ಕೊಡಗಿನಲ್ಲಿ ಜನರ ನಿದ್ದೆಗೆಡಿಸಿದ್ದ 7 ವರ್ಷದ ಗಂಡು ಹುಲಿ ಸೆರೆ
ಕೊಡಗಿನಲ್ಲಿ ಪದೇ ಪದೇ ಜಾನುವಾರುಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಸೆರೆಯಾಗಿದೆ.
ಮಡಿಕೇರಿ(ಮೇ 20): ಕೊಡಗಿನಲ್ಲಿ ಪದೇ ಪದೇ ಜಾನುವಾರುಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಸೆರೆಯಾಗಿದೆ. ದಕ್ಷಿಣ ಕೊಡಗಿನಲ್ಲಿ ಯಶಸ್ವಿ ಹುಲಿ ಕಾರ್ಯಚರಣೆ ನಡೆದಿದೆ.
"
ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಸಾಕಷ್ಟು ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಮಂಗಳವಾರ ರಾತ್ರಿ 12.15 ಕ್ಕೆ ವಿರಾಜಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಪಶುವೈದ್ಯರಾದ ಚಂದ್ರಶೇಖರ್ ನೇತೃತ್ವದ ತಂಡ ಅರಿವಳಿಕೆ ಮದ್ದು ನೀಡಿ 7 ವರ್ಷ ಪ್ರಾಯದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಕೊಡಗಿನಲ್ಲಿ ಹುಲಿ ಭೀತಿ: ಬೆಳ್ಳಂಬೆಳಗ್ಗೆ ತೋಟದಲ್ಲಿ ಪ್ರತ್ಯಕ್ಷ
ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ ನಲ್ಲೂರು ಗ್ರಾಮದಲ್ಲಿ ಕಾರ್ಮಿಕರಿಗೆ ಕಾಣಿಸಿಕೊಂಡಿದ್ದು ಇದರ ವೀಡಿಯೋ ವೈರಲ್ ಆಗಿತ್ತು. ಅಲ್ಲಿನ ಪುಚ್ಚಿಮಾಡ ಲಾಲಾ ಎಂಬವರಿಗೆ ಸೇರಿದ ತೋಟದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
"
ಕಳೆದ ಕೆಲವು ದಿನಗಳ ಹಿಂದಷ್ಟೇ ಬಾಳೆಲೆ ವ್ಯಾಪ್ತಿಯಲ್ಲಿ ಹುಲಿಯೊಂದು ರಸ್ತೆಯಲ್ಲೇ ಪತ್ತೆಯಾಗಿತ್ತು, ಅದನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ನಂತರ ಮತ್ತೆ ನಾಗರಹೊಳೆ ಉದ್ಯಾನವನದ ಅಳ್ಳೂರು ಎಂಬಲ್ಲಿ ರಸ್ತೆ ಬದಿಯಲ್ಲಿ ಹುಲಿ ಕಾಣಿಸಿಕೊಂಡಿದೆ.
ಭಾರತದ ಜೈಲಲ್ಲಿ ಇಲಿ ಇವೆ, ಗಡೀಪಾರು ಮಾಡಬೇಡಿ: ನೀರವ್ ಮೋದಿ ಮನವಿ
ಪ್ರಯಾಣಿಕರೊಬ್ಬರು ಹುಲಿಯ ಚಲನವಲನ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಾಯಿಗಳು ಬೊಗಳುತ್ತಿದ್ದಾಗ ಸಾರ್ವಜನಿಕರು ಹೋಗಿ ನೋಡಿದಾಗ ಹುಲಿ ಆತಂಕವಿಲ್ಲದೆ ಮಲಗಿತ್ತು. ದಕ್ಷಿಣ ಕೊಡಗಲ್ಲಿ ನಿರಂತರ ಹುಲಿ ದಾಳಿಯಿಂದಾಗಿ ಜನ ತಮ್ಮ ಅನೇಕ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ.