SSLC ಪರೀಕ್ಷೆ: ಹಾಲ್ ಟಿಕೆಟ್ ಸಿಗದೆ 77 ವಿದ್ಯಾರ್ಥಿಗಳು ಅತಂತ್ರ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಒಂದು ದಿನ ಉಳಿದಿದ್ದರೂ ಕಲಬುರಗಿ ನಗರದ ಶಾಂತಿ ನಿಕೇತನ ಶಾಲೆಯ 24, ಸಂಜೀವಿನಿ ಪ್ರೌಢ ಶಾಲೆಯ 16 ಮಕ್ಕಳು, ಮೆಹಬೂಬ ಸುಭ್ಹಾನಿ ಪ್ರೌಢಶಾಲೆಯ 27 ಹಾಗೂ ಅರ್ಚನಾ ಪ್ರೌಢ ಶಾಲೆಯ 6 ವಿದ್ಯಾರ್ಥಿಗಳು ಸೇರಿ ನಾಲ್ಕು ಶಾಲೆಗಳ 77 ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಹಾಲ್ ಟಿಕೆಟ್ ಸಿಕ್ಕಿಲ್ಲ
ಕಲಬುರಗಿ(ಜೂ.24): ಶಾಲೆ ಮಾನ್ಯತೆ ನವೀಕರಣ ಮಾಡಲು ಮೀನಾಮೇಷ ಎಣಿಸುತ್ತಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ನಾಲ್ಕು ಪ್ರೌಢ ಶಾಲೆಗಳ 77 ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳಿಂದ ವಂಚತರನ್ನಾಗಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಕತ್ತರಿಗೆ ಸಿಲುಕಿಸಿದೆ ಎಂದು ಮಾಜಿ ಸಚಿವ ಬಾಬುರಾವ ಚವ್ಹಾಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಒಂದು ದಿನ ಉಳಿದಿದ್ದರೂ ಕಲಬುರಗಿ ನಗರದ ಶಾಂತಿ ನಿಕೇತನ ಶಾಲೆಯ 24, ಸಂಜೀವಿನಿ ಪ್ರೌಢ ಶಾಲೆಯ 16 ಮಕ್ಕಳು, ಮೆಹಬೂಬ ಸುಭ್ಹಾನಿ ಪ್ರೌಢಶಾಲೆಯ 27 ಹಾಗೂ ಅರ್ಚನಾ ಪ್ರೌಢ ಶಾಲೆಯ 6 ವಿದ್ಯಾರ್ಥಿಗಳು ಸೇರಿ ನಾಲ್ಕು ಶಾಲೆಗಳ 77 ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಹಾಲ್ ಟಿಕೆಟ್ ನೀಡಿಲ್ಲ ಆರೋಪ ಮಾಡಿದರು.
ಶಾಲೆಗಳ ಮಾನ್ಯತೆ ನವೀಕರಣ ಕುರಿತಂತೆ ಸಾರ್ವಜನಿಕ ಇಲಾಖೆ ಹಾಗೂ ಶಾಲಾ ಆಡಳಿತ ಮಂಡಳಿ ನಡುವಿನ ಜಗ್ಗಾಟದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹಾಲ… ಸಿಗದಿರುವುದು ಮಕ್ಕಳ ಭವಿಷ್ಯವನ್ನು ಅತಂತ್ರಕ್ಕೆ ಸಿಲುಕುವ ಭೀತಿ ಎದುರಾಗಿದೆ. ಇದಕ್ಕೆ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
'ಕೊರೋನಾ ಸೋಂಕಿತ ವಿದ್ಯಾರ್ಥಿಗಳಿಗೆ SSLC ಪರೀಕ್ಷೆ ಬರೆಯಲು ಅವಕಾಶವಿಲ್ಲ'
ಶಾಲಾ ಮಾನ್ಯತೆ ನವೀಕರಣ ಮಾಡಿಲ್ಲ ಎಂಬ ನೆಪವೊಡ್ಡಿ ಮಕ್ಕಳ ಭವಿಷ್ಯ ನಾಶ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಶಾಲಾ ನೋಂದಣಿ ನೆಪವಿಟ್ಟುಕೊಂಡು ಮಕ್ಕಳಿಗೆ ಹಾಲ… ಟಿಕೆಟ್ ನೀಡದಿರುವುದು ಯಾವ ನ್ಯಾಯ ಎಂದು ಖಾರವಾಗಿ ಪ್ರಶ್ನಿಸಿದರು. ಮಾನವೀಯತೆ ಎಂಬುದು ಇಲ್ಲವೇನು ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೋ ಆಮಿಷಗೆ ಬಿದ್ದ ಈ ನಾಲ್ಕು ಶಾಲೆಯ ಮಾನ್ಯತೆ ನೀಡುತ್ತಿಲ್ಲ ಎಂಬಾ ಆರೋಪ ಕೇಳಿ ಬರುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು ಹಾಗೂ ಆಯುಕ್ತರ ಇಲಾಖೆ ಆಧಿಕಾರಗಳ ನಡುವೆ ಪತ್ರ ವ್ಯವಹಾರ ದಲ್ಲಿಯೇ ದಿನ ದೂಡುತಿದ್ದಾರೆ. ತಕ್ಷಣವೇ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಬಾಬುರಾವ ಚವ್ಹಾಣ ಆಗ್ರಹಿಸಿದರು.