ಧಾರವಾಡ(ಜೂ.18): ಜಿಲ್ಲೆ​ಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್‌ ಹರ​ಡು​ತ್ತಿ​ದ್ದು, ಬುಧವಾರ ಮತ್ತೆ 8 ಪ್ರಕರಣಗಳು ಪತ್ತೆಯಾಗಿವೆ.

ಜೂ. 11ರಂದು ಸೋಂಕು ದೃಢಪಟ್ಟ ನವಲಗುಂದ ತಾಲೂಕು ಮೊರಬ ಗ್ರಾಮದ 59 ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಒಬ್ಬರಿಗೆ ಹಾಗೂ ಜೂ. 14ರಂದು ಧಾರವಾಡ ಕಟ್ಟಿಚಾಳನಲ್ಲಿ ದೃಢಪಟ್ಟ 30 ವರ್ಷದ ಮಹಿಳೆಯ ಸಂಪರ್ಕ ಹೊಂದಿದ್ದ 7 ಜನರಿಗೆ ಬುಧವಾರ ಸೋಂಕು ದೃಢಪಟ್ಟಿದೆ.

ಹುಬ್ಬಳ್ಳಿ: ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆ ಸಕ್ಸಕ್‌, ಕೊರೋನಾ ರೋಗಿ ಡಿಸ್ಚಾರ್ಜ್‌

ಮೊರಬ ಗ್ರಾಮದ ವ್ಯಕ್ತಿ ಸಂಪರ್ಕ ಹೊಂದಿದ್ದ 55 ವರ್ಷದ ಪುರುಷ, ಧಾರವಾಡ ಕಟ್ಟಿಚಾಳ ಸಂಪರ್ಕ ಹೊಂದಿದ್ದ 59 ವರ್ಷದ ಪುರುಷ, 5 ವರ್ಷದ ಬಾಲಕಿ, 30 ವರ್ಷದ ಮಹಿಳೆ, 10 ವರ್ಷದ ಬಾಲಕಿ, 4 ವರ್ಷದ ಬಾಲಕ, 34 ವರ್ಷದ ಪುರುಷ ಹಾಗೂ 33 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 171ಕ್ಕೆ ಏರಿಕೆಯಾಗಿದ್ದು, 51 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.