ಹೈದರಾಬಾದ್‌ನಲ್ಲಿ ದಾರುಣ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್‌ನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಮಲಗಿದ್ದ ಮೂರು ವರ್ಷದ ಮಗುವಿನ ಮೇಲೆ ಕಾರು ಹರಿದಿದೆ. ಮಗು ಮಲಗಿರುವುದು ಕಾರು ಚಾಲಕನಿಗೆ ತಿಳಿಯದೇ ಇದ್ದದ್ದು ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ (ಮೇ.25): ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಮಲಗಿದ್ದ ಮೂರು ವರ್ಷದ ಬಾಲಕಿಯ ಮೇಲೆ ಬುಧವಾರ ಸಂಜೆ ಕಾರು ಹರಿದಿದ್ದು, ಪುಟ್ಟ ಬಾಲಕಿ ಸ್ಥಳದಲ್ಲಿಯೇ ಸಾವು ಕಂಡಿದ್ದಾಳೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಇದರ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಯಾತ್‌ನಗರ ಪೊಲೀಸ್ ಇನ್ಸ್‌ಪೆಕ್ಟರ್ ಎಚ್ ವೆಂಕಟೇಶ್ವರಲು ಮಾತನಾಡಿದ್ದು, ಬಾಲಕಿಯ ಪೋಷಕರು ಕರ್ನಾಟಕದ ಕಲಬುರಗಿಯ ಕೂಲಿ ಕಾರ್ಮಿಕರಾಗಿದ್ದು, ಬಾಲಾಜಿ ಆರ್ಕೇಡ್ ಅಪಾರ್ಟ್‌ಮೆಂಟ್ ಪಕ್ಕದ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊರಗೆ ಬಿಸಿಲಿದ್ದ ಕಾರಣ ಮೂರು ವರ್ಷದ ಮಗಳನ್ನು ಅಪಾರ್ಟ್‌ಮೆಂಟ್‌ನ ಕಾರ್ ಪಾರ್ಕಿಂಗ್ ಸ್ಥಳದ ನೆರಳಿನಲ್ಲಿ ಮಲಗಿದ್ದರು' ಎಂದು ಪೊಲೀಸರು ಹೇಳಿದ್ದಾರೆ. ಮಗುವಿನ ತಾಯಿ ಕವಿತಾ ಸುದ್ದಿಗಾರರೊಂದಿಗೆ ನೋವಿನಲ್ಲಿಯೇ ಮಾತನಾಡಿದ್ದು, ''ಅಪಾರ್ಟ್‌ಮೆಂಟ್‌ನ ವಾಚ್‌ಮನ್ ಕುಟುಂಬಕ್ಕೆ ನನ್ನ ಮಗಳನ್ನು ನೋಡಿಕೊಳ್ಳುವಂತೆ ಹೇಳಿದ್ದೆ. ಅವಳು ಮಲಗಿದ್ದಾಳೋ, ಇಲ್ಲವೇ ಎಚ್ಚರಗೊಂಡಳೋ ಎನ್ನುವುದನ್ನು ನೋಡಲು ನಾನೇ ಎರಡು ಬಾರಿ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳಕ್ಕೆ ಹೋಗಿದ್ದೆ. ಆದರೆ, ಕೆಲವೇ ಸೆಕೆಂಡ್‌ಗಳಲ್ಲಿ ಈ ದುರಂತ ಸಂಭವಿಸಿದೆ' ಎಂದು ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್‌ಲ್ಲಿ ವಾಸವಾಗಿರುವ ಹರಿ ರಾಮಕೃಷ್ಣ ತಮ್ಮ ಎಸ್‌ಯುವಿ ಕಾರ್‌ಅನ್ನು ಅಪಾರ್ಟ್‌ರ್ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲು ಬಂದಿದ್ದರು. ಈ ವೇಳೆ ಅಲ್ಲಿ ಮಗು ಮಲಗಿರುವುದನ್ನು ಅವರು ಗಮನಿಸಿರಲಿಲ್ಲ. ಕಾರ್‌ಅನ್ನು ಪಾರ್ಕ್ ಮಾಡಲು ಮುಂದುವರಿದಾಗಿ ಈ ದುರಂತ ಸಂಭವಿಸಿದೆ. ಕಾರಿನ ಮಾಲೀಕರು ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ ಎಂದು ಎರಡು ಮಕ್ಕಳ ತಾಯಿಯಾಗಿರುವ ಕವಿತಾ ಹೇಳಿದ್ದಾರೆ.
ಪಾರ್ಕಿಂಗ್ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾದಲ್ಲಿ ಈ ಅಪಘಾತ ಸೆರೆಯಾಗಿದೆ. ರಾಮಕೃಷ್ಣ ಇಂಟೀರಿಯರ್ ಡಿಸೈನರ್ ಆಗಿದ್ದು, ಅವರ ಪತ್ನಿ ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
UPSC Mystery: ಒಂದೇ ಸ್ಥಾನ, ಒಂದೇ ರೋಲ್ ನಂಬರ್, ಇಬ್ಬರು ಯುಪಿಎಸ್‌ಸಿ ಅಭ್ಯರ್ಥಿಗಳು!
"ನಾವು ರಾಮಕೃಷ್ಣ ವಿರುದ್ಧ ಸೆಕ್ಷನ್ 304-A (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಹುಡುಗಿ ಬೆಡ್ ಶೀಟ್‌ನಿಂದ ಮುಚ್ಚಲ್ಪಟ್ಟಿದ್ದರಿಂದ ತಾನು ಗಮನಿಸಲಿಲ್ಲ ಎಂದು ಚಾಲಕ ನಮಗೆ ತಿಳಿಸಿದ್ದಾನೆ" ಎಂದು ಇನ್ಸ್‌ಪೆಕ್ಟರ್ ಹೇಳಿದರು.
'ವಿಜ್ಞಾನದ ತತ್ವಗಳ ಮೂಲ ವೇದಗಳು..', ಇಸ್ರೋ ಚೇರ್ಮನ್ ಎಸ್ ಸೋಮನಾಥ್!
