ಉಡುಪಿ (ಸೆ.01): ಉಡುಪಿ ಜಿಲ್ಲೆಯಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ ಶತಕ ಸಮೀಪಿಸಿದೆ, ಮಂಗಳವಾರ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ ಒಟ್ಟು ಮೃತಪಟ್ಟವರ ಸಂಖ್ಯೆ 99ಕ್ಕೇರಿದೆ. ಮಂಗಳವಾರ 161 ಮಂದಿಗೆ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 11750 ಮಂದಿಗೆ ಸೋಂಕು ಪತ್ತೆಯಾಗಿದೆ.

ಜೊತೆಗೆ ಮಂಗವಾರ 250 ಮಂದಿಯ ಸೋಂಕು ಗುಣಮುಖವಾಗಿದ್ದು, ಇದುವರೆಗೆ ಒಟ್ಟು 9351 (ಶೇ 79.58) ಮಂದಿಯ ಸೋಂಕು ಗುಣಮುಖರಾಗಿದ್ದಾರೆ. ಪ್ರಸ್ತುತ 2307 (ಶೇ 19.63) ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ 930 ಮಂದಿಯ ಗಂಟಲದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಹಿಸಲಾಗಿದೆ. ಅವರಲ್ಲಿ 641 ಮಂದಿ ಸೋಂಕಿನ ಶಂಕಿತರು, 167 ಮಂದಿ ಪ್ರಾಥಮಿಕ ಸಂಪರ್ಕಿತರು, 63 ಮಂದಿ ಸೋಂಕಿನ ಲಕ್ಷಣ ಹೊಂದಿದ್ದರೆ, 59 ಮಂದಿ ಹಾಟ್‌ಸ್ಪಾಟ್‌ನಿಂದ ಬಂದವರಾಗಿದ್ದಾರೆ.

ಬೆಂಗಳೂರಲ್ಲಿ ಮೂರೇ ದಿನದಲ್ಲಿ 76297 ಕೋವಿಡ್‌ ಟೆಸ್ಟ್‌...

ಮಂಗಳವಾರ ಒಟ್ಟು 731 ವರದಿಗಳು ಬಂದಿದ್ದು, ಅವುಗಳಲ್ಲಿ 161 (ಶೇ 22.02) ಪಾಸಿಟಿವ್‌ ಮತ್ತು 576 (ಶೇ 78.79) ನೆಗೆಟಿವ್‌ ಆಗಿವೆ. ಇನ್ನೂ 365 ವರದಿಗಳು ಬಾಕಿಯಾಗಿವೆ.

ರಂಭಾಪುರಿ ಜಗದ್ಗುರುಗಳಿಗೆ ಕೊರೋನಾ: ಆಸ್ಪತ್ರೆಗೆ ದಾಖಲು...

ಕೊರೋನಾಕ್ಕೆ 2 ಬಲಿ: ಉಡುಪಿ ಮತ್ತು ಕಾರ್ಕಳ ತಾಲೂಕಿನ ಇಬ್ಬರು ಸೋಂಕಿತರು ಸೋಂಕಿನಿಂದ ಮೃತಪಟ್ಟಿದ್ದಾರೆ. ಉಡುಪಿಯ 78 ವರ್ಷದ ವೃದ್ಧೆಗೆ ನ್ಯುಮೋನಿಯಾ, ಮಧುಮೇಹ ಹಾಗೂ ಕಾರ್ಕಳದ 53 ವರ್ಷದ ವ್ಯಕ್ತಿಗೆ ಅಪಸ್ಮಾರ ಮತ್ತು ನ್ಯುಮೋನಿಯಾ ತೊಂದರೆಯಿಂದ ಬಳಲುತಿದ್ದರು.