ಕೆಆರ್‌ಸ್ ಡ್ಯಾಂನಿಂದ ಕಾವೇರಿ ನದಿಗಗೆ ಸುಮಾರು 7218 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಸೋಮವಾರ ಸಂಜೆ 6 ಗಂಟೆ ವೇಳೆಗೆ ಜಲಾಶಯಕ್ಕೆ 3471 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ವಿ.ಸಿ ಸೇರಿದಂತೆ ಇತರೆ ನಾಲೆಗಳಿಗೆ 2911 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಕಾವೇರಿ ನದಿ ಮೂಲಕ ತಮಿಳುನಾಡಿಗೆ 7218 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
ಮಂಡ್ಯ(ಜು.30): ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ ಸುಮಾರು 7218 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಸರ್ಕಾರ ತಮಿಳುನಾಡಿಗೆ ಕಾವೇರಿ ನದಿ ಮೂಲಕ 7 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಕಳೆದ ಕೆಲದಿನಗಳಿಂದ ಕೊಡಗು, ಭಾಗಮಂಡಲಗಳಲ್ಲಿ ಮಳೆ ಕಡಿಮೆಯಾಗಿದೆ. ಇದರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ತೀರಾ ಇಳಿಮುಖವಾಗಿದೆ.
ಸೋಮವಾರ ಸಂಜೆ 6 ಗಂಟೆ ವೇಳೆಗೆ ಜಲಾಶಯಕ್ಕೆ 3471 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ವಿ.ಸಿ ಸೇರಿದಂತೆ ಇತರೆ ನಾಲೆಗಳಿಗೆ 2911 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಕಾವೇರಿ ನದಿ ಮೂಲಕ ತಮಿಳುನಾಡಿಗೆ 7218 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
ಸದ್ದಿಲ್ಲದೇ ತಮಿಳುನಾಡಿಗೆ ನೀರು ಹರಿಸ್ತಿದೆಯಾ ಸರ್ಕಾರ?
ಅಣೆಕಟ್ಟೆಯಲ್ಲಿ 86.76 ಅಡಿ ನೀರಿತ್ತು. ಒಳ ಹರಿವಿನ ಪ್ರಮಾಣ ತೀರಾ ಕಡಿಮೆ ಇದ್ದರೂ ಕಾವೇರಿ ನದಿಗೆ 7 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಬಿಡುತ್ತಿರುವುದು ಸಾಕಷ್ಟುಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರ ಸದ್ದಿಲ್ಲದೇ ತಮಿಳುನಾಡಿಗೆ ನೀರು ಬಿಡುತ್ತಿದೆ ಎನ್ನಲಾಗುತ್ತಿದೆ.
ನೀರು ಬಿಡೋದು ನನ್ನ ಕೈಲಿಲ್ಲ, ಬೇಕಾದರೆ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಲಿ
ಕಳೆದ ವರ್ಷ ಜಲಾಶಯ ಭರ್ತಿಯಾಗಿತ್ತು. ಆದರೆ, ಈ ಬಾರಿ ಮಳೆ ತೀರಾ ಕಡಮೆಯಾಗಿರುವುದರಿಂದ ಜುಲೈ ಅಂತ್ಯವಾದರೂ ಜಲಾಶಯ ಇನ್ನೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. ನಾಲೆಗಳಿಗೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಗೊರೂರು ಜಲಾಶಯದಿಂದ ನೀರು ಬಿಡುಗಡೆ
ಕೆ.ಆರ್ .ಪೇಟೆಯ ಗೊರೂರು ಜಲಾಶಯದಿಂದ ತಾಲೂಕಿನ ಹೇಮಾವತಿ ಮೂಲಕ ಕೆಆರ್‌ಎಸ್ ಅಣೆಕಟ್ಟೆಗೆ ಸುಮಾರು 2500 ಕ್ಯುಸೆಕ್ ನೀರನ್ನು ಸೋಮವಾರ ಮಧ್ಯಾಹ್ನದಿಂದ ಹರಿಸಲಾಗಿದೆ. ಹೇಮಾವತಿ ನದಿಯಲ್ಲಿ ನೀರಿಲ್ಲದೆ ಒಣಗಿತ್ತು. ಪಟ್ಟಣದ ಜನತೆಗೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿತ್ತು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಮಿಳುನಾಡಿಗೆ ನೀರು ಬಿಟ್ಟಿರುವುದು ಪಟ್ಟಣದ ನೀರಿನ ದಾಹವನ್ನು ನೀಗಿಸದಂತಾಗಿದೆ. ಮುಂದಿನ ಐದು ದಿನಗಳ ಕಾಲ ನೀರು ಬಿಡಲಾಗಿದೆ. ನದಿಗೆ ನೀರು ಬಿಟ್ಟಿರುವುದು ಎಚ್‌ಎಲ್ ಬಿಸಿ ಇಇ ಬಾಲಕೃಷ್ಣರನ್ನು ಕೇಳಿದಾಗ ಈ ಸಂಬಂಧ ನಮಗೆ ಮಾಹಿತಿ ಇಲ್ಲ. ಮೇಲಾಧಿಕಾರಿಗಳು ಬಿಟ್ಟಿದ್ದಾರೆ ಎಂದಿದ್ದಾರೆ. ನೀರಾವರಿ ಇಂಜಿನಿಯರ್ ಮೂಲಗಳ ಪ್ರಕಾರ ಕೆ.ಆರ್‌ಎಸ್ ಡ್ಯಾಂಗೆ ನೀರು ಬಿಡಲಾಗಿದೆ ಎಂಬ ಮಾಹಿತಿ ಇದೆ ಎಂದು ಹೇಳಲಾಗಿದೆ.
