ದಾವಣಗೆರೆ(ಜೂ.04): ನಾವು ಘೋಷಿಸಿದ್ದಂತೆಯೇ ಮೊದಲ ಹಂತದಲ್ಲಿ 4 ಕೋಟಿ ರು. ಕೊಟ್ಟು, 60 ಸಾವಿರ ಕೋವಿಡ್‌ ಲಸಿಕೆ ತರಿಸಿದ್ದು, ದಾವಣಗೆರೆ ಉತ್ತರ-ದಕ್ಷಿಣ ಕ್ಷೇತ್ರಗಳ ಜನರಿಗೆ ಉಚಿತವಾಗಿ ನೀಡಲಿದ್ದೇವೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಪುತ್ರ, ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ತಿಳಿಸಿದ್ದಾರೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 10 ಸಾವಿರ ಲಸಿಕೆ ಬಂದಿವೆ. ಇನ್ನೊಂದು ವಾರ ಅಥವಾ 15 ದಿನಗಳಲ್ಲಿ ಉಳಿದ 50 ಸಾವಿರ ಲಸಿಕೆಗಳೂ ಬರಲಿವೆ. ಕಾಂಗ್ರೆಸ್‌-ಬಿಜೆಪಿ ಹೀಗೆ ಯಾವುದೇ ಪಕ್ಷಬೇಧವಿಲ್ಲದೇ, ಎಲ್ಲರೂ ಮುಂದೆ ನಿಂತು, ಜನರಿಗೆ ಸಮರ್ಪಕವಾಗಿ ಲಸಿಕೆ ಸಿಗುವಂತೆ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ.

ಮುಸ್ಲಿಂ ಯುವಕನ ಶವ ಸಾಗಿಸಲು ಆ್ಯಂಬುಲೆನ್ಸ್‌ ಚಾಲಕರಾದ ರೇಣು

ಇಂದು(ಜೂ.4)ರಂದು ಮಧ್ಯಾಹ್ನ 12ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಅಲ್ಲೇ ದೇವಸ್ಥಾನ ಎದುರಿನ ದಾಸೋಹ ಭವನದಲ್ಲಿ ಲಸಿಕೆ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು ಎಂದು ಹೇಳಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮುಖಂಡರಾದ ಕೆ.ಸಿ.ಕೊಂಡಯ್ಯ, ಯು.ಬಿ.ವೆಂಕಟೇಶ್‌, ಸಲೀಂ ಅಹಮ್ಮದ್‌ ಭಾಗವಹಿಸುವರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona