ಕಲಬುರಗಿ: ವೆಂಟಿಲೇಟರ್‌ ಸಿಗದೆ 6 ವರ್ಷದ ಬಾಲಕ ಸಾವು

ಕಲಬುರಗಿ ನಗರದ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಭರ್ತಿ| ಚಿಕಿತ್ಸೆ ತೀರಾ ವಿಳಂಬವಾದ ಕಾರಣ ಸಾವನ್ನಪ್ಪಿದ ಬಾಲಕ| ವೆಂಟಿಲೇಟರ್‌ ಸೌಲಭ್ಯ ದೊರಕಿದ್ದರೆ ಬಾಲಕ ಬದುಕುತ್ತಿದ್ದ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ ಕುಟುಂಬಸ್ಥರು| 

6 Years Old Boy Dies due to Not Get Ventilator in Kalaburagi grg

ಕಲಬುರಗಿ(ಏ.21): ಅಪಘಾತಕ್ಕೀಡಾದ ಆರು ವರ್ಷದ ಬಾಲಕನಿಗೆ ಕಲಬುರಗಿ ನಗರದಲ್ಲಿ ವೆಂಟಿಲೇಟರ್‌ ಸಿಗದೆ ಸಾವನ್ನಪ್ಪಿದ್ದಾನೆ.

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೆ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಲಬುರಗಿ ನಗರದ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಭರ್ತಿಯಾಗಿದೆ. ಅಷ್ಟೇ ಅಲ್ಲ ವೆಂಟಿಲೇಟರ್‌ ಸಮಸ್ಯೆಯೂ ಹೆಚ್ಚಾಗಿದೆ ಎಂಬುದಕ್ಕೆ 6 ವರ್ಷದ ಬಾಲಕನೇ ಸಾವು ಸಾಕ್ಷಿಯಾಗಿದೆ.

ಒಂದ್ಕಡೆ ಆಕ್ಸಿಜನ್‌ ಸಿಗದೆ ರೋಗಿಗಳ ಸಾವು: ಇನ್ನೊಂದ್ಕಡೆ ಧೂಳು ತಿನ್ನುತ್ತಿವೆ ವೆಂಟಿಲೇಟರ್‌ಗಳು..!

ಶರಣಬಸವೇಶ್ವರ ದರ್ಶನಕ್ಕಾಗಿ ಬಳ್ಳಾರಿಯಿಂದ ಕಲಬುರಗಿಗೆ ಬಂದಿದ್ದ ಕುಟುಂಬವು ದರ್ಶನ ಮುಗಿಸಿ ಮರಳುವಾಗ ಸೆಂಟ್ರಲ್‌ ಜೈಲ್‌ ಬಳಿ ಬಾಲಕ ಮೂತ್ರ ವಿಸರ್ಜನೆಗಾಗಿ ವಾಹನ ನಿಲ್ಲಿಸಿದ್ದರು. ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಬಾಲಕ ಪ್ರಜ್ವಲನನ್ನು ಆಸ್ಪತ್ರೆಗೆ ದಾಖಲಿಸಲು ಕುಟುಂಬ ಪರದಾಡಿದೆ. ಎಲ್ಲಿಯೂ ವೆಂಟಿಲೇಟರ್‌ ಸಿಗದೆ ಇರುವುದರಿಂದ ಬಾಲಕ ಸಾವನ್ನಪ್ಪಿದ್ದಾನೆ. ಚಿಕಿತ್ಸೆ ತೀರಾ ವಿಳಂಬವಾದ ಕಾರಣ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಮೃತ ಬಾಲಕನ ಪಾಲಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೆಂಟಿಲೇಟರ್‌ ಸೌಲಭ್ಯ ದೊರಕಿದ್ದರೆ ಬದುಕುತ್ತಿದ್ದ ಕುಟುಂಬರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
 

Latest Videos
Follow Us:
Download App:
  • android
  • ios