ಬಂಟ್ವಾಳದ ವಿಟ್ಲ ಪೊಲೀಸರ ತಂಡ ಗುರುವಾರ ಸಾಲೆತ್ತೂರಿನ ಕಸಾಯಿಖಾನೆಗೆ ದಾಳಿ ನಡೆಸಿ ಸುಮಾರು 200 ದನದ ಚರ್ಮ, 8 ಗೋವು ಸಹಿತ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದು, ಒಬ್ಬನನ್ನು ಬಂಧಿಸಿದ್ದಾರೆ.

ಮಂಗಳೂರು(ಮೇ 22): ಬಂಟ್ವಾಳದ ವಿಟ್ಲ ಪೊಲೀಸರ ತಂಡ ಗುರುವಾರ ಸಾಲೆತ್ತೂರಿನ ಕಸಾಯಿಖಾನೆಗೆ ದಾಳಿ ನಡೆಸಿ ಸುಮಾರು 200 ದನದ ಚರ್ಮ, 8 ಗೋವು ಸಹಿತ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದು, ಒಬ್ಬನನ್ನು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೊಳ್ನಾಡು ಕಟ್ಟತ್ತಿಲ ಮಠ ನಿವಾಸಿ ಹಾರಿಸ್‌ ಯಾನೇ ಮಹಮ್ಮದ್‌ ಹಾರೀಸ್‌ (22) ಬಂಧಿತ ಆರೋಪಿ. ದನ ಕಳ್ಳತನದ ಮಾಹಿತಿ ಆಧರಿಸಿ ಪೊಲೀಸರ ತಂಡ ಕೊಳ್ನಾಡಿನ ಮನೆಯೊಂದಕ್ಕೆ ದಾಳಿ ನಡೆಸಿದ ಸಂದರ್ಭ ಹಾರೀಸ್‌ ಪಲಾಯನ ಮಾಡಲು ಯತ್ನಿಸಿದ್ದು, ಈ ವೇಳೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಈತನ ವಿಚಾರಣೆ ಸಮಯದಲ್ಲಿ ಕಸಾಯಿಖಾನೆಯ ಮಾಹಿತಿ ಸಮಗ್ರ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಕ್ವಾರಂಟೈನ್‌ ಉಲ್ಲಂಘಿಸಿದ ತಂದೆ ಮಗಳ ವಿರುದ್ಧ ಕ್ರಿಮಿನಲ್‌ ಕೇಸ್

ಮಾಹಿತಿ ಆಧಾರದಲ್ಲಿ ಸಾಲೆತ್ತೂರು ಐತ್ತಕುಮೇರು ಭಾಗಕ್ಕೆ ಪೊಲೀಸ್‌ ತಂಡ ದಾಳಿ ನಡೆಸಿದ್ದು, 8 ಗೋವು, 200 ದನದ ಚರ್ಮ ಸ್ಥಳದಲ್ಲಿ ಪತ್ತೆಯಾಗಿದೆ. ಅಕ್ರಮವಾಗಿ ಕಸಾಯಿಖಾನೆ ನಡೆಸಲು ಬಳಸಿದ್ದರೆನ್ನಲಾದ ನಾಲ್ಕು ದ್ವಿಚಕ್ರ ವಾಹನ, ಅಟೋ, ಅಶೋಕ್‌ ಲೇಲೆಂಡ್‌ ದೋಸ್ತು ವಾಹನ ಸೇರಿ ಮಾಂಸ ಮಾಡಲು ಬಳಸುವ ಸಾಮಗ್ರಿಗಳನ್ನು ಸ್ಥಳದಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಂದಮ್ಮನ ನೋಡದೇ ಕಣ್ಮುಚ್ಚಿದ: ಪತ್ನಿ ಪ್ರಸವದ ದಿನವೇ ಪತಿ ಕೊರೋನಾಗೆ ಬಲಿ

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗೋ ಕಳ್ಳತನದ ಪ್ರಕರಣಗಳಿಗೆ ಇದು ಸಂಬಂಧವಿರುವ ಶಂಕೆ ಇದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಲಕ್ಷ್ಮೀ ಪ್ರಸಾದ್‌, ಡಿವೈಎಸ್ಪಿ ವೆಲೆಂಟನ್‌ ಡಿಸೋಜ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.