ಚಲಿಸುತ್ತಿದ್ದ ಇಂಡಿಕಾ ಕಾರಿನ ಟೈರ್‌ ಸ್ಫೋಟಗೊಂಡ ಪರಿಣಾಮ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ 6 ಜನ ಮೃತಪಟ್ಟಿದ್ದಾರೆ. 

ಕೊಪ್ಪಳ(ಮೇ.28): ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕಲಕೇರಿ ಬಳಿ ಇಂದು(ಭಾನುವಾರ) ನಡೆದಿದೆ. ಇಂಡಿಕಾ ಕಾರಿನಲ್ಲಿದ್ದ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೃತರನ್ನ ರಾಜಪ್ಪ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ ಹಾಗೂ ರಶ್ಮಿಕಾ ಅಂತ ಗುರುತಿಸಲಾಗಿದೆ. ಚಲಿಸುತ್ತಿದ್ದ ಇಂಡಿಕಾ ಕಾರಿನ ಟೈರ್‌ ಸ್ಫೋಟಗೊಂಡ ಪರಿಣಾಮ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ 6 ಜನ ಮೃತಪಟ್ಟಿದ್ದಾರೆ. 

Caught On Cam: ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಸ್ಥಳದಲ್ಲಿ ಮಲಗಿದ್ದ 3 ವರ್ಷದ ಮಗುವಿನ ಮೇಲೆ ಹರಿದ ಕಾರು!

ಇಂಡಿಕಾ ಕಾರು ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿತ್ತು ಅಂತ ತಿಳಿದು ಬಂದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.