ಕೊಂಡುಕುರಿ ಅರಣ್ಯಾಧಾಮದಲ್ಲಿ 6 ಅಡಿ ಉದ್ದದ ಬೃಹತ್ ಉಡ ಪತ್ತೆ
ಅಳವಿನಂಚಿನ ಪ್ರಾಣಿಗಳಲ್ಲಿ ಉಡ ಕೂಡಾ ಒಂದು. ಇತ್ತೀಚೆಗೆ ಕೊಂಡುಕುರಿ ಅರಣ್ಯಧಾಮದಲ್ಲಿ ಸುಮಾರು 6 ಅಡಿ ಉದ್ದದ ಉಡ ಪತ್ತೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಜಗಳೂರು(ಜೂ.06): ತಾಲೂಕಿನ ಕೊಂಡು ಕುರಿ ಅರಣ್ಯಧಾಮದಲ್ಲಿ ಆರು ಅಡಿ ಉದ್ದದ ಬೃಹತ್ ಉಡವೊಂದು ಅರಣ್ಯದ ಮಧ್ಯ ಭಾಗದಲ್ಲಿ ಕಂಡು ಬಂದಿದೆ. ಅರಣ್ಯಧಾಮದಲ್ಲಿ ಮರಗಳಿಗೆ ಹಾಕಿರುವ ಸಿಸಿ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ.
ಏಷ್ಯಾ ಖಂಡದಲ್ಲಿಯೇ ಏಕೈಕ ಕೊಂಡುಕುರಿ ಅರಣ್ಯಧಾಮವಾಗಿರುವ ತಾಲೂಕಿನ ಮಡ್ರಳ್ಳಿ ಸಂರಕ್ಷಿತ ಕೊಂಡುಕುರಿ ಅರಣ್ಯಧಾಮದಲ್ಲಿ ಅಪರೂಪದ ಕೊಂಡುಕುರಿಗಳು ಸೇರಿದಂತೆ ನಕ್ಷತ್ರ ಆಮೆ, ಚಿಪ್ಪುಹಂದಿ, ನವಿಲು, ಜಿಂಕೆ, ಚಿರತೆ ಸೇರಿದಂತೆ ಔಷೕಯ ಗುಣವುಳ್ಳ ಸಸ್ಯ ಸಂಕುಲಗಳಿವೆ. ಇತ್ತೀಚಿಗೆ ಇಲ್ಲಿನ ಮರಕ್ಕೆ ಅಳವಡಿಸಲಾದ ಸಿಸಿ ಕ್ಯಾಮೆರಾ ಕಣ್ಣಿಗೆ ಆರು ಅಡಿ ಉದ್ದವುಳ್ಳ ಬೃಹತ್ ಉಡ ಗೋಚರವಾಗಿದೆ. ಇದನ್ನು ಇಂಡಿಯನ್ ಮಾನಿಟರ್ ಲಿಜಾರ್ಡ್ ಅಥವಾ ಬೆಂಗಾಲಿ ಮಾನಿಟರ್ ಎಂದು ಕರೆಯಲಾಗುವ ಈ ಉಡಕ್ಕೆ ವೈಜ್ಞಾನಿಕವಾಗಿ ವೆರಾನಸ್ ಬೆಂಗಾಲೆನ್ಸಿಸ್ ಎಂದು ಕರೆಯಲಾಗುತ್ತದೆ.
ವ್ಯಕ್ತಿ ಕುತ್ತಿಗೆಯನ್ನು ಮಂಡಿಯಿಂದ ಅದುಮಿದ ಪೊಲೀಸ್ ಪೇದೆ!
ಉಡದಿಂದ ತೆಗೆದ ಎಣ್ಣೆಯು ಹಲವು ನೋವುಗಳಿಗೆ ರಾಮಬಾಣವಾಗಿದೆ ಎಂಬುದು ಬಹು ಹಿಂದಿನಿಂದಲೂ ಜನರ ಮನಸ್ಸಿನಲ್ಲಿ ಬೇರೂರಿದೆ. ಕಳ್ಳ ಬೇಟೆಯ ಪರಿಣಾಮವಾಗಿ ಅಪರೂಪದ ಈ ಜೀವ ಸಂತತಿ ಕ್ಷೀಣಿಸುವಂತಾಗಿದೆ. ಇತ್ತೀಚಿಗೆ ಅರಣ್ಯಧಾಮದಲ್ಲಿ ಪ್ರಾಣಿ ಸಂಕುಲಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಾಣಿ ಪಕ್ಷಿಗಳನ್ನು ಬೇಟೆಯಾಡದಂತೆ ಹಗಲಿರುಳು ಇಲಾಖೆ ಸಿಬ್ಬಂದಿ ಕಣ್ಗಾವಲಿರಿಸಿದ್ದಾರೆಂದು ಆರ್‌ಎಫ್‌ಓ ಶಿವಕುಮಾರ್ ತಿಳಿಸಿದರು.