Asianet Suvarna News Asianet Suvarna News

ಕೊಳ್ಳೂರ ಫೌಂಡೇಷನ್‌ನಿಂದ 75 ಸಾವಿರ ತಿರಂಗಾ ಉಚಿತ ವಿತರಣೆ

ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಇಲ್ಲಿನ ಗುರುನಾಥ ಕೊಳ್ಳುರ್‌(ಜಿಕೆ) ಫೌಂಡೇಷನ್‌ ವತಿಯಿಂದ ಹಮ್ಮಿಕೊಂಡ ಬೀದರ್‌ ಜಿಲ್ಲೆಯ ಮನೆ-ಮನೆಗೂ 75 ಸಾವಿರ ರಾಷ್ಟ್ರ ಧ್ವಜಗಳು ಉಚಿತವಾಗಿ ವಿತರಿಸಲಾಯಿತು.

75 thousands flags provide by kolluru Foundatiion bidar
Author
Bengaluru, First Published Aug 6, 2022, 1:46 PM IST

ಬೀದರ್‌ (ಆ.6) : ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಇಲ್ಲಿನ ಗುರುನಾಥ ಕೊಳ್ಳುರ್‌(ಜಿಕೆ) ಫೌಂಡೇಷನ್‌ ವತಿಯಿಂದ ಹಮ್ಮಿಕೊಂಡ ಬೀದರ್‌ ಜಿಲ್ಲೆಯ ಮನೆ-ಮನೆಗೂ 75 ಸಾವಿರ ರಾಷ್ಟ್ರ ಧ್ವಜಗಳು ಉಚಿತವಾಗಿ ವಿತರಿಸುವ ಐತಿಹಾಸಿಕ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ನಗರದ ಸಿದ್ಧಾರೂಢ ಮಠ (ಗುಂಪಾ) ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಡಾ. ಶಿವಕುಮಾರ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಹರ್‌ ಘರ್‌ ತಿರಂಗಾ ಕಾರ್ಯಕ್ರಮ ಮಕ್ಕಳು, ಯುವಕರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ದೇಶಭಕ್ತಿ ಮೂಡಿಸಲಿದೆ. ಪ್ರತಿ ಮನೆ ಮೇಲೂ ತ್ರಿವರ್ಣ ಧ್ವಜ ಅಭಿಯಾನ ದೇಶಭಕ್ತಿಯ ಹೊಸ ಪ್ರಜ್ಞೆ ಬೇರೂರಿಸುವ ಜತೆಗೆ ದೇಶವನ್ನು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಸಂಕಲ್ಪ ಹೊಂದಿದೆ ಎಂದರು.

ಭಾರತ ಅಜಾದಿ ಕಾ ಅಮೃತ ಮಹೋತ್ಸವದ ಹಿಂದೆ ಮೂರು ಮುಖ್ಯ ಉದ್ದೇಶವಿದೆ: ಅಮಿತ್ ಶಾ

ಹಿರಿಯ ಉದ್ಯಮಿ, ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್‌ ಅವರು ಕೊಡುಗೈ ದಾನಿ. ಧಾರ್ಮಿಕ, ಸಾಮಾಜಿಕ ಸೇರಿ ಪ್ರತಿ ಕ್ಷೇತ್ರದ ಜನಪರ ಕೆಲಸಗಳಿಗೆ ಅವರ ಕೊಡುಗೆ ಅಪಾರ. ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಜಿಲ್ಲಾಡಳಿತದ ಜೊತೆಗೆ ಕೈಜೋಡಿಸಿ 75 ಸಾವಿರ ರಾಷ್ಟ್ರ ಧ್ವಜ ಮನೆ ಮನೆಗೆ ಮುಟ್ಟಿಸುತ್ತಿರುವುದು ಶ್ಲಾಘನೀಯ ಎಂದರು.

ಬುಡಾ ಅಧ್ಯP್ಷÜ ಬಾಬು ವಾಲಿ ಮಾತನಾಡಿ, ರಾಷ್ಟ್ರದ ಪ್ರತಿಯೊಬ್ಬರನ್ನೂ ಒಗ್ಗೂಡಿಸಲು ಮತ್ತು ಯುವಕರಲ್ಲಿ ದೇಶಭಕ್ತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಈ ಅಭಿಯಾನ ಹಮ್ಮಿಕೊಂಡಿದ್ದಾರೆ. ಎಲ್ಲರೂ ಇದರಲ್ಲಿ ಸ್ವಯಂ ಇಚ್ಛೆಯಿಂದ ಭಾಗಿಯಾಗಿ ದೇಶಪ್ರೇಮ, ಸ್ವಾಭಿಮಾನ ಪ್ರದರ್ಶಿಸಬೇಕೆಂದರು.

ಜಿಕೆ ¶ೌಂಡೇಷನ್‌ ಅಧ್ಯP್ಷÜ ಹಾಗೂ ಬಿಜೆಪಿ ಮುಖಂಡರಾದ ಗುರುನಾಥ ಕೊಳ್ಳುರ್‌ ಅಧ್ಯP್ಷÜತೆ ವಹಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್‌ ಘರ್‌ ತಿರಂಗಾ’ ಕರೆಗೆ ಪೂರಕವಾಗಿ ಜಿಲ್ಲೆಯ ಪ್ರತಿ ಮನೆ ಮೇಲೂ ತಿರಂಗಾ ಧ್ವಜ ಹಾರಿಸಬೇಕೆಂಬ ನಿಟ್ಟಿನಲ್ಲಿ ಫೌಂಡೇಷನ್‌ ವತಿಯಿಂದ ರಾಷ್ಟ್ರ ಧ್ವಜ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಜಾದಿ ಕಾ ಅಮೃತ ಮಹೋತ್ಸವದ ಎಲ್ಲ ಕೆಲಸಗಳಲ್ಲಿ ಫೌಂಡೇಷನ್‌ ಸಕ್ರಿಯವಾಗಿ ಭಾಗವಹಿಸಲಿದೆ ಎಂದು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವ್: ವಿಜಯಪುರದಲ್ಲಿ ಯುವಜನ ಸಂಕಲ್ಪ ನಡಿಗೆ

ಫಲಾಪೇಕ್ಷೆ ಇಲ್ಲದೇ ಸೇವಾ ಕಾರ್ಯ:

ಯಾವುದೇ ಫÜಲಾಪೇಕ್ಷೆ ಇಲ್ಲದೇ ಸಾಮಾಜಿಕ ಸೇವೆ ಮಾಡುವ ಏಕೈಕ ಉದ್ದೇಶದೊಂದಿಗೆ ಫೌಂಡೇಷನ್‌ ಆರಂಭಿಸಲಾಗಿದೆ. ಹರ್‌ ಘರ್‌ ತಿರಂಗಾ ಅಭಿಯಾನ ಮೂಲಕ ಫೌಂಡೇಷನ್‌ ತನ್ನ ಜನಪರ, ಸಮಾಜಪರ ಕೆಲಸಕ್ಕೆ ಅ​ಧಿಕೃತ ಚಾಲನೆ ನೀಡಿರುವುದು ಸಂತಸ ತಂದಿದೆ ಎಂದು ಫೌಂಡೇಷನ್‌ ಅಧ್ಯP್ಷÜ ಗುರುನಾಥ ಕೊಳ್ಳುರ್‌ ಹೇಳಿದರು.

ಜಿಲ್ಲಾದ್ಯಂತ 75 ಸಾವಿರ ರಾಷ್ಟ್ರಧ್ವಜ ವಿತರಿಸುತ್ತಿದ್ದು, ಇದಕ್ಕೆ ಅವಕಾಶ ಮಾಡಿಕೊಟ್ಟಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

—ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿ, ಅನೇಕ ಹೋರಾಟಗಾರರ ತ್ಯಾಗ, ಬಲಿದಾನದಲವಾಗಿ ಸ್ವಾತಂತ್ರ್ಯ ಲಭಿಸಿದೆ. ನಾವೆಲ್ಲರೂ ಇಂದು ಸ್ವತಂತ್ರ ಭಾರತದಲ್ಲಿ ಸ್ವಚ್ಛಂದವಾಗಿ ಬದುಕುತ್ತಿರುವುದಕ್ಕೆ ಹೋರಾಟಗಾರರ ತ್ಯಾಗ, ಬಲಿದಾನವೇ ಕಾರಣ ಎಂದು ಹೇಳಿ​ದರು.

ಅಪರ ಜಿಲ್ಲಾ​ಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಡೆಕ್ಕಾ ಕಿಶೋರಬಾಬು, ನಗರಸಭೆ ಪೌರಾಯುಕ್ತ ಪ್ರಬುದ್ಧ ಕಾಂಬ್ಳೆ, ಪ್ರಮುಖರಾದ ಪ್ರಭುರಾವ ವಸ್ಮತೆ, ವಿರೂಪಾP್ಷÜ ಗಾದಗಿ ಇತರರಿದ್ದರು. ಕಸಾಪ ಜಿಲ್ಲಾಧ್ಯP್ಷÜ ಸುರೇಶ ಚನ್ನಶೆಟ್ಟಿಸ್ವಾಗತಿಸಿದರು. ಗುರುನಾಥ ರಾಜಗೀರಾ ನಿರೂಪಿಸಿದರು. ಸಿದ್ಧಾರೂಢ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ತಿರಂಗಾ ಧ್ವಜ ವಿತರಣೆ ಮಾಡಲಾಯಿತು.

Follow Us:
Download App:
  • android
  • ios