Asianet Suvarna News Asianet Suvarna News

ಇದು ವೃದ್ಧಾಶ್ರಮವಲ್ಲ ನರಕ : ಚೇರ್‌ನಿಂದ ಬಡಿದು ವೃದ್ಧೆ ಕೊಲೆ

  •  ಕತ್ತಲೆ ಕೋಣೆಯಲ್ಲಿದ್ದ ಇಬ್ಬರು ವೃದ್ಧೆಯರ ನಡುವೆ ಜಗಳ ನಡೆದು ಮತ್ತೊಬ್ಬರ ಕೊಲೆ
  •  ವೃದ್ಧಾಶ್ರಮದ ಮುಖ್ಯ ಸ್ಥ ಸೇರಿ ಐವರನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧನ
82 year old lady murdered in old age home bengaluru snr
Author
Bengaluru, First Published Aug 17, 2021, 11:42 AM IST

ಬೆಂಗಳೂರು (ಆ.17):  ಕತ್ತಲೆ ಕೋಣೆಯಲ್ಲಿದ್ದ ಇಬ್ಬರು ವೃದ್ಧೆಯರ ನಡುವೆ ಜಗಳ ನಡೆದು ಮತ್ತೊಬ್ಬರ ಕೊಲೆ ಆಗಿರುವ ಘಟನೆ ನಡೆದಿದ್ದು, ಘಟನೆಯನ್ನು ಮುಚ್ಚಿಲು ಯತ್ನಿಸಿದ ವೃದ್ಧಾಶ್ರಮದ ಮುಖ್ಯ ಸ್ಥ ಸೇರಿ ಐವರನ್ನು ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಕಮಲಮ್ಮ (82) ಮೃತರು. ನಾಗರ ಬಾವಿಯ ಉಸಿರು ಫೌಂಡೇಷನ್ ಮುಖ್ಯಸ್ಥ ಯೋಗೇಶ್, ನೌಕರರಾದ ಭಾಸ್ಕರ್, ಪ್ರೇಮಾ, ಮಂಜುನಾಥ್ ಮತ್ತು ವೃದ್ಧೆ ಕೊಲೆ ಮಾಡಿದ ವಸಂತಮ್ಮ ಅವರನ್ನು ಬಂಧಿಸಲಾ ಗಿದೆ. 7ರಂದು ಕಮಲಮ್ಮ ಅವರ ಮೇಲೆ ವಸಂತಮ್ಮ ಚೇರ್‌ನಿಂದ ಹಲ್ಲೆ ನಡೆಸಿದ್ದರಿಂದ ತೀವ್ರ ರಕ್ತ ಸ್ರಾವವಾಗಿ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಬೆಳಗಾವಿ: ಸಹೋದರರ ಜೊತೆಗೂಡಿ ಪತ್ನಿಯನ್ನೇ ಹತ್ಯೆಗೈದ ಪಾಪಿ ಪತಿ..!

ಹಳೇ ಮದ್ರಾಸ್ ರಸ್ತೆಯ ಭಟ್ಟರಹಳ್ಳಿ ನಿವಾಸಿಯಾದ ಕಮಲಮ್ಮ ಅವರು ಮರೆವು ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಕೊಡಿಸುವ ಉದ್ದೇಶ ದಿಂದ ವೃದ್ಧೆಯ ಪುತ್ರ ತಾಯಿಯನ್ನು ಮಾಚ್ ನರ್ಲ್ಲಿ ನಾಗರಭಾವಿಯಲ್ಲಿರುವ ಉಸಿರು ಫೌಂಡೇಷನ್ ನಡೆಸುತ್ತಿದ್ದ ವೃದ್ಧಾಶ್ರಮಕ್ಕೆ ಸೇರಿಸಿದ್ದರು. 

ಇದಕ್ಕಾಗಿ ತಿಂಗಳಿಗೆ 10 ಸಾವಿರ ಪಾವತಿಸುತ್ತಿದ್ದರು. ಇತ್ತೀಚೆಗೆ ಫೌಂಡೇಷನ್ ಗೆ ಸೇರಿದ ಕಂಠೀರವ ಸ್ಟುಡಿಯೋ ಸಮೀಪ ಇರುವ ಮತ್ತೊಂದು ಶಾಖೆಗೆ ಕಮಲಮ್ಮ ಅವರನ್ನು ಸ್ಥಳಾಂತರಿಸಲಾಗಿತ್ತು. ಮಾನಸಿಕ ಕಾಯಿಲೆ ಎಂಬ ಕಾರಣಕ್ಕೆ ವೃದ್ಧಾಶ್ರಮದ ಸೆಲ್ಲರ್‌ನಲ್ಲಿದ್ದ ಕತ್ತಲೆ ಕೊಠಡಿಯಲ್ಲಿ ಕಮಲಮ್ಮ ಅವರನ್ನು ಕೂಡಿ ಹಾಕಿ ಎರಡು ದಿನಕ್ಕೊಮ್ಮೆ ಊಟ ಕೊಡುತ್ತಿದ್ದರು. 

ಬೆಳಗಾವಿ: ಮಾನಸಿಕ ಖಿನ್ನತೆಯಿಂದ ಯುವಕ ಆತ್ಮಹತ್ಯೆ

ಕತ್ತಲೆ ಕೋಣೆಯಲ್ಲಿ ಕಮಲಮ್ಮ ಜತೆಗೆ ವಸಂತಮ್ಮ ಸಹ ಇದ್ದರು. ಆಗಸ್ಟ್ 7ರಂದು ಊಟದ ವಿಚಾರಕ್ಕೆ ವಸಂತಮ್ಮ ಮತ್ತು ಕಮಲಮ್ಮ ನಡುವೆ ಜಗಳವಾಗಿದ್ದು, ವಸಂತಮ್ಮ, ಚೇರ್‌ನಲ್ಲಿ ಕಮಲಮ್ಮ ತಲೆಗೆ ಮೂರ್ನಾಲ್ಕು ಬಾರಿ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತ ಸ್ರಾವ ಉಂಟಾಗಿ ವೃದ್ಧೆ ಮೃತಪಟ್ಟಿದ್ದಾರೆ. 

ಈ ಸಾವಿನ ಸುದ್ದಿ ಮುಚ್ಚಿಡುವ ಸಲುವಾಗಿ ಫೌಂಡೇಷನ್‌ನವರು ಕಮಲಮ್ಮ ಶವವನ್ನು 1ನೇ ಮಹಡಿಯ ರೂಮ್‌ಗೆ ಸಾಗಿಸಿ ಬಟ್ಟೆ ಬದಲಾಯಿಸಿದ್ದರು. ಇತ್ತ ವಸಂತಮ್ಮ ಅವರ ಬಟ್ಟೆಯನ್ನು ಬದಲಾಯಿಸಿ ರಕ್ತದ ಕಲೆಗಳನ್ನು ಸ್ವಚ್ಛ ಮಾಡಿ ಕಮಲಮ್ಮನ ಪುತ್ರ ರಾಮಚಂದ್ರಗೆ ಕರೆ ಮಾಡಿ ನಿಮ್ಮ ತಾಯಿಗೆ ಉಸಿರಾಟದ ತೊಂದರೆ ಇದೆ ಬೇಗ ಬರುವಂತೆ ಸೂಚಿಸಿ ದ್ದರು. 

ರಾಮಚಂದ್ರ ಬಂದು ನೋಡಿದಾಗ ರೂಮ್‌ನಲ್ಲಿ ರಕ್ತದ ಕಲೆಗಳು ಕಂಡಿದ್ದು, ತಾಯಿ ಎಲ್ಲಿದ್ದಾರೆ ಎಂದು ವಿಚಾರಿಸಿದಾಗ ಆ್ಯಂಬುಲೆನ್‌ಸ್ನಲ್ಲಿ ಶವ ತೋರಿಸಿದ್ದರು. ಅನುಮಾನಗೊಂಡ ರಾಮಚಂದ್ರ, ಈ ಕುರಿತು ದೂರು ದಾಖಲಿಸಿದ್ದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

2ದಿನಕ್ಕೊಮ್ಮೆ ಊಟ:   ಉಸಿರು ಫೌಂಡೇಷನ್ ಮುಖ್ಯಸ್ಥ ಯೋಗೇಶ್, ನಾಗರಬಾವಿಯಲ್ಲಿ ಸುಸಜ್ಜಿತ ವೃದ್ಧಾಶ್ರಮ ತೆರೆದು ಕಂಠೀರವ ಸ್ಟುಡಿಯೋ ಸಮೀಪ ಮತ್ತೊಂದು ಶಾಖೆಯನ್ನು ತೆರೆದಿದ್ದ. ಇಲ್ಲಿ ಯಾವುದೇ ಸೌಲಭ್ಯ ಇರಲಿಲ್ಲ. ವೃದ್ಧಾಶ್ರಮ ಸೇವೆ ಬೇಕೆಂದು ಕೇಳಿಕೊಂಡು ಕರೆ ಮಾಡಿದವರು ಅಥವಾ ಬರುವವರನ್ನು ನಾಗರಬಾವಿಗೆ ಕರೆದು ತೋರಿಸುತ್ತಿದ್ದ. ತಿಂಗಳಿಗೆ 20 ರಿಂದ 30 ಸಾವಿರ ಶುಲ್ಕ ಎಂದು ಪಡೆಯುತ್ತಿದ್ದ. ಹೆಚ್ಚು ಕಾಯಿಲೆ ಅಥವಾ ಗಲಾಟೆ ಮಾಡುವರನ್ನು ಸೆಲ್ಲರ್‌ನಲ್ಲಿ ಇದ್ದ ಕತ್ತಲೆ ಕೋಣೆಗೆ ಕೂಡಿ ಹಾಕಿ ಎರಡು ದಿನಕ್ಕೊಮ್ಮೆ ಊಟ ಕೊಡುತ್ತಿದ್ದ. ವೃದ್ಧರನ್ನು ನೋಡಲು ಬರುತ್ತಿರುವುದಾಗಿ ಅವರ ಕಡೆಯವರು ಹೇಳಿದಾಗ 1ನೇ ಮಹಡಿಗೆ ಸ್ಥಳಾಂತರ ಮಾಡಿ ಭೇಟಿಗೆ ಅವಕಾಶ ಕಲ್ಪಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು

Follow Us:
Download App:
  • android
  • ios