ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೋರ್ವಳಿಗೆ ವಂಚಿಸಿದ ಭೂಪನೋರ್ವ ಆಕೆಯಿಂದ 6 ಲಕ್ಷ ಹಣ ಸುಲಿದುಕೊಂಡು ಬಳಿಕ ಮೊಬೈಲ್ ಸಂಪರ್ಕವನ್ನೇ ಕಡಿತ ಮಾಡಿರುವ ಪ್ರಕರಣವೀಗ ಬೆಳಕಿಗೆ ಬಂದಿದೆ.
ಬೆಂಗಳೂರು [ನ.28]: ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿನಿಯೊಬ್ಬರಿಂದ 6 ಲಕ್ಷ ರು. ಸುಲಿದು ಕಿಡಿಗೇಡಿ ವಂಚಿಸಿರುವ ಘಟನೆ ಗಿರಿನಗರದಲ್ಲಿ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ 22 ವರ್ಷದ ವಿದ್ಯಾರ್ಥಿ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕೃತ್ಯ ಎಸಗಿ ತಪ್ಪಿಸಿಕೊಂಡಿರುವ ಗಿರಿನಗರದ ಸಂಜೀವ್ ಕುಮಾರ್ ಶ್ರೀವಾಸ್‌್ತ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2018ರಲ್ಲಿ ವೈದ್ಯಕೀಯ ಸೀಟು ಪ್ರವೇಶಕ್ಕೆ ಸಂತ್ರಸ್ತೆ ಅರ್ಜಿ ಸಲ್ಲಿಸಿದ್ದರು. ಆಗ ಆಕೆಯನ್ನು ಮೊಬೈಲ್ ಮೂಲಕ ಸಂಪರ್ಕಿಸಿದ ಆರೋಪಿ, ಹೆಸರಾಂತ ಕಾಲೇಜಿನಲ್ಲಿ ಸೀಟ್ ಕೊಡಿಸುವುದಾಗಿ ಭರವಸೆ ನೀಡಿದ್ದ. ನನಗೆ ಆಡಳಿತ ಮಂಡಳಿ ಸದಸ್ಯರ ಪರಿಚಯವಿದೆ. ನೀವು 10 ಲಕ್ಷ ನೀಡಿದರೆ ಸೀಟು ಪಕ್ಕಾ ಎಂದಿದ್ದ.
ಇದು ಬರೀ ಶಾಸಕರಲ್ಲ, ಮಂತ್ರಿ ಚುನಾವಣೆ'..!...
ಈ ಮಾತು ನಂಬಿದ ವಿದ್ಯಾರ್ಥಿನಿ, ಆರೋಪಿಗೆ ಆರು ಕೊಡಲು ನಿರ್ಧರಿಸಿದ್ದರು. ಕೊನೆಗೆ ಚೆಕ್ ಮೂಲಕ ಆರೋಪಿಗೆ ಹಣ ಸಂದಾಯವಾಯಿತು. ಹಣ ಸಿಕ್ಕಿದ ನಂತರ ವಿದ್ಯಾರ್ಥಿಯ ಸಂಪರ್ಕವನ್ನು ಆತ ಸ್ಥಗಿತಗೊಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
