Asianet Suvarna News Asianet Suvarna News

Omicron Threat: ಬೆಂಗ್ಳೂರಲ್ಲಿ ಒಂದೇ ದಿನ 810 ಕೇಸ್‌: ಆರು ತಿಂಗಳಲ್ಲೇ ಗರಿಷ್ಠ..!

*  ಅಂತಾರಾಷ್ಟ್ರೀಯ ಪ್ರವಾಸಿಗರು ವಾಸಿಸುವ ಅಪಾರ್ಟ್‌ಮೆಂಟ್‌ಗಳಲ್ಲಿ ಕಂಟೈನ್ಮೆಂಟ್‌ ವಲಯ ಹೆಚ್ಚು
*  ವಿದೇಶದಿಂದ ಬಂದವರಿಂದ ನಗರದಲ್ಲಿ ಕೋವಿಡ್‌ ಹೆಚ್ಚಳ
*  ಮೈಕ್ರೋ ಕಂಟೈನ್ಮೆಂಟ್‌ 110ಕ್ಕೆ ಏರಿಕೆ
 

810 Coronavirus Cases on Jan 01 in Bengaluru after 8 Months grg
Author
Bengaluru, First Published Jan 2, 2022, 4:36 AM IST

ಬೆಂಗಳೂರು(ಜ.02):  ನಗರದಲ್ಲಿ ಕೊರೋನಾ(Coronavirus) ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, 184 ದಿನಗಳ ಬಳಿಕ ಶನಿವಾರ 800ಕ್ಕೂ ಅಧಿಕ ಸೋಂಕು ಪತ್ತೆಯಾಗಿದೆ. ಶನಿವಾರ 810 ಜನರಿಗೆ ಸೋಂಕು ತಗುಲಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 7876ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತರಾಗುವುದರೊಂದಿಗೆ(Death) ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 16,402ಕ್ಕೆ ಏರಿಕೆಯಾಗಿದೆ.

ಕಳೆದ ಜೂ.29ರಂದು 753 ಮತ್ತು ಜೂ.30ರಂದು 813 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಈವರೆಗಿನ ಅತ್ಯಧಿಕ ಕೊರೋನಾ ಪ್ರಕರಣವಾಗಿತ್ತು. ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,64,428ಕ್ಕೆ ಏರಿಕೆಯಾಗಿದೆ. 218 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,40,149ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ(Department of Health) ವರದಿ ಮಾಹಿತಿ ನೀಡಿದೆ.

Maharastra Corona Alert: 'ಮಹಾ'3ನೇ ಅಲೆ: 80 ಲಕ್ಷ ಕೇಸು, 80,000 ಸಾವು ಸಾಧ್ಯತೆ

ಕಳೆದ ಹತ್ತು ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 5ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು ವಾರ್ಡ್‌ನಲ್ಲಿ 20, ಹಗದೂರು, ದೊಡ್ಡನೆಕ್ಕುಂದಿ, ಅರಕೆರೆ ವಾರ್ಡ್‌ಗಳಲ್ಲಿ ತಲಾ 9, ಶಾಂತಲಾ ನಗರ, ವರ್ತೂರು, ಹೊರಮಾವು ವಾರ್ಡ್‌ಗಳಲ್ಲಿ ತಲಾ 7, ಕೋರಮಂಗಲ, ಬ್ಯಾಟರಾಯನಪುರ ವಾರ್ಡ್‌ನಲ್ಲಿ ತಲಾ 6 ಪ್ರಕರಣಗಳು ಪತ್ತೆಯಾಗುತ್ತಿವೆ.

ಮೈಕ್ರೋ ಕಂಟೈನ್ಮೆಂಟ್‌ 110ಕ್ಕೆ ಏರಿಕೆ

ಪಾಲಿಕೆ(BBMP) ವ್ಯಾಪ್ತಿಯಲ್ಲಿ ಮೈಕ್ರೋ ಕಂಟೈನ್ಮೆಂಟ್‌ಗಳ(Micro Containment) ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ 35, ಮಹದೇವಪುರ 23, ದಕ್ಷಿಣ 15, ಪೂರ್ವ 12, ಯಲಹಂಕ 11, ಪಶ್ಚಿಮ 10, ದಾಸರಹಳ್ಳಿ 3, ಆರ್‌ಆರ್‌ ನಗರ 1 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿದೇಶದಿಂದ ಬಂದವರಿಂದ ನಗರದಲ್ಲಿ ಕೋವಿಡ್‌ ಹೆಚ್ಚಳ

ಅಂತಾರಾಷ್ಟ್ರೀಯ ಪ್ರಯಾಣಿಕರಿಂದ(International Passengers) ಕೋವಿಡ್‌(Covid19) ಪ್ರಮಾಣ ಹೆಚ್ಚುತ್ತಿದ್ದು, ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ಶೇಕಡ 50ರಷ್ಟುಅಪಾರ್ಟ್‌ಮೆಂಟ್‌ಗಳಲ್ಲಿಯೇ ಇದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ಮತ್ತು ಪೂರ್ವ ವಲಯಗಳಲ್ಲಿ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಇಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ಜಾಸ್ತಿ ಇದ್ದಾರೆ. ಈ ಭಾಗದ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರತಿ ನಿತ್ಯ ಮೂರ್ನಾಲ್ಕು ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಹಾಗಾಗಿ ಎಲ್ಲೆಲ್ಲಿ ಮೂರಕ್ಕಿಂತ ಜಾಸ್ತಿ ಸೋಂಕಿತ ಪ್ರಕರಣಗಳು ಇವೆಯೋ ಅಲ್ಲಿ ಕಂಟೈನ್ಮೆಂಟ್‌ ವಲಯಗಳನ್ನು ಗುರುತಿಸಿ ನಿಗಾ ವಹಿಸಿದ್ದೇವೆ ಎಂದು ಹೇಳಿದರು.

Corona Spike: ದೇಶದಲ್ಲಿ 22775 ಕೇಸು, 406 ಸಾವು, ಹೆಚ್ಚಿದ ಆತಂಕ

ನಗರಕ್ಕೆ ಹೊಸದಾಗಿ ಬಂದಿರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಪತ್ತೆ ಮಾಡಿ ಕೋವಿಡ್‌ ಪರೀಕ್ಷೆಗೆ(Covid Test) ಒಳಪಡಿಸುತ್ತಿದ್ದೇವೆ. ಪಾಸಿಟಿವ್‌ ಪತ್ತೆಯಾದರೆ ಅವರನ್ನು ಐಸೋಲೇಷನ್‌ನಲ್ಲಿ ಇರಿಸುತ್ತಿದ್ದು, ಮಾದರಿಯನ್ನು ಜಿನೊಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಿ ಕೊಡುತ್ತಿದ್ದೇವೆ. ಅಪಾರ್ಟ್‌ಮೆಂಟ್‌ಗಳ ಕುರಿತು ಬಿಗಿ ಕ್ರಮಕೈಗೊಂಡಿದ್ದು, ಅಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದೊಂದಿಗೆ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದರು.

ಹೊಸ ವರ್ಷ ಆಚರಣೆ ಸಲುವಾಗಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ನೈಟ್‌ ಕರ್ಫ್ಯೂ(Night Curfew) ಮಾಡುವ ಮತ್ತು ನಿರ್ಬಂಧಗಳನ್ನು ಅನುಸರಿಸಲಾಗುವುದು. ಪ್ರತಿಯೊಬ್ಬರು ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟುಮುಂಜಾಗ್ರತೆ ಕ್ರಮಕೈಗೊಂಡು ಮಾಸ್ಕ್‌, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್‌ ಬಳಕೆಯನ್ನು ಮುಂದುವರೆಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ ಪರೀಕ್ಷೆ ಸಂಖ್ಯೆ ಹೆಚ್ಚಿಸಿದ್ದು, ದಿನಕ್ಕೆ 50 ಸಾವಿರದಷ್ಟುಪರೀಕ್ಷೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ 60 ಸಾವಿರಕ್ಕೆ ಪರೀಕ್ಷೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಜ.3ರಿಂದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಸಿಕಾಕರಣಕ್ಕೆ ಚಾಲನೆ ನೀಡಲಿದ್ದಾರೆ. ಶಾಲೆಗಳ ಮಕ್ಕಳಿಗೆ ಲಸಿಕೆ ಕೊಡಲು ಆದ್ಯತೆ ನೀಡಲಾಗಿದೆ. ನಂತರ ಇತರರಿಗೂ ಲಸಿಕೆ ವಿಸ್ತರಿಸಲಾಗುವುದು. ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಒಂದು ದಿನ ಶಾಲೆಗೆ ಹಾಜರಾಗಿ ಲಸಿಕೆ ಪಡೆಯುವಂತೆ ಶಾಲೆಯ ಮುಖ್ಯಸ್ಥರು ಅವಕಾಶ ನೀಡಬೇಕೆಂದು ಸೂಚನೆ ನೀಡಲಾಗಿದೆ. ಕೋವ್ಯಾಕ್ಸಿನ್‌ ನಿಯಮಾವಳಿಯಂತೆಯೇ ಎರಡು ಡೋಸ್‌ ಲಸಿಕೆಗಳನ್ನು(Vaccine) ನೀಡಲಾಗುವುದು. ಅದಕ್ಕಾಗಿ ಲಸಿಕಾ ತಂಡವನ್ನು ಕಳುಹಿಸುತ್ತಿದ್ದು, ಸಂಖ್ಯೆಗೆ ಅನುಗುಣವಾಗಿ ಲಸಿಕೆ ನೀಡುತ್ತೇವೆ. ಈ ಕುರಿತು ಶಿಕ್ಷಣ ಇಲಾಖೆಯಿಂದ ಸ್ಪಷ್ಟಸೂಚನೆ ಕೊಟ್ಟಿರುವುದಾಗಿ ಹೇಳಿದರು.
 

Follow Us:
Download App:
  • android
  • ios