Asianet Suvarna News Asianet Suvarna News

ಹೊಸಪೇಟೆ ಬಳಿ ಭೀಕರ ಅಪಘಾತ: 7 ಜನರ ದುರ್ಮರಣ, ದೇವಸ್ಥಾನಕ್ಕೆ ಹೋದವರು ಮರಳಿ ಬರಲೇ ಇಲ್ಲ..!

ಹೊಸಪೇಟೆ ಉಕ್ಕಡ ಕೇರಿ ನಿವಾಸಿ ಗೋಣಿ ಬಸಪ್ಪ ಕುಟುಂಬದವರ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಹೊಸಪೇಟೆ ಹೊರವಲಯದ ವ್ಯಾಸನಕೇರಿ ಬಳಿ ನಡೆದ ಅಪಘಾತ. 

7 Killed in Road Accident at Hosapete in Vijayanagara grg
Author
First Published Oct 10, 2023, 9:13 AM IST

ವಿಜಯನಗರ(ಅ.10): ದೇವಸ್ಥಾನಕ್ಕೆ ಹೋಗಿ‌ ಮನೆಗೆ ಬರುವಾಗ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಏಳು‌ ಜನರು ಸಾವನ್ನಪ್ಪಿದ ಘಟನೆ ಹೊಸಪೇಟೆ ಹೊರ ವಲಯದ ವ್ಯಾಸನಕೇರಿ ಬಳಿ ನಿನ್ನೆ(ಸೋಮವಾರ) ನಡೆದಿದೆ.

ಹೊಸಪೇಟೆ ಉಕ್ಕಡ ಕೇರಿ ನಿವಾಸಿ ಗೋಣಿ ಬಸಪ್ಪ ಕುಟುಂಬದವರ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಹೊಸಪೇಟೆ ಹೊರವಲಯದ ವ್ಯಾಸನಕೇರಿ ಬಳಿ ಅಪಘಾತ ನಡೆದಿದೆ. ಎರಡು ಲಾರಿ ಮತ್ತು ಕ್ರೂಸರ್ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ ಘಟನೆಗೆ ಲಾರಿಯೊಂದರ ಎಕ್ಸಲ್ ಕಟ್ಟಾಗಿರೋದೇ ಕಾರಣ ಎನ್ನಲಾಗ್ತಿದೆ. ಸ್ಥಳದಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟೊರೋದು ಒಂದೇಡೆಯಾದ್ರೇ ಮೃತ ದೇಹ ಹೊರ ತೆಗೆಯಲು‌ ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.

Bengaluru: ಕಿಲ್ಲರ್‌ ಬಿಎಂಟಿಸಿ ಬಸ್‌ಗೆ ಮೂರು ವರ್ಷದ ಮಗು ಬಲಿ

ಇನ್ನೂ ಮೃತರನ್ನು ಉಮಾ(45), ಕೆಂಚವ್ವ(80) ಭಾಗ್ಯ(32), ಅನಿಲ್(30), ಗೋಣಿಬಸಪ್ಪ(65), ಯುವರಾಜ(4) ಭೀಮಲಿಂಗ(50) ಎಂದು ಗುರುತಿಸಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರೋ‌‌ ಇಬ್ಬರನ್ನು ಸೇರಿದಂತೆ ಮೃತ ದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ‌ಮಾಡಲಾಗಿದೆ.

Follow Us:
Download App:
  • android
  • ios