ಶಿಡ್ಲಘಟ್ಟ: ಮೇವು ಮೇಯುವಾಗ ದಿಢೀರ್ ಹೊಟ್ಟೆ ಒಡೆದು 6 ಕುರಿಗಳ ಸಾವು

ಶಿಡ್ಲಘಟ್ಟ ತಾಲೂಕಿನ ಯಣ್ಣೂರು ಗ್ರಾಮದ ರೈತ ಎಂ. ನಾರಾಯಣಸ್ವಾಮಿ ಅವರಿಗೆ ಸೇರಿದ ಈ ಕುರಿಗಳು ದಿಢೀರ್ ಹೊಟ್ಟೆ ಒಡೆದುಕೊಂಡು ಮೃತಪಟ್ಟಿರುವುದು ಗ್ರಾಮದ ರೈತರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಕುರಿಗಳನ್ನು ಮೇಯಿಸಲು ರೈತರು ಹಿಂದೇಟು ಹಾಕುವಂತಾಗಿದೆ.

6 Sheep Dies due to Stomach Rupture while Grazing at Sidlaghatta in Chikkaballapur grg

ಶಿಡ್ಲಘಟ್ಟ(ಮೇ.30):  ಇದ್ದಕಿದ್ದಂತೆ ಆರಕ್ಕೂ ಹೆಚ್ಚು ಕುರಿಗಳ ಹೊಟ್ಟೆ ಸಿಡಿದುಕೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಯಣ್ಣೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ದಿಢೀರ್ ಅಂತ ಹುಲ್ಲು ಮೇಯುತ್ತಿದ್ದ ಆರು ಕುರಿಗಳು ಸಾವನ್ನಪ್ಪಿವೆ.

ತಾಲೂಕಿನ ಯಣ್ಣೂರು ಗ್ರಾಮದ ರೈತ ಎಂ. ನಾರಾಯಣಸ್ವಾಮಿ ಅವರಿಗೆ ಸೇರಿದ ಈ ಕುರಿಗಳು ದಿಢೀರ್ ಹೊಟ್ಟೆ ಒಡೆದುಕೊಂಡು ಮೃತಪಟ್ಟಿರುವುದು ಗ್ರಾಮದ ರೈತರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಕುರಿಗಳನ್ನು ಮೇಯಿಸಲು ರೈತರು ಹಿಂದೇಟು ಹಾಕುವಂತಾಗಿದೆ.

ಚಿಕ್ಕಬಳ್ಳಾಪುರ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ಜೋರು - ಹತ್ತರಿಂದ ಮೂವತ್ತು ಲಕ್ಷದವರೆಗೆ ಬಾಜಿ

ಸುಮಾರು 50ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸಲು ಹೊರಗಡೆ ಹೋದಾಗ ಇತ್ತೀಚೆಗೆ ಬಿದ್ದ ಮಳೆಯಿಂದ ಚಿಗುರು ಬಂದಿರುವ ಹುಲ್ಲನ್ನು ಮೇಯುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ಸ್ಥಳೀಯರು ಪಶು ಇಲಾಖೆಯವರಿಗೆ ಮಾಹಿತಿ ನೀಡಿದರು. ನಂತರ ಸ್ಥಳೀಯ ಪಶು ವೈದ್ಯರು ಸ್ಥಳಕ್ಕೆ ಧಾವಿಸಿ ಪ್ರಕರಣವನ್ನು ದಾಖಲಿಸಿಕೊಂಡರು. ಇನ್ನು ಉಳಿದ ಕುರಿಗಳಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಯಿತು. ಘಟನೆಯಿಂದ ರೈತ ನಾರಾಯಣಸ್ವಾಮಿಗೆ ಸುಮಾರು 60 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕೆಂದು ಅವರು ಕೋರಿದರು.

ಹೆಚ್ಚು ಮೇವು ತಿಂದಿದ್ದರಿಂದ ಸಾವು:

ರೈತ ನಾರಾಯಣಸ್ವಾಮಿ ಅವರು ಸಾಕಿದ 50 ಕುರಿಗಳಲ್ಲಿ ಮೃತಪಟ್ಟ ಆರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ ಎಳೆಯಾಗಿ ಬೆಳೆದಿದ್ದ ರಾಗಿ ಪೈರು ತಿಂದು, ಹೊಟ್ಟೆ ತುಂಬಿದರೂ ಸಹ ಹೆಚ್ಚು ಮೇವನ್ನು ತಿಂದು 6 ಕುರಿಗಳು ಬಲಿಯಾಗಿವೆ. ಬಲಿಯಾದಂತಹ ಕುರಿಗಳಿಗೆ ಸರ್ಕಾರದಿಂದ ಅನುಗ್ರಹ ಯೋಜನೆಯಲ್ಲಿ ಒಂದು ಕುರಿಗೆ 5 ಸಾವಿರ ರುಪಾಯಿ ಪರಿಹಾರವನ್ನು ಫಲಾನುಭವಿಗೆ ಇಲಾಖೆಯಿಂದ ಕೊಡಿಸಲು ಪ್ರಯತ್ನಿಸುತ್ತೇವೆಂದು ತಾಲೂಕಿನ ಪಶು ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios