ಮಂಗಳೂರು(ಮಾ.19): ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕು ಕಂಡು ಬಂದ ಏಳು ಪ್ರದೇಶಗಳನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಏಳು ಪ್ರದೇಶಗಳಲ್ಲಿ ಜನರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ದ‌ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ಪ್ರದೇಶಗಳು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಸರ್ಕಾರದ ನಿರ್ದೇಶನದಂತೆ ವಾಹನ ಸಂಚಾರ, ಜನ ಸಂಚಾರ, ಅಂಗಡಿ-ಮುಂಗಟ್ಟು ಎಲ್ಲವೂ ಬಂದ್ ಮಾಡಲಾಗಿದೆ. ಜಿಲ್ಲೆಯ ಏಳು ಜಾಗಗಳನ್ನು ಜಿಲ್ಲಾಡಳಿತ ಕಂಟೈನ್‌ಮೆಂಟ್ ಝೋನ್ ಗುರುತಿಸಿದೆ.

ದೇಶದಲ್ಲಿ ಕೊರೋನಾಗೆ 500 ಸಾವು, 15,000 ಮಂದಿಗೆ ಸೋಂಕು!

ಬಂಟ್ವಾಳ ತಾಲೂಕಿನ ಸಜಿಪನಡು, ತುಂಬೆ ಗ್ರಾಮ, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮ, ಪುತ್ತೂರು ತಾಲೂಕಿನ, ಉಪ್ಪಿನಂಗಡಿ ‌ಗ್ರಾಮ, ಸಂಪ್ಯ, ಸುಳ್ಯ ತಾಲೂಕಿನ ಅಜ್ಜಾವರ, ಮಂಗಳೂರಿನ ತಾಲೂಕಿನ ತೊಕ್ಕೊಟ್ಟು ಸ್ಮಾರ್ಟ್ ಪ್ಲಾನೆಟ್ ಈ ಪ್ರದೇಶಗಳಿಗೆ ಸರ್ಕಾರದ ಸೂಚನೆಯಂತೆ ಇನ್ಸಿಡೆಂಟ್‌ ಕಮಾಂಡರ್‌ಗಳ ನೇಮಕ ಮಾಡಲಾಗಿದೆ.

ತಬ್ಲೀಘಿಗಳಿಂದ ಸಕ್ಕರೆ ನಾಡಿಗೆ ಕಂಟಕ, ಅಪಾಯಕಾರಿ ರೆಡ್ ಝೋನ್‌ನತ್ತ ಮಂಡ್ಯ

ಆರೋಗ್ಯ ಮತ್ತು ಇತರೆ ಸೌಲಭ್ಯ ಒದಗಿಸಲು ಕ್ರಮ ವಹಿಸಿಕೊಳ್ಳಲಾಗಿದ್ದು, ಈ ಕಂಟೈನ್ ಮೆಂಟ್ ಝೋನ್ ಗಳ 1 ಕಿ.ಮೀ ತೀವ್ರ ಬಫರ್ ಜೋನ್, 7 ಕಿ.ಮೀ ಬಫರ್ ಜೋನ್ ಆಗಿ ಘೋಷಣೆ ಮಾಡಲಾಗಿದೆ.

1 ಕಿ.ಮೀ ತೀವ್ರ ಬಫರ್ ಜೋನ್‌ನಲ್ಲಿ ಪ್ರತೀ ಮನೆಯ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಕಂಟೈನ್ ಮೆಂಟ್ ಝೋನ್ ಬ್ಯಾರಿಕೇಡ್ ಹಾಕಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.