ಚನ್ನರಾಯಪಟ್ಟಣ [ಜ.18]:  ತಾಲೂಕಿನಲ್ಲಿನ ವಿವಿಧ ಏತ ನೀರಾವರಿ ಯೋಜನೆಗಳಡಿ 80 ಕೆರೆಗಳಿಗೆ ನೀರು ಹರಿಸಲಾಗಿದೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಹೇಳಿದರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿ ಎನ್‌.ಜಿ.ಕೊಪ್ಪಲಿನ ಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ  ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈಗಾಗಲೇ ಕಾಲುವೆಯಲ್ಲಿ ನೀರು ನಿಲ್ಲಿಸಲಾಗಿದೆ. ಇದುವರೆವಿಗೂ ಸಾಧ್ಯವಾದಷ್ಟುಕೆರೆಗಳನ್ನು ತುಂಬಿಸುವ ಮೂಲಕ ಯೋಜನೆ ಸಫಲತೆ ಕಂಡುಕೊಳ್ಳಲಾಗಿದೆ. ಫೆಬ್ರವರಿ ತಿಂಗಳಲ್ಲಿ 10ಟಿಎಂಸಿ ನೀರು ಹರಿಸುವ ನಿರ್ಧಾರವಾಗಿದ್ದು, ಅಷ್ಟರೊಳಗೆ ರೈಲ್ವೆ ಕ್ರಾಸಿಂಗ್‌ ಕಾಮಗಾರಿ ಮತ್ತು ಅರಣ್ಯ ಪ್ರದೇಶದಲ್ಲಿನ 170 ಮೀಟರ್‌ ಆಕ್ವಾಡೆಟ್‌ ಕಾಮಗಾರಿ ಪೂರ್ಣಗೊಳಿಸಿ ಎಲ್ಲ 22 ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.

ಹಿರಿಸಾವೆ-ಜುಟ್ಟನಹಳ್ಳಿ ಯೋಜನೆಯು ಶೇ.100 ರಷ್ಟುಸದ್ಭಳಕೆಗಾಗಿ 52 ಕೋಟಿ ರು.ವೆಚ್ಚದಲ್ಲಿ ಜನಿವಾರ ಅಮಾನಿಕೆರೆಗೆ ನದಿಯಿಂದ ನೇರ ಪೈಪ್‌ಲೇನ್‌ ಅಳವಡಿಕೆ ಜೊತೆಗೆ ಜೋಗಿಪುರ ಗ್ರಾಮದ ಬಳಿ ತೂಬು ಅಳವಡಿಕೆ ಮಾಡಲಾಗಿದೆ. ವರ್ಷದಲ್ಲಿ 120 ದಿನ ನೀರು ಎತ್ತಿದ್ದರೆ ಯೋಜನೆಯಡಿ ಎಲ್ಲ ಕೆರೆಗಳು ಭರ್ತಿಯಾಗಲಿವೆ ಎಂದರು.

‘ಪುಳಿಯೋಗರೆ’ ಪದ ಹೇಳಿಸಿ ಹಾಸ್ಯ ಮಾಡಿದ್ದ ಶಿಕ್ಷಕ ಸಸ್ಪೆಂಡ್!.

ಬರಡು ಭಾಗದ ರೈತರು ಫಲ ಉಣ್ಣುವ ಸಲುವಾಗಿ ಯೋಜನೆಗಾಗಿ ತಮ್ಮ ಭೂಮಿ ಬಿಟ್ಟುಕೊಟ್ಟರೈತರನ್ನು ಎಂದು ಮರೆಯಬಾರದು. ಬಹುತೇಕರಿಗೆ ಪರಿಹಾರ ಸಿಕ್ಕಿಲ್ಲ, ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಿ ಅವರಿಗೆ ಪರಿಹಾರದ ಹಣ ಕೊಡಿಸುವ ಮಹತ್ತರ ಜವಾಬ್ದಾರಿ ಇದೆ. ಭೂಮಿ ನೀಡಿದ ರೈತರಿಗೆಲ್ಲ ಎಷ್ಟುಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದರು.

ಲಕ್ಷ ಸಂಬಳದ ಕೆಲಸ ತೊರೆದು ಕನ್ನಡದಲ್ಲೇ ಪರೀಕ್ಷೆ ಬರೆದು IAS ಪಾಸ್ ಮಾಡಿದ..!...

ನುಗ್ಗೇಹಳ್ಳಿ ಏತನೀರಾವರಿ ಯೋಜನೆ ಪೂರ್ಣಗೊಂಡಿದ್ದು, ಹಿರಿಸಾವೆ-ಜುಟ್ಟನಹಳ್ಳಿ ಯೋಜನೆ ಶೇ.95ರಷ್ಟು, ಆಲಗೋಡನಹಳ್ಳಿ ಶೇ.80ರಷ್ಟು, ಕಲ್ಲೇಸೋಮನಹಳ್ಳಿ ಮುಂದಿನ 15ದಿನಗಳಲ್ಲಿ ಆರಂಭ, ತೋಟಿ ಯೋಜನೆ ಒಂದುವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು, ಕಬ್ಬಳಿ, ದಿಡಗ ಭಾಗದ ಕೆರೆಗಳಿಗೆ ಮುಂದಿನ ಹಂತದಲ್ಲಿ ನೀರು ಹರಿಸುವ ಮೂಲಕ ತಾಲೂಕು ಸಂಪೂರ್ಣ ನೀರಿನ ಬವಣೆಯಿಂದ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ನೀರು ಬಂತೆಂದ್ದು ರೈತರು ಪೋಲು ಮಾಡಬಾರದು, ಕೊಳವೆ ಬಾವಿಯಲ್ಲಿ ಅಂತರ್ಜಲ ಹೆಚ್ಚಾಯಿತೆಂದು ಹರಿಯವ ಪದ್ಧತಿಯಲ್ಲಿ ಕೃಷಿ ಮಾಡದೇ ಹನಿ ನೀರಾವರಿ ಅಳವಡಿಕೆಗೆ ಮುಂದಾಗಬೇಕು. ಜಾಗತೀಕ ತಾಪಮಾನ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಲಾಭದ ದೃಷ್ಟಿಯಿಂದ ತೆಂಗಿನಮರ ಬೆಳೆಸಲಷ್ಟೆಮುಂದಾಗದೇ ಅರಣ್ಯ ಮರಗಳನ್ನು ಬೆಳೆಸುವಲ್ಲಿ ಮುಂದಾಗಬೇಕು ಎಂದರು.

ತಾಪಂ ಸದಸ್ಯ ಗಂಗಣ್ಣ, ಜಿಪಂ ಮಾಜಿ ಸದಸ್ಯ ದೇವರಾಜೇಗೌಡ, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎನ್‌.ಡಿ.ರಮೇಶ್‌, ಮಟ್ಟನವಿಲೆ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ತಾಪಂ ಮಾಜಿ ಸದಸ್ಯರಾದ ಪಿ.ಕೆ.ಮಂಜೇಗೌಡ, ಗಣೇಶ್‌, ಮುಖಂಡರಾದ ಕಗ್ಗೇರೆ ಬಾಬು, ಚನ್ನಹಳ್ಳಿ ಶಂಕರ ಸೇರಿ ಇತರರು ಇದ್ದರು.