ಪ್ರತ್ಯೇಕ ಅಪಘಾತ: ಧಾರವಾಡ ಜಿಲ್ಲೆಯಲ್ಲಿ ಒಂದೇ ದಿನ 8 ಜನ ಸಾವು

ಒಂದೇ ದಿನ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 8 ಜನರು ಮೃತಪಟ್ಟು, 12 ಜನರಿಗೆ ಗಂಭೀರ ಗಾಯಗಳಾದ ಘಟನೆ ಧಾರವಾಡ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. 

8 Killed Due to Road Accidents in Dharwad grg

ಧಾರವಾಡ(ಡಿ.24):  ಸೋಮವಾರ ಜಿಲ್ಲೆಯಲ್ಲಿ ಒಂದೇ ದಿನ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 8 ಜನರು ಮೃತಪಟ್ಟು, 12 ಜನರಿಗೆ ಗಂಭೀರ ಗಾಯಗಳಾಗಿವೆ. ದುರದೃಷ್ಟವಶಾತ್ ಸೋಮವಾರ ಜಿಲ್ಲೆಯಲ್ಲಿ ಐದು ಭಾಗಗಳಲ್ಲಿ ರಸ್ತೆ ಅಪಘಾತ ಉಂಟಾಗಿದ್ದು, ಕಲಘಟಗಿ ತಾಲೂಕಿನ ಹಿರೆಹೊನ್ನಳ್ಳಿ ಗ್ರಾಮದಲ್ಲಿ ಮರಕ್ಕೆ ಕಾರು ಡಿಕ್ಕಿ ಓರ್ವ ವ್ಯಕ್ತಿ ಮೃತನಾಗಿದ್ದಾನೆ. 

ಸಂಚಾರಿ ಪೊಲೀಸ್ ಠಾಣಾ ಮತ್ತು ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಬೈಕ್ ಸವಾರರು ಅಪಘಾತದಲ್ಲಿ ಮೃತರಾಗಿದ್ದಾರೆ. ಇನ್ನು, ಅಳ್ಳಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಬಳಿ ಟಿಟಿ ಮತ್ತು ಮಿನಿ ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಮೂವರು, ಅಣ್ಣಿಗೇರಿ ಬಳಿ ಕಾರೊಂದು ಪಲ್ಟಿಯಾಗಿ ಕುಮಟಾದ ಮೂಲದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಎಲ್ಲ ಅಪಘಾತಗಳಲ್ಲಿ 12 ಜನರಿಗೆ ಗಾಯಗಳಾಗಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಈ ಕುರಿತು ಕಲಘಟಗಿ, ಅಳ್ಳಾವರ, ಧಾರವಾಡ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯ ಉಣಕಲ್‌ನಲ್ಲಿ ಭಾನುವಾರ ತಡರಾತ್ರಿ ಬೈಕ್ ನಿಯಂತ್ರಣ ತಪ್ಪಿ ಬಿಆರ್‌ಟಿಎಸ್‌ನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟಿದ್ದಾನೆ.

ಯುವಕ ಸಾವು 

ಹುಬ್ಬಳ್ಳಿ: ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟಿರುವ ಘಟನೆ ಹು- ಧಾ ರಸ್ತೆಯ ಉಣಕಲ್‌ನಲ್ಲಿ ಭಾನು ವಾ ರ ತಡರಾತ್ರಿ ನಡೆದಿದೆ.  ಇಲ್ಲಿಯ ಗಿರಿಣಿ ಚಾಳದ ನಿವಾಸಿ ರಾಹುಲ್ ಹಿರೇಮನಿ (22) ಮೃತಪಟ್ಟ ಯುವಕ. ಧಾರವಾಡ ದಿಂದ ಹುಬ್ಬಳ್ಳಿಗೆ ವೇಗವಾಗಿ ಬರುವಾಗ ಬೈಕ್‌ ನಿಯಂತ್ರಣ ತಪ್ಪಿದೆ. ಆಗ ಬಿಆರ್ ಟಿಎಸ್‌ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. 

ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಕೆಎಂಸಿಆರ್‌ಗೆ ರವಾನಿಸಿದ್ದಾರೆ. ಈತ ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ ಅವರ ಸಹೋದರನ ಪುತ್ರನಾಗಿದ್ದಾನೆ.

ಮಿನಿಲಾರಿ-ಟಿಟಿ ಡಿಕ್ಕಿ: ಮೂವರ ಸಾವು

ಅಲ್ಪಾವರ: ಧಾರವಾಡ-ರಾಮನಗರ ಹೆದ್ದಾರಿ ಯ ಕಡಬಗಟ್ಟಿ ಗ್ರಾಮದ ಹೊರವಲಯದಲ್ಲಿ ಭಾನುವಾರ ತಡರಾತ್ರಿ ಮಿನಿಲಾರಿ ಮತ್ತು ಟಿಟಿ ವಾಹನ ಮಧ್ಯೆ ನಡೆದ ಭೀಕರ ರಸ್ತೆ ಅಪ ಘಾತದಲ್ಲಿ ಸ್ಥಳದಲ್ಲಿಯೇ ಮೂವರು ಮೃತಪಟ್ಟು ಓರ್ವ ಗಾಯಗೊಂಡಿದ್ದಾನೆ. 

ಮೃತರನ್ನು ಬೆಳಗಾವಿ ಜಿಲ್ಲೆಯ ಶಿರಸಂಗಿ ಗ್ರಾಮದ ಮಹಾದೇವ ಬಸಪ್ಪ ಹಾಲೋಳ್ಳಿ (38), ಹನುಮಂತ ಶಿದ್ದಪ್ಪ ಮಲ್ಲಾಡ (45), ಮಹಾಂತೇಶ ಹನು ಮಂತ ಚವ್ಹಾಣ (44) ಎಂದು ಗುರುತಿಸಲಾಗಿದೆ.  ಭಾನುವಾರ ತಡರಾತ್ರಿ 2 ಗಂಟೆಯ ಹೊತ್ತಿಗೆ ಮಿನಿಲಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಿನಿಲಾರಿಯಲ್ಲಿದ್ದ ಮೂವರುಮೃತಪಟ್ಟು, ಓರ್ವಗಾಯಗೊಂಡಿ ದ್ದಾನೆ. ಟಿಟಿಯಲ್ಲಿದ್ದ 16 ಪ್ರವಾಸಿಗರಲ್ಲಿ ಇಬ್ಬರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾ ಗಿವೆ. ಈ ಕುರಿತು ಅಳ್ಳಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ಓರ್ವ ಸಾವು 

ಧಾರವಾಡ: ಕಾರವಾರಕ್ಕೆ ಮದುವೆಗೆ ಹೋಗಿ ಬರುತ್ತಿದ್ದ ಕಾರೊಂದು ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಧಾರವಾಡ ಮೂಲದ ಅರುಣ್ ಸಿಂಗ್ (36) ಮೃತರು. ಇನ್ನುಳಿದ ಐವರು ಸಹ ಪ್ರಯಾಣಿಕರಿಗೆ ಗಾಯಗಳಾಗಿವೆ. ಐವರ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ.

Latest Videos
Follow Us:
Download App:
  • android
  • ios