ಬೆಂಗಳೂರು [ಮಾ.18]:  ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಗೆ 7.10 ಲಕ್ಷ ರು. ಪಡೆದು ಆಕೆಯ ಬಾಡಿಗೆ ಮನೆ ಮಾಲೀಕ ವಂಚಿಸಿರುವ ಘಟನೆ ನಡೆದಿದೆ.

ಕೋರಮಂಗಲ 7ನೇ ಹಂತದ ನೇಹಾ ಮಿತ್ತಲ್‌ ಎಂಬುವರೇ ವಂಚನೆಗೊಳಗಾಗಿದ್ದು, ಜೆಟ್‌ ಏರ್‌ ವೇಸ್‌ನಲ್ಲಿ ಅವರಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಆರೋಪಿಗಳು ಟೋಪಿ ಹಾಕಿದ್ದಾನೆ.

ಖಾಸಗಿ ಕಂಪನಿ ಉದ್ಯೋಗಿ ನೇಹಾ, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಚಾಂದ್‌ ಎಂಬುವರಿಗೆ ಮನೆಯಲ್ಲಿ ಬಾಡಿಗೆದಾರರಾಗಿದ್ದಾರೆ. 2019ರ ಏಪ್ರಿಲ್‌ನಲ್ಲಿ ನೇಹಾಳಿಗೆ ಚಾಂದ್‌, ನನ್ನ ಸ್ನೇಹಿತರ ಮೂಲಕ ಜೆಟ್‌ ಏರ್‌ವೇಸ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾರೆ. ಕೆಲ ದಿನಗಳ ಬಳಿಕ ಆಕೆಗೆ ಅರ್ಮಾನ್‌ ಎಂಬಾತನನ್ನು ಚಾಂದ್‌ ಪರಿಚಯ ಮಾಡಿಸಿದ್ದಾನೆ.

 ಮುಖ ಜಜ್ಜಿದ ಸ್ಥಿತಿಯಲ್ಲಿ ಮಹಿ​ಳೆಯ ಬೆತ್ತ​ಲೆ ಶವ ಪತ್ತೆ: ಅತ್ಯಾ​ಚಾರ ಎಸಗಿ ಕೊಲೆ?..

ಈ ವೇಳೆ ಕೆಲಸದ ಭರವಸೆ ನೀಡಿದ ಅರ್ಮಾನ್‌, ಇದಕ್ಕಾಗಿ ನೇಹಾಳಕ್ಕೆ 7.10 ಲಕ್ಷ ರು. ಪಡೆದಿದ್ದ. ಆನಂತರ ದೂರವಾಣಿ ಮೂಲಕವೇ ಸಂದರ್ಶನ ನಡೆಸಿ ನಕಲಿ ನೇಮಕಾತಿ ಪ್ರಮಾಣ ಪತ್ರವನ್ನು ನೇಹಾಳಿಗೆ ಆತ ನೀಡಿದ್ದಾನೆ. 

ಕೆಲ ದಿನಗಳ ನಂತರ ಜೆಟ್‌ ಏರ್‌ವೇಸ್‌ಗೆ ಕಚೇರಿಗೆ ತೆರಳಿ ನೇಹಾ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ನನಗೆ ವಂಚಿಸಿರುವ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕೋರಮಂಗಲ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾಳೆ. ಈ ಬಗ್ಗೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.