ತುಮಕೂರು[ಫೆ.11]: ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷನೇ ಬೆಟ್ಟಿಂಗ್‌ ದಂಧೆಯಲ್ಲಿ ಸಿಲುಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಆನ್‌ಲೈನ್‌ ಮೂಲಕ ಕುದುರೆ ರೇಸ್‌ ಹಾಗೂ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಉಪನ್ಯಾಸಕ ಸೇರಿ 6 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಆನ್‌ಲೖನ್ ಬೆಟ್ಟಿಂಗ್‌ ಕ್ರೇಜ್‌ ಆಗಿ ಬೆಳೆದಿದ್ದು, ಇಂಟರ್‌ನೆಟ್ ಮೂಲಕ ಬೆಟ್ಟಿಂಗ್‌ ದಂಧೆ ವ್ಯಾಪಕವಾಗಿ ನಡೆಯುತ್ತಿರುತ್ತದೆ. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕಾದ ಉಪನ್ಯಾಸಕನೇ ಈ ರೀತಿ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಾತ್ರಿಯಲ್ಲಿ ಜಿಂಕೆ ಪ್ರಾಣ ಉಳಿಸಲು ಹೋಗಿ ಶಿಕ್ಷಕ ಸಾವು

ಮೊಬೈಲ್‌ ಮೂಲಕ ಆನ್‌ಲೈನ್‌ ಜೂಜು ಆಡುತ್ತಿದ್ದರು ಎಂಬ ಆರೋಪದ ಮೇಲೆ ತುಮಕೂರಿನ ಸಿಇಎನ್‌ ಪೊಲೀಸರು ಖಾಸಗಿ ಕಾಲೇಜಿನ ಉಪನ್ಯಾಸಕ ಮಹಂತೇಶ್‌ ಸೇರಿದಂತೆ ರಾಜೇಶ್‌, ದಿಲೀಪ್‌ ಕುಮಾರ್‌, ಅರ್ಜುನ್‌, ಅಶ್ವಿನ್‌, ಧನುಷ್‌ ಅವರನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳು ತುಮಕೂರು ಶಿರಾಗೇಚ್‌ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಬಸವರಾಜು, ನಿತಿನ್‌, ರಂಜಿತ್‌ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದರು ಎಂದು ತಿಳಿದು ಬಂದಿದೆ.