Tumakuru Accident: ಕಂದಕಕ್ಕೆ ಉರುಳಿ ಬಿದ್ದ ಖಾಸಗಿ ಬಸ್: ಸ್ಥಳದಲ್ಲೇ 8 ಮಂದಿ ದುರ್ಮರಣ
* ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ನಡೆದ ಘಟನೆ
* ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಖಾಸಗಿ ಬಸ್
* ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ತುಮಕೂರು(ಮಾ.19): ಚಾಲಕನ ನಿಯಂತ್ರಣ ತಪ್ಪಿದ ಬಸ್‌ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 8 ಮಂದಿ ಮೃತಪಟ್ಟು 25ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಇಂದು(ಶನಿವಾರ) ನಡೆದಿದೆ.
ಮೃತಪಟ್ಟವರ ಹೆಸರು, ವಿಳಾಸ ಇನ್ನೂ ತಿಳಿದು ಬಂದಿಲ್ಲ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಾಳುಗಳನ್ನ ಪಾವಗಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
Mandya Accident: ಪಿಲ್ಲರ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌ಗೆ ಬೆಂಕಿ: ಡ್ರೈವರ್ ಸಜೀವ ದಹನ
ಖಾಸಗಿ ಬಸ್ ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಈ ದರ್ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಗಾಯಾಳುಗಳನ್ನ ಸ್ಥಳೀಯರು ರಕ್ಷಿಸಿ ಆಸ್ಪತ್ರೆ ದಾಖಲಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪಾವಗಡ ಪೊಲೀಸರು ದೌಡಾಯಿಸಿದ್ದಾರೆ. ಬಸ್‌ನಲ್ಲಿ 80ಕ್ಕೂ ಹಚ್ಚು ಜನರು ಪ್ರಯಾಣಿಸುತ್ತಿದ್ದರು. ಬಸ್‌ನ ಟಾಪ್ ಮೇಲೂ ಕೂಡ ಕುಳಿತಿದ್ದರು ಎಂದು ತಿಳಿದು ಬಂದಿದೆ. ಬಸ್ ಪಲ್ಟಿಯಾಗುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ. ವೈ.ಎನ್ ಹೊಸಕೋಟೆ ಮೂಲದ ಬಸ್ ಇದಾಗಿದ್ದು ಬಸ್ ಮಾಲೀಕನ ಹೆಸರು ಶ್ರೀನಿವಾಸ್ ಅಂತ ತಿಳಿದು ಬಂದಿದೆ.
ದುರ್ಘಟನೆಯಲ್ಲಿ ವಿದ್ಯಾರ್ಥಿಗಳೂ ಕೂಡ ಮೃತಪಟ್ಟಿದ್ದಾರೆ. ಮೃತರ ಹೆಸರು ಅಮೂಲ್ಯ ಪೋತಗಾನಹಳ್ಳಿ (16), ಅಜಿತ್ ಸೂಲನಾಯಕನಹಳ್ಳಿ(18), ಕಲ್ಯಾಣ್ (18) ವೈ.ಎನ್ ಹೊಸಕೋಟೆ, ಶಹನವಾಜ್ (18) ಬೆತ್ತರಹಳ್ಳಿ ಅಂತ ಗುರುತಿಸಲಾಗಿದೆ. ಇನನ್ನುಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶಾಸಕ ವೆಂಕಟರಮಣಪ್ಪ ಭೇಟಿ ನೀಡಿ, ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ವೈದ್ಯರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಾಗರಾಜು ಟಿ.ಆರ್ ಬಸ್(KA06-C 8933) ಗೆ ಇನ್‌ಶ್ಯೂರೆನ್ಸ್ ಅಪ್ಡೇಟ್ ಇದೆ. ಒರಿಯಂಟಲ್ ಇನ್ ಶ್ಯೂರೆನ್ಸ್ ಮಾಡಲಾಗಿದೆ. 8-9-2022ರವೆಗೂ ಇನ್‌ಶ್ಯೂರೆನ್ಸ್ ಚಾಲ್ತಿಯಲ್ಲಿದೆ. ಬಸ್ ನೋಂದಣಿ ತುಮಕೂರು ಆರ್.ಟಿ.ಒ ದಿಂದ ಮಧುಗಿರಿ ಆರ್.ಟಿ.ಒಗೆ ವರ್ಗಾವಣೆಯಾಗಿದೆ. ಮೊದಲು ರಘು ಎಂಬುವರ ಹೆಸರಿನಲ್ಲಿದ್ದ ಬಸ್ ಈಗ ನಾಗರಾಜು ಟಿ.ಆರ್ ಹೆಸರಿಗೆ ವರ್ಗಾವಣೆಯಾಗಿದೆ. 2019ರಲ್ಲಿ ನಾಗರಾಜು ಹೆಸರಿಗೆ ಮಾಲೀಕತ್ವ ವರ್ಗಾವಣೆಯಾಗಿದೆ.