ಕೊಡಗು(ಜು.19): ಕೊರೊನಾ ಕಾಟದ ನಡುವೆ ಅಮಾನವೀಯ ಕೃತ್ಯವೊಂದು ಮಡಿಕೇರಿಯಲ್ಲಿ ನಡೆದಿದೆ. ದುರುಳರು ಜಾನುವಾರುಗಳಿಗೆ ವಿಷವಿಕ್ಕಿರುವ ಸಂಶಯ ವ್ಯಕ್ತವಾಗಿದೆ.

ಕೊಡಗು ಜಿಲ್ಲೆ ಐಗೂರಿನ ಟಾಟಾ ಎಸ್ಟೇಟ್‌ನಲ್ಲಿ ಘಟನೆ ನಡೆದಿದ್ದು, 20ಕ್ಕೂ ಹೆಚ್ಚು ಜಾನುವಾರುಗಳ ಮಾರಣ ಹೋಮ ಶಂಕೆ ವ್ಯಕ್ತವಾಗಿದೆ. 7 ಹಸುಗಳ ಕಳೇಬರ ಪತ್ತೆಯಾಗಿದೆ.

ಗರ್ಭಿಣಿ ಆನೆಗೆ ಸ್ಫೋಟಕವಿಟ್ಟು ಹಣ್ಣು ನೀಡಿದ ದುರುಳರು, ನರಕವೇದನೆಯಿಂದ ಪ್ರಾಣಬಿಟ್ಟ ಗಜ!

ಬಾಳೆ ಹಣ್ಣಿನಲ್ಲಿ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಕಿರಾತಕರು ಟ್ರಾಕ್ಟರ್ ಸಹಾಯದಿಂದ ಎಸ್ಟೇಟ್ ಒಳಗೆ ಗುಂಡಿ ಮಾಡಿ ಹಾಕಿದ್ದಾರೆ. ಘಟನಾ ಸ್ಥಳದಲ್ಲಿ‌ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ.

ತೋಟದ ವ್ಯವಸ್ಥಾಪಕನನ್ನು ಜನ ತರಾಟೆಗೆ ತೆಗೆದುಕೊಂಡಿದ್ದು, ಹಸುಗಳನ್ನು ಕಳೆದುಕೊಂಡ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ.