ತುಮಕೂರು[ಫೆ.11]: ಶಿರಾ ಅಡ್ಡ ಬಂದ ಜಿಂಕೆಯ ಪ್ರಾಣ ಉಳಿಸಲು ಹೋದ ಶಿಕ್ಷಕರೊಬ್ಬರು ಅಯಾ ತಪ್ಪಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಕ್ಯಾದಿಗುಂಟೆ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.

ತಾಲೂಕಿನ ನಾದೂರು ಗ್ರಾಮದ ನಿವಾಸಿ ರಾಜಣ್ಣ(53) ಮೃತ ಶಿಕ್ಷಕ. ಇವರು ಬರಗೂರು ರಂಗಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ರಾತ್ರಿ ಹೊತ್ತು ಪ್ರಯಾಣಿಸುವಾಗ ಘಟನೆ ನಡೆದಿದೆ.

ಅಭಿಮಾನಿಗಳ ಅಂಗೈನಲ್ಲಿ ಐಂದ್ರಿತಾ, ಹೊಸ ಅವತಾರ್ ಏನ್ ಗೊತ್ತಾ!

ಕಾರೇಹಳ್ಳಿ ಗ್ರಾಮದಿಂದ ಸ್ವಗ್ರಾಮ ನಾದೂರು ಗ್ರಾಮಕ್ಕೆ ರಾತ್ರಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ರಾಜಣ್ಣ ಕ್ಯಾದಿಗುಂಟೆ ಗ್ರಾಮದ ಹತ್ತಿರ ಏಕಾಏಕಿ ಜಿಂಕೆಯೊಂದು ಅಡ್ಡ ಬಂದ ಪರಿಣಾಮ ಜಿಂಕೆಯನ್ನು ಪಾರು ಮಾಡಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಇದರಿಂದ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ರಾಜಣ್ಣರನ್ನು ಸಾರ್ವಜನಿಕರು ಅಸ್ಪತ್ರೆ ದಾಖಲಿಸುವಷ್ಟರಲ್ಲಿ ಸಾವನಪ್ಪಿದ್ದಾರೆ ಎನ್ನಲಾಗಿದೆ. ಪಟ್ಟನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.