾದಿಂದ ವಾಣಿಜ್ಯ ಕ್ಷೇತ್ರಗಳಿಗೆ ಹೊಡೆತ: ಸರಕಾರಕ್ಕೆ 85 ಸಾವಿರ ಕೋಟಿ ನಷ್ಟ, ಬಂಗಾರಪ್ಪ

ಬಗರ್‌ ಹುಕುಂ ಸಾಗು​ವಳಿದಾರ​ರಿಗೆ ಪಟ್ಟಾ ವಿತ​ರಿ​ಸಲು ಆಗ್ರ​ಹಿ​ಸು​ವೆ| ಕೇಂದ್ರ ಮತ್ತು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸುವ ಮೂಲಕ ಡೀಮ್ಸ್‌ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ವಹಿಸಲು ಸಾಧ್ಯ| ಮಲೆನಾಡು ಮತ್ತು ಕಲಬುರ್ಗಿ ವಿಭಾಗದಲ್ಲಿ ಬಗರ್‌ ಹುಕುಂ ಭೂಮಿ ಹಂಚಿಕೆ ಸಾವಿರಾರು ಅರ್ಜಿ ವಿಲೇವಾರಿಗೆ ಬಾಕಿ: ಶಾಸಕ ಕುಮಾರ ಬಂಗಾರಪ್ಪ| 

85 thousand crore rs loss to the government due to Coronavirus grg
Author
Bengaluru, First Published Feb 6, 2021, 12:41 PM IST

ಗಂಗಾವತಿ(ಫೆ.06): ಕಳೆದ 8-10 ತಿಂಗಳಲ್ಲಿ ರಾಜ್ಯದಲ್ಲಿ ಅಬ್ಬರಿಸಿದ ಕೊರೋನಾ ಮಾರಕ ರೋಗದಿಂದ ಸರಕಾರಕ್ಕೆ 85 ಸಾವಿರ ಕೋಟಿ ನಷ್ಟವಾಗಿದೆ ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದ್ದಾರೆ.

ನಗರದ ಮಾಜಿ ಸಂಸದ ಎಚ್‌.ಜಿ. ರಾಮುಲು ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದಲ್ಲಿಯೇ ಕೊರೋನಾ ಮಾರಕ ರೋಗ ಎಲ್ಲರಿಗೂ ತೊಂದರೆ ಕೊಟ್ಟಿದೆ. ಅದರಂತೆ ರಾಜ್ಯದಲ್ಲಿ ಎಲ್ಲ ವಾಣಿಜ್ಯ ವ್ಯವಹಾರ ಸೇರಿದಂತೆ ವಿವಿಧ ವಾಣಿಜ್ಯ ಕ್ಷೇತ್ರಗಳಿಗೂ ಹೊಡೆತ ಬಿದ್ದಿದ್ದು, ಇದರಿಂದಾಗಿ ಸರಕಾರಕ್ಕೆ 85 ಸಾವಿರ ಕೋಟಿ ನಷ್ಟವಾಗಿದೆ ಎಂದು ತಿಳಿಸಿದರು.

ಮುಖ್ಯೋಪಾಧ್ಯಾಯರಿನ್ನು ಪಾಠ ಮಾಡುವುದು ಕಡ್ಡಾಯ..!

ಕಳೆದ ಮೂರು ದಶಕಗಳಿಂದ ಬಾಕಿ ಇರುವ ಫಾರಂ 50 ಮತ್ತು 53 ಅರ್ಜಿ ವಿಲೇವಾರಿ ಮಾಡಿ ಬಗರ್‌ಹುಕುಂ ಭೂಮಿ ಉಳುವವರಿಗೆ ಸಾಗುವಳಿ ಪಟ್ಟಾ ವಿತರಿಸಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ಒತ್ತಾಯಿಸುವೆ. ಬಗರ್‌ ಹುಕುಂ ಭೂಮಿ ಉಳುಮೆ ಮಾಡುತ್ತಿರುವ ಕೃಷಿಕರು ಫಾರಂ ನಂ. 50 ಮತ್ತು 53 ಮೂಲಕ ಪಟ್ಟಾ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಇದುವರೆಗೂ ಸಾಗುವಳಿ ಪಟ್ಟಾ ವಿತರಣೆಗೆ ಯಾವ ಸರಕಾರಗಳೂ ಕ್ರಮ ಕೈಗೊಂಡಿಲ್ಲ. ಕಂದಾಯ ಸಚಿವ ಆರ್‌. ಅಶೋಕ ಅವರು ಡೀಮ್ಡ್‌ ಅರಣ್ಯ ಪ್ರದೇಶವನ್ನು ಕಂದಾಯ ಇಲಾಖೆ ವಹಿಸಿಕೊಂಡು ಭೂಮಿ ಹಂಚಿಕೆ ಮತ್ತು ಮನೆ ನಿರ್ಮಾಣಕ್ಕೆ ಜಾಗ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿಕೆ ನೀಡಿದ್ದು, ಕೇಂದ್ರ ಮತ್ತು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸುವ ಮೂಲಕ ಡೀಮ್ಸ್‌ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ವಹಿಸಲು ಸಾಧ್ಯವಿದೆ. ರಾಜ್ಯ ಸರಕಾರ ನಿರಂತರ ಯತ್ನದ ಮೂಲಕ ಈ ಕಾರ್ಯ ಮಾಡಬೇಕು. ಈಗಾಗಲೇ ಬೆಂಗಳೂರಿನಲ್ಲಿ ಡೀಮ್ಸ್‌ ಅರಣ್ಯ ಪ್ರದೇಶ ಕುರಿತು ಮೂರು ಬಾರಿ ಸಭೆ ಜರುಗಿದ್ದು, ಮಲೆನಾಡು ಮತ್ತು ಕಲಬುರ್ಗಿ ವಿಭಾಗದಲ್ಲಿ ಬಗರ್‌ ಹುಕುಂ ಭೂಮಿ ಹಂಚಿಕೆ ಸಾವಿರಾರು ಅರ್ಜಿ ವಿಲೇವಾರಿಗೆ ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ನಿರಂತರವಾಗಿ ಸರಕಾರದ ಗಮನ ಸೆಳೆಯುವ ಕಾರ್ಯ ಮಾಡುತ್ತಿರುವುದಾಗಿ ಕುಮಾರ ಬಂಗಾರಪ್ಪ ತಿಳಿಸಿದ್ದಾರೆ. 
ಈ ಸಂದರ್ಭದಲ್ಲಿ ಮಾಜಿ ಸಂಸದ ಎಚ್‌.ಜಿ. ರಾಮುಲು, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ ಇದ್ದರು.
 

Follow Us:
Download App:
  • android
  • ios