Asianet Suvarna News Asianet Suvarna News

ಕೊರೋನಾ ಜೊತೆ ಮತ್ತೊಂದು ಆತಂಕ: ಮಡಿಕೇರಿಯಲ್ಲಿ 7 ಡೆಂಘೀ ಪ್ರಕರಣ

ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಗೊಂಡಿದ್ದು, ಈಗ ಮತ್ತೊಂದು ತಲೆನೋವು ಶುರುವಾಗಿದೆ. ಜಿಲ್ಲೆಯ ನಂಜರಾಯಪಟ್ಟಣ 1, ಕೂಡಿಗೆ 3, ಸುಂಟಿಕೊಪ್ಪ 2 ಮತ್ತು ಸಂಪಾಜೆಯಲ್ಲಿ 1, ಒಟ್ಟು 7 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.

 

7 Dengue cases in Madikeri
Author
Bangalore, First Published Apr 24, 2020, 12:02 PM IST

ಮಡಿಕೇರಿ(ಏ.24): ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಗೊಂಡಿದ್ದು, ಈಗ ಮತ್ತೊಂದು ತಲೆನೋವು ಶುರುವಾಗಿದೆ. ಜಿಲ್ಲೆಯ ನಂಜರಾಯಪಟ್ಟಣ 1, ಕೂಡಿಗೆ 3, ಸುಂಟಿಕೊಪ್ಪ 2 ಮತ್ತು ಸಂಪಾಜೆಯಲ್ಲಿ 1, ಒಟ್ಟು 7 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಕೊರೋನಾ ಮುನ್ನೆಚ್ಚರಿಕೆಯ ಜೊತೆಗೆ ಡೆಂಘೀ ಬಗ್ಗೆಯೂ ಎಚ್ಚರ ವಹಿಸಲು ಜಿಲ್ಲಾಡಳಿತ ಮನವಿ ಮಾಡಿದೆ. ಆದ್ದರಿಂದ ಸಾರ್ವಜನಿಕರು ಈ ಪ್ರದೇಶಗಳ ಸುತ್ತಮುತ್ತ ಸ್ವಚ್ಛವಾಗಿಡಲು ಮತ್ತು ನೀರು ನಿಲ್ಲದಂತೆ ಎಚ್ಚರ ವಹಿಸಲು ತಿಳಿಸಲಾಗಿದೆ.

ಲಾಕ್‌ಡೌನ್‌: ಕಾರ್ಮಿಕ ಮಹಿಳೆಯ ಅಂತ್ಯಸಂಸ್ಕಾರ ನಡೆಸಿದ ಯುವಕರು

ಕಾಲ ಕಾಲಕ್ಕೆ ಆರೋಗ್ಯ ಇಲಾಖೆಯಿಂದ ನೀಡುವ ಸೂಚನೆಗಳನ್ನು ತಪ್ಪದೆ ಪಾಲಿಸುವಂತೆ ಜಿಲ್ಲಾಧಿ​ಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾದ್ಯಂತ ಜಾಗೃತಿ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಿಎಚ್‌ಒ ಡಾ. ಮೋಹನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

Follow Us:
Download App:
  • android
  • ios