ಉಡುಪಿ, [ಫೆ.15]: ರಸ್ತೆ ಪಕ್ಕದ ಬಂಡೆಗೆ ಟೂರಿಸ್ಟ್ ಬಸ್  ಡಿಕ್ಕಿಯಾಗಿ 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ಉಡುಪಿಯ ಕಾರ್ಕಳ ತಾಲೂಕಿನ ಮಾಳ ಬಳಿ ಸಂಭವಿಸಿದೆ.

ಇಂದು [ಶನಿವಾರ] ಮೈಸೂರಿನಿಂದ ಮಂಗಳೂರಿಗೆ ಹೊರಟ್ಟಿದ್ದ ಬಸ್ ಉಡುಪಿ-ಚಿಕ್ಕಮಗಳೂರು ಘಾಟಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ ಎಸ್.ಕೆ ಬಾರ್ಡರ್ ಸಮೀಪದ ಅಬ್ಬಾಸ್ ಕಟ್ಟಿಂಗ್ ಬಳಿ  ರಸ್ತೆಪಕ್ಕದ ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ. 

ಪ್ರವಾಸಕ್ಕಾಗಿ ಬಂದಿದ್ದ ಸುಮಾರು 35  ಜನರು ಬಸ್​ನಲ್ಲಿದ್ದರು. ಅಪಘಾತದ ತೀವ್ರತೆಗೆ ಬಸ್ಸಿನ ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಡ್ರೈವರ್ ಸಹಿತ ಆತನ ಹಿಂದಿದ್ದ 11 ಜನರು ಮೃತಪಟ್ಟಿದ್ದಾರೆ.

6 ಜನ ಪುರುಷರು ಮತ್ತು ಮೂವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯರು ಮತ್ತು ಪೊಲೀಸರು ಗಾಯಗಳು ಗಳನ್ನು ಆಸ್ಪತ್ರೆಗೆ ಸಾಗಿಸಿ ಬಸ್ಸನ್ನು ರಸ್ತೆ ಮೇಲಿಂದ ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ.