ಮೈಸೂರು (ಏ.11):  ಮೈಸೂರಿನಲ್ಲಿ ನೈಟ್ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. 

 ಕೊರೋನಾ ತಡೆಯುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ನಿಯಮ ಮೀರಿ ಶನಿವಾರ ರಾತ್ರಿ 12ಕ್ಕೆ ಮೈಸೂರಿನ ವಿಜಯನಗರದ ಕರಣ್ ರೆಸಿಡೆನ್ಸಿಯಲ್ಲಿ ಪಾರ್ಟಿ ಮಾಡ್ತಿದ್ದ 8 ಮಂದಿಯನ್ನ ವಶಕ್ಕೆ ಪಡೆದು ಮದ್ಯ ಸೀಜ್ ಮಾಡಲಾಗಿದೆ. 

ನಾಳೆಯಿಂದ ನೈಟ್ ಕರ್ಫ್ಯೂ, ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬದಲಿಸಿಕೊಳ್ಳಿ ..

ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರೀತಿಯ ನಿರ್ಬಂಧ ಹೇರಿ ಕಠಿಣ ಆದೇಶವಿದ್ದರೂ ಮಧ್ಯ ರಾತ್ರಿ 12 ಗಂಟೆಯಾದರು ಪಾರ್ಟಿಯಲ್ಲಿ ತೊಡಗಿದ್ದರು. ಈ ವೇಳೆ ದಾಳಿ ಮಾಡಿದ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. 

ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.